ಬೆಂಗಳೂರು: ಕೇರಳದಿಂದ ಬಸ್ಸಿನ ಲಗೇಜ್‌ ಬಾಕ್ಸಲ್ಲಿ ಗಾಂಜಾ ಸಾಗಾಟ

By Kannadaprabha News  |  First Published Apr 13, 2021, 9:32 AM IST

60 ಲಕ್ಷ ಮೌಲ್ಯದ ಹ್ಯಾಷ್‌ ಆಯಿಲ್‌, ಗಾಂಜಾ ವಶ| ನಾಲ್ವರು ಆರೋಪಿಗಳ ಬಂಧನ| ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾ​ರ್ಥಿ​ಗಳು, ಸಾರ್ವ​ಜ​ನಿ​ಕ​ರಿಗೆ ಮಾದಕ ವಸ್ತು​ ಮಾರಾಟ| ಖಚಿತ ಮಾಹಿತಿ ಮೇರೆಗೆ ಪೊಲೀಸರ ದಾಳಿ| 


ಬೆಂಗಳೂರು(ಏ.13): ಕೇರ​ಳ​ದಿಂದ ಖಾಸಗಿ ಬಸ್‌​ನಲ್ಲಿ ಗಾಂಜಾ ಹಾಗೂ ಹ್ಯಾಷ್‌ ಆಯಿಲ್‌ ತಂದು ನಗ​ರ​ದಲ್ಲಿ ಮಾರಾಟ ಮಾಡು​ತ್ತಿದ್ದ ಕೇರ​ಳದ ಇಬ್ಬರು ಸೇರಿ ನಾಲ್ವ​ರನ್ನು ಮಡಿ​ವಾಳ ಉಪ​ವಿ​ಭಾ​ಗದ ಎಚ್‌​ಎ​ಸ್‌​ಆರ್‌ ಲೇಔಟ್‌ ಪೊಲೀ​ಸರು ಬಂಧಿ​ಸಿ​ದ್ದಾ​ರೆ. ಕೇರ​ಳ​ದ ಕಾಸ​ರ​ಗೋ​ಡಿನ ಮೊಹ​ಮ್ಮದ್‌ ಮುಸ್ತಾಕ್‌(31) ಮತ್ತು ಮೊಹ​ಮ್ಮದ್‌ ಆಶೀ​ಕ್‌​(19) ಮತ್ತು ದಕ್ಷಿಣ ಕನ್ನ​ಡ ಜಿಲ್ಲೆ ಬಂಟ​ವಾಳ ತಾಲೂ​ಕಿನ ಪಿ.ಸ​ಮೀರ ಹಾಗೂ ಮೊಹ​ಮ್ಮದ್‌ ಅಫ್ರೀ​ದ್‌​(23) ಬಂಧಿ​ತರು.

ಆರೋಪಿಗಳಿಂದ 15 ಲಕ್ಷ ಮೌಲ್ಯದ 48.18 ಕೆ.ಜಿ ತೂಕದ ಗಾಂಜಾ, 45 ಲಕ್ಷ ಮೌಲ್ಯದ 1.13 ಗ್ರಾಂ ಹ್ಯಾಷ್‌ ಆಯಿಲ್‌, ಕೃತ್ಯಕ್ಕೆ ಬಳ​ಸಿದ್ದ ಒಂದು ತೂಕದ ಯಂತ್ರ, ಖಾಸಗಿ ಬಸ್‌, ಕಾರು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆರೋ​ಪಿ​ಗಳ ವಿಚಾ​ರ​ಣೆ​ಯಲ್ಲಿ ನಗ​ರದ ಪ್ರತಿಷ್ಠಿತ ಕಾಲೇಜು ವಿದ್ಯಾ​ರ್ಥಿ​ಗಳು, ಸಾರ್ವ​ಜ​ನಿ​ಕ​ರಿಗೆ ಮಾದಕ ವಸ್ತು​ಗ​ಳನ್ನು ಮಾರಾಟ ಮಾಡು​ತ್ತಿ​ದ್ದ​ರು ಎಂದು ಪೊಲೀ​ಸ​ರು ಹೇಳಿ​ದ​ರು.

