ಹೆರಾಯಿನ್‌ ಕೇಸ್‌ನಲ್ಲಿ 20 ವರ್ಷ ಜೈಲಿನಲ್ಲಿದ್ದ ವ್ಯಕ್ತಿ, ತನಿಖೆಯಾದ ನಂತ್ರ ಗೊತ್ತಾಯ್ತು ಅದು ಡ್ರಗ್ಸ್‌ ಅಲ್ಲ ಪೌಡರ್‌!

By Santosh NaikFirst Published May 22, 2023, 6:59 PM IST
Highlights


20 ವರ್ಷದ ಹಿಂದೆ ಬರೀ 25 ಗ್ರಾಂ ಹೆರಾಯಿನ್‌ ಸಾಗಾಟ ಮಾಡಿದ್ದ ಎನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬ ಜೈಲುಪಾಲಾಗಿದ್ದ. ಆದರೆ, ಸಾಕಷ್ಟು ತನಿಖೆಯ ಬಳಿಕ, ಇದು ಹೆರಾಯಿನ್‌ ಅಲ್ಲ ಪೌಡರ್‌ ಎನ್ನುವುದು ಗೊತ್ತಾಗಿದೆ. ಕೊನೆಗೆ 20 ವರ್ಷದ ಬಳಿಕ ವ್ಯಕ್ತಿ ಜೈಲಿನಿಂದ ಹೊರಬಂದಿದ್ದಾನೆ.

ನವದೆಹಲಿ (ಮೇ.22): ಉತ್ತರ ಪ್ರದೇಶ ಮೂಲಕ ವ್ಯಕ್ತಿಯೊಬ್ಬ ಇತ್ತೀಚೆಗೆ 20 ವರ್ಷಗಳ ಬಳಿಕ ಜೈಲಿನಿಂದ ಹೊರಬಂದಿದ್ದರು. ಹಾಗಿದ್ದರೆ ಅವರು ಮಾಡಿದ್ದ ಅಪರಾಧವೇನು? ನಿಜವಾದ ವಿಷಯ ಏನೆಂದರೆ, ಪಾಪ ಏನೂ ಅಪರಾಧ ಮಾಡದೇ ಆತ 20 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. ಈಗ ಪ್ರಶ್ನೆ ಏನೆಂದರೆ, ಆತ ಯಾವುದೇ ಅಪರಾಧ ಮಾಡದಿದ್ದಲ್ಲಿ ತನ್ನ ಅಮೂಲ್ಯ ಜೀವನದ ಎರಡು ದಶಕಗಳನ್ನು ಕಂಬಿಗಳ ಏಕೆ ಕಳೆದಿದ್ದ ಅನ್ನೋದು. ನಿಜ ವಿಚಾರವೇನೆಂದರೆ, 2003ರ ಮಾರ್ಚ್‌ 14 ರಂದು ಅಬ್ದುಲ್ಲಾ ಅಯ್ಯುಬ್‌ ಎನ್ನುವ ವ್ಯಕ್ತಿ 25 ಗ್ರಾಮ್‌ ಹೆರಾಯಿನ್‌ ಸಾಗಾಟ ಮಾಡಿದ್ದ ಎನ್ನುವ ಕಾರಣಕ್ಕಾಗಿ ಬಂಧಿತನಾಗಿದ್ದ. ಆದರೆ, ಆತನಿಂದ ವಶಪಡಿಸಿಕೊಂಡಿದ್ದ ವ್ಸತು ಹೆರಾಯಿನ್‌ ಅಲ್ಲ ಮತ್ತು ಆತನಲ್ಲಿ ಇದ್ದದ್ದು ಅಂಗಡಿಗಳಲ್ಲಿ ಮಾರಾಟ ಮಾಡಲಾಗುವ ಸಾಮಾನ್ಯ ಪುಡಿ ಎಂದು ಕೋರ್ಟ್‌ನಲ್ಲಿ ಸಾಬೀತು ಮಾಡಲು ಅಯೂಬ್‌ ಬರೋಬ್ಬರಿ ಎರಡು ದಶಕಗಳನ್ನು ತೆಗೆದುಕೊಂಡಿದ್ದಾರೆ.

ಬಾಡಿಗೆಯನ್ನು ಪಾವತಿ ಮಾಡಲು ವಿಫಲವಾದ ಕಾರಣಕ್ಕೆ ಖುರ್ಷಿದ್‌ ಎನ್ನುವ ಪೊಲೀಸ್‌ ಪೇದೆಯನ್ನು ತನ್ನ ಕಕ್ಷಿದಾರನಾದ ಅಯೂಬ್‌ ಮನೆಯಿಂದ ಹೊರಹಾಕಿದ್ದ ಎಂದು ಅಯೂಬ್‌ ಪರ ವಕೀಲ ಪ್ರೇಮ್‌ ಪ್ರಕಾಶ್‌ ಶ್ರೀವಾಸ್ತವ  ತಿಳಿಸಿದ್ದಾರೆ. ಈತನ ವಿರುದ್ಧ ಸೇಡು ತೀರಿಸಿಕೊಳ್ಳಲೇಬೇಕು ಎನ್ನುವ ಕಾರಣಕ್ಕೆ ಖುರ್ಷಿದ್‌ ಇತರ ಮೂವರು ಪೊಲೀಸ್‌ ಅಧಿಕಾರಿಗಳೊಂದಿಗೆ ಅಯೂಬ್‌ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸಿದ್ದ ಎಂದು ಶ್ರೀವಾಸ್ತವ ತಿಳಿಸಿದ್ದಾರೆ.

