ಉಡುಪಿ: ಅಪರಿಚಿತ ಮಹಿಳೆಯರಿಂದ ಮಗುವಿನ ಅಪಹರಣಕ್ಕೆ ಯತ್ನ

By Kannadaprabha News  |  First Published Feb 24, 2024, 2:00 AM IST

ಮಹಮಾ ಎಂಬವರ ಮನೆಗೆ ಬಂದ ಈ ಮಹಿಳೆಯರು ತಾವು ಬಾಂಬೆಯಿಂದ ಬಂದಿದ್ದೇವೆ ಎಂದು ಹೇಳಿದರಲ್ಲದೇ ಸೀದಾ ಮನೆಯೊಳಗೆ ಹೋಗಿ ಮಲಗಿದ್ದ 1 ವರ್ಷದ ಮಗುವನ್ನು ಎತ್ತಿಕೊಂಡರು. ನಂತರ ಮೊಬೈಲಿನಲ್ಲಿದ್ದ ವಿಡಿಯೋವನ್ನು ತೋರಿಸಿ, ಮಗವನ್ನು ಎತ್ತಿಕೊಂಡು ಹೊರಗೆ ಬಂದರು. ತಕ್ಷಣ ಮಹಿಮಾ ಅವರು ಹೊರಗೆ ಬಂದು ಮಗವನ್ನು ಸೆಳೆದುಕೊಂಡರು. ಆಗ ಮಹಿಮಾ ಅವರ ಅಣ್ಣ ಅಲ್ಲಿಗೆ ಬಂದುದನ್ನು ನೋಡಿ ಮಹಿಳೆಯರು ಅಲ್ಲಿಂದ ಪರಾರಿಯಾಗಿದ್ದಾರೆ.


ಬ್ರಹ್ಮಾವರ(ಫೆ.24): ಇಲ್ಲಿನ ವಾರಂಬಳ್ಳಿ ಗ್ರಾಮದ ಉಪ್ಪನಕೋಟೆ ಎಂಬಲ್ಲಿ ಇಬ್ಬರು ಅಪರಿಚಿತ ಮಹಿಳೆಯರು ಮಗುವೊಂದನ್ನು ಅಪಹರಿಸಲು ಯತ್ನಿಸಿದ ಘಟನೆ ಬುಧವಾರ ನಡೆದಿದೆ.

ಇಲ್ಲಿನ ನಿವಾಸಿ ಮಹಮಾ ಎಂಬವರ ಮನೆಗೆ ಬಂದ ಈ ಮಹಿಳೆಯರು ತಾವು ಬಾಂಬೆಯಿಂದ ಬಂದಿದ್ದೇವೆ ಎಂದು ಹೇಳಿದರಲ್ಲದೇ ಸೀದಾ ಮನೆಯೊಳಗೆ ಹೋಗಿ ಮಲಗಿದ್ದ 1 ವರ್ಷದ ಮಗುವನ್ನು ಎತ್ತಿಕೊಂಡರು. ನಂತರ ಮೊಬೈಲಿನಲ್ಲಿದ್ದ ವಿಡಿಯೋವನ್ನು ತೋರಿಸಿ, ಮಗವನ್ನು ಎತ್ತಿಕೊಂಡು ಹೊರಗೆ ಬಂದರು. ತಕ್ಷಣ ಮಹಿಮಾ ಅವರು ಹೊರಗೆ ಬಂದು ಮಗವನ್ನು ಸೆಳೆದುಕೊಂಡರು. ಆಗ ಮಹಿಮಾ ಅವರ ಅಣ್ಣ