ಯುಗಾದಿ ಹಬ್ಬದಂದು ಕರಾವಳಿಯಲ್ಲಿ ದೋಣಿ ದುರಂತ!

Published : Apr 13, 2021, 03:15 PM ISTUpdated : Apr 13, 2021, 03:16 PM IST
ಯುಗಾದಿ ಹಬ್ಬದಂದು ಕರಾವಳಿಯಲ್ಲಿ ದೋಣಿ ದುರಂತ!

ಸಾರಾಂಶ

ಯಗಾದಿ ಹಬ್ಬದಂದೇ ಕರಾವಳಿ ಭಾಗದಲ್ಲಿ ಭಾರೀ ದುರಂತ ಸಂಭವಿಸಿದೆ. ನೂರಾರು ಕಿ.ಮೀ ದೂರದ ಆಳ ಸಮುದ್ರದಲ್ಲಿ ಹಡಗು ಹಾಗೂ ಮೀನುಗಾರಿಕಾ ಬೋಟ್‌‌ ಅಪಘಾತವಾಗಿದೆ.

ಮಂಗಳೂರು, (ಏ.13):  ಕರಾವಳಿಯ ಆಳ ಸಮುದ್ರದಲ್ಲಿ ಹಡಗು ಹಾಗೂ ಮೀನುಗಾರಿಕಾ ಬೋಟ್‌ ಅಪಘಾತವಾಗಿದ್ದು, ಇಬ್ಬರು ಮೀನುಗಾರರು ಮೃತಪಟ್ಟಿದ್ದಾರೆ. 12 ಮಂದಿ ನಾಪತ್ತೆಯಾಗಿದ್ದಾರೆ.

ಮಂಗಳೂರು ಬಂದರಿನಿಂದ 43 ನಾಟೆಕಲ್‌ ಮೈಲಿ ದೂರದಲ್ಲಿ ಈ ಘಟನೆ ನಡೆದಿದೆ. ತಮಿಳುನಾಡು ಹಾಗೂ ಬಂಗಾಳದ ಕಾರ್ಮಿಕರಿದ್ದ ಮೀನುಗಾರಿಕಾ ಬೋಟ್‌ ಕೇರಳದ ಕೋಯಿಕ್ಕೋಡ್‌ ಜಿಲ್ಲೆಯ ಬೇಪೋರ್‌ನಿಂದ ಹೊರಟಿದ್ದು, ಮಂಗಳೂರು ಬಂದರಿನಿಂದ ನೂರಾರು ಕಿ.ಮೀ ದೂರದ ಆಳ ಸಮುದ್ರದಲ್ಲಿ ಹಡಗು ಹಾಗೂ ಮೀನುಗಾರಿಕಾ ಬೋಟ್‌‌ ಅಪಘಾತವಾಗಿದೆ.

ದೋಣಿ ಮಗುಚಿ 6 ಮಂದಿ ಕಾಣೆ : ಇಬ್ಬರ ಮೃತ​ದೇಹ ಪತ್ತೆ

ಕರಾವಳಿ‌ ಕಾವಲು ಪಡೆಯ ಮೂರು ಹಡಗು ಹಾಗೂ ಏರ್‌‌ ಕ್ರಾಫ್ಟ್‌ ಮೂಲಕ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು, ನಾಪತ್ತೆಯಾದವರಿಗೆ ಶೋಧ ಕಾರ್ಯ ಮುಂದುವರೆದಿದೆ.

ಈ ಬಗ್ಗೆ ಭಾರತೀಯ ಕೋಸ್ಟ್ ಗಾರ್ಡ್ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಲಾಗಿದ್ದು, ಕರಾವಳಿ ಪಡೆಯ ಮೂರು ಹಡಗು ಮತ್ತು ಏರ್ ಕ್ರಾಫ್ಟ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಮೀನುಗಾರಿಕಾ ಬೋಟ್ ಕೇರಳದ ಕೋಝಿಕೋಡ್ ಜಿಲ್ಲೆಯ ಬೇಪೋರ್ ನಿಂದ ಹೊರಟಿತ್ತು. ಇದರಲ್ಲಿ ತಮಿಳುನಾಡು ಮತ್ತು ಬಂಗಾಳ ಮೂಲದ ಕಾರ್ಮಿಕರಿದ್ದರು ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು