ವಧು, ಪೋಷಕರು, ಪೂಜಾರಿ ಎಲ್ಲರೂ ನಕಲಿ.. ಮದುವೆ ಆಸೆಗೆ ಹಣ ಕಳೆದುಕೊಂಡ!

By Suvarna News  |  First Published Apr 13, 2021, 4:52 PM IST

ನಕಲಿ ಮದುವೆ ಕತೆ/ ಮದುವೆ ಮನೆಯಿಂದ ಹೆಣ್ಣಿನ ಕಡೆಯವರೆಲ್ಲರೂ ಎಸ್ಕೇಪ್/ ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ/ ಆಭರಣ ಮತ್ತು ನಗದು ತೆಗೆದುಕೊಂಡು ಪರಾರಿ


ಮುಜಫರ್ ನಗರ: (ಏ.  13) ಇದೊಂದು ಪಕ್ಕಾ ನಕಲಿ ಮದುವೆ. ಯಾವ ಸಿನಿಮಾ ಕತೆಗೂ ಕಡಿಮೆ ಇಲ್ಲ. ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದ ವಿವಾಹವೇ ನಕಲಿ.. ಆದರೆ ಹಣ ಕಳೆದುಕೊಂಡಿದ್ದು ಮಾತ್ರ ಅಸಲಿ.

ವಧು, ಪಾಲಕರು ಮತ್ತು ಪುರೋಹಿತ ಎಲ್ಲರೂ ನಕಲಿ. ಇಂಥ ಮದುವೆಯಿಂದ ನನಗೆ  1 ಲಕ್ಷ ರೂ. ಮತ್ತು ಆಭರಣ ವಂಚೆನಯಾಗಿದೆ ಎಂದು ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ.

Latest Videos

undefined

ಮೊದಲ ರಾತ್ರಿ ವೇಳೆ  ಆಭರಣದೊಂದಿಗೆ ನಾಪತ್ತೆಯಾದ ವಧು

ದೇವಾಲಯದಲ್ಲಿ ವಿವಾಹ ಸಮಾರಂಭ ಆಯೋಜನೆ ಮಾಡಲಾಗಿತ್ತು. ಮದುವೆಯ ಶಾಸ್ತ್ರಗಳು ನಡೆಯುತ್ತಿದ್ದ ಮಧ್ಯದಲ್ಲಿಯೇ ವಧು ಪರಾರಿಯಾಗಿದ್ದಾಳೆ.

ಮೀರತ್‌ನ ಪಾರ್ಟಪುರ ಪ್ರದೇಶದ ಭೂರ್ ಬರಾಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮುಜಫರ್ ನಗರದ ಮೊಹಮ್ಮದ್ಪುರ್  ಗುಮಿ ನಿವಾಸಿ ದೇವೇಂದ್ರ ಎಂಬುವರಿಗೆ ಅವರ ಸ್ನೇಹಿತ ಪ್ರದೀಪ್  ಒಂದು ಕುಟುಂಬ ತಮ್ಮ ಮಗಳಿಗೆ ವರನ ಹುಡುಕುತ್ತಿದ್ದಾರೆ ಎಂದು ಹೇಳಿ ಪೋಟೋ ಕಳಿಸಿಕೊಟ್ಟಿದ್ದಾರೆ. ನಂತರ ಮಾತುಕತೆ ನಡೆದು ಮದುವೆ ನಿಶ್ಚಯವಾಗಿದೆ. ದೇವೇಂದ್ರ ಹಣ ಮತ್ತು ಆಭರಣದೊಂದಿಗೆ ದೇವಾಲಯಕ್ಕೆ ತೆರಳಿದ್ದಾರೆ.

ಮದುವೆಗೆ ಹೆಣ್ಣಿನ ಕಡೆಯಿಂದ ಮೂರೇ ಜನರು ಬಂದಿದ್ದರು. ಶಾಸ್ತ್ರಗಳು ನಡೆಯುತ್ತಿದ್ದಂತೆ ವಧು ಪರಾರಿಯಾಗಿದ್ದಾಳೆ.  ವಧುವಿನ ಚಿಕ್ಕಮ್ಮ ಎಂದು  ಹೇಳಿಕೊಂಡು ಬಂದಿದ್ದ ಮಹಿಳೆ ಮದುಮಗಳನ್ನು ಹುಡುಕಿಕೊಂಡು ಬರುತ್ತೇನೆ ಎಂದು ತೆರಳಿ ನಾಪತ್ತೆಯಾಗಿದ್ದಾರೆ. ಇದೆಲ್ಲ ಆದ  ಮೇಲೆ ದೇವೇಂದ್ರ ಅವರಿಗೆ ತಾವು ಮೋಸಹೋಗಿರುವುದು ಗೊತ್ತಾಗಿದೆ. ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ.

click me!