Tap to resize

Latest Videos

ಮ್ಯಾನ್ಮಾರ್‌ನಿಂದ ಬೆಂಗ್ಳೂರಿಗೆ ಕುಕ್ಕರ್‌ನಲ್ಲಿ ಡ್ರಗ್ಸ್‌ ತಂದು ದಂಧೆ..!

ಆರೋ​ಪಿ​ಗಳ ಪೈಕಿ ಮೊಹ​ಮ್ಮದ್‌ ಮುಸ್ತಾಕ್‌ ಸ್ಲಿಪರ್‌ ಖಾಸಗಿ ಬಸ್‌ ಮಾಲಿ​ಕ​ನಾ​ಗಿದ್ದು, ಲಾಕ್‌​ಡೌನ್‌ ಸಂದ​ರ್ಭ​ದಲ್ಲಿ ಸ್ಥಳೀಯ ಗಾಂಜಾ ಮಾರಾ​ಟ​ಗಾರರ ಸಂಪರ್ಕ ಪಡೆದು ಅಕ್ರಮ ದಂಧೆ​ಯಲ್ಲಿ ತೊಡ​ಗಿದ್ದ. ನೂರಾರು ಕೆ.ಜಿ.​ಗಾಂಜಾ ಬೇಯಿಸಿ ಹ್ಯಾಷ್‌ ಆಯಿಲ್‌ ತಯಾ​ರಿಸಿ ಅವು​ಗ​ಳನ್ನು ಬಾಟ​ಲಿ​ಗ​ಳಲ್ಲಿ ತುಂಬ​ಲಾ​ಗಿತ್ತು. ನಂತರ ಕೇರ​ಳದ ಕಾಸ​ರ​ಗೋ​ಡಿ​ನಿಂದ ನಿತ್ಯ ಬೆಂಗ​ಳೂ​ರಿಗೆ ಬರುವ ಬಸ್‌​ನ ಲಗೇಜ್‌ ಬಾಕ್ಸ್‌ ಮತ್ತು ಟೂಲ್‌ ಬಾಕ್ಸ್‌​ಗ​ಳಲ್ಲಿ ಇಟ್ಟು ಹ್ಯಾಷ್‌ ಆಯಿಲ್‌ ಮತ್ತು ಗಾಂಜಾ​ವನ್ನು ಬೆಂಗ​ಳೂ​ರಿಗೆ ಸಾಗಿಸುತ್ತಿದ್ದರು.

ಈ ಸಂಬಂಧ ಖಚಿತ ಮಾಹಿತಿ ಮೇರೆಗೆ ಮಡಿ​ವಾಳ ಉಪ ವಿಭಾ​ಗದ ಎಸಿಪಿ ಸುಧೀರ್‌ ಎಂ.ಹೆ​ಗಡೆ ಮತ್ತು ಎಚ್‌​ಎ​ಸ್‌​ಆರ್‌ ಲೇಔ​ಟ್‌ ಠಾಣೆಯ ವಿ.ಮು​ನಿ​ರೆಡ್ಡಿ ನೇತೃ​ತ್ವದ ತಂಡ ಬಸ್‌ ಮೇಲೆ ದಾಳಿ ನಡೆ​ಸಿ​ದಾಗ ಅಲ್ಲಿನ ಲಗೇಜ್‌ ಮತ್ತು ಟೂಲ್‌ ಬಾಕ್ಸ್‌​ಗ​ಳಲ್ಲಿ ಅಕ್ರ​ಮ​ವಾಗಿ ಮಾದಕ ವಸ್ತು​ಗಳು ಪತ್ತೆ​ಯಾ​ಗಿದ್ದು, ನಾಲ್ವ​ರನ್ನು ಬಂಧಿ​ಸ​ಲಾ​ಗಿದೆ ಎಂದು ಪೊಲೀ​ಸರು ಹೇಳಿ​ದ​ರು.
 

click me!