ಅಯೂಬ್‌ನ ಪರ ವಕೀಲರ ಪ್ರಕಾರ, ಈ ಪೊಲೀಸರು ಅಯೂಬ್‌ನನ್ನು ಬಂಧಿಸಲು ಹೆರಾಯಿನ್‌ ಸಾಗಾಟದ ನಕಲಿ ಕೇಸ್‌ಅನ್ನು ದಾಖಲು ಮಾಡಿದ್ದರು ಅದಲ್ಲದೆ ವಿಧಿವಿಜ್ಞಾನದ ಸಾಕ್ಷ್ಯವನ್ನು ಕೂಡ ತಿರುಚಿ ಹಾಕದ್ದರು. ವಿಚಾರಣೆಯ ಸಮಯದಲ್ಲಿ, ಬಸ್ತಿಯಲ್ಲಿನ ವಿಧಿವಿಜ್ಞಾನ ಪ್ರಯೋಗಾಲಯವು ವಶಪಡಿಸಿಕೊಂಡ ವಸ್ತು ಹೆರಾಯಿನ್ ಎಂದು ತಿಳಿಸಿದ್ದಾಗಿ ಕೋರ್ಟ್‌ಗೆ ಮಾಹಿತಿ ನೀಡಿದ್ದರು. ಆದರೆ ವಸ್ತುವನ್ನು ಲಕ್ನೋಗೆ ಕಳುಹಿಸಿದಾಗ ಅದು ಹೆರಾಯಿನ್ ಅಲ್ಲ ಎಂದು ದೃಢಪಡಿಸಿದಾಗ ನಿಜವಾದ ಕಥೆ ಬೆಳಕಿಗೆ ಬಂದಿದೆ. ಹಾಗಿದ್ದರೂ, ಈ  ಮಾದರಿಯನ್ನು ದೆಹಲಿಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ, ಅಲ್ಲಿಯೂ ಈ ಪೊಲೀಸರು ಸಾಕ್ಷ್ಯವನ್ನು ತಿರುಚಿದ್ದಾರೆ.

ವರದಿಗಳು ವ್ಯತಿರಿಕ್ತವಾಗಿ ಬಂದ ಹಿನ್ನಲೆಯಲ್ಲಿ ನ್ಯಾಯಾಲಯವು ಲಕ್ನೋದಿಂದ ತಜ್ಞ ವಿಜ್ಞಾನಿಗಳನ್ನು ಕರೆಸಿತ್ತು. ಇದರ ಪರೀಕ್ಷೆ ಮಾಡಿದ್ದ ವೈದ್ಯರು ಹೆರಾಯಿನ್‌ ಎಂದು ಹೇಳಿರುವ ವಸ್ತು ನಕಲಿಯಾಗಿದ್ದು, ಕಂದು ಬಣ್ಣವನ್ನು ಹೊಂದಿದೆ ಎಂದಿದ್ದಾರೆ. ಅವರ ಪ್ರಕಾರ, ಹೆರಾಯಿನ್‌ ಡ್ರಗ್‌ ಅಚ್ಚ ಬಿಳುಪಿನಿಂದ ಕೂಡಿರುತ್ತದೆ. ಯಾವುದೇ ಹವಾಮಾನದಲ್ಲಿ ಯಾವುದೇ ಕಾಲಕ್ಕೂ ಇದು ತನ್ನ ಬಣ್ಣವನ್ನು ಬದಲಾವಣೆ ಮಾಡುವುದಿಲ್ಲ ಎಂದಿದ್ದಾರೆ.

ಕೇರಳದಲ್ಲಿ ಸಿಕ್ಕ ಡ್ರಗ್ಸ್‌ ಮೌಲ್ಯ 12 ಸಾವಿರ ಕೋಟಿ ಅಲ್ಲ ಬರೋಬ್ಬರಿ 25 ಸಾವಿರ ಕೋಟಿ ರೂ: ಎನ್‌ಸಿಬಿ

ತಜ್ಞರು ನೀಡಿದ ಹೇಳಿಕೆಯ ಬೆನ್ನಲ್ಲಿಯೇ ನ್ಯಾಯಮೂರ್ತಿ ವಿಜಯ್‌ ಕುಮಾರ್‌ ಕಟಿಯಾರ್‌, ಸುಳ್ಳು ಕೇಸ್‌ನಲ್ಲಿ ಜೈಲಿನಲ್ಲಿದ್ದ ಅಯೂಬ್‌ನನ್ನು ಖುಲಾಸೆ ಮಾಡಿದ್ದಾರೆ. ಪ್ರಾಸಿಕ್ಯೂಷನ್‌ಗೆ ದೊಡ್ಡ ಮಟ್ಟದಲ್ಲಿ ಛೀಮಾರಿ ಹಾಕಿದ ನ್ಯಾಯಾಧೀಶರು, ಪೊಲೀಸರು ಇಡೀ ವಿಷಯವನ್ನು ತಪ್ಪಾಗಿ ನಿರೂಪಣೆ ಮಾಡಿದ್ದಾರೆ. ಇಡೀ ನ್ಯಾಯಾಲಯದ ಸಮಯವನ್ನು ಸಂಪೂರ್ಣವಾಗಿ ವ್ಯರ್ಥ ಮಾಡಿದ್ದಾರೆ ಎಂದು ಹೇಳಿದರು.

 

Bengaluru- ಸ್ಲಂಗಳಲ್ಲಿ ಸಿಕ್ತು 20 ಕೋಟಿ ಮೌಲ್ಯದ ಡ್ರಗ್ಸ್! ಚುನಾವಣೇಲಿ ಡ್ರಗ್ಸ್‌ ನಶೆಯಲ್ಲಿ ತೇಲಾಡಲು ಪ್ಲ್ಯಾನ್‌!

click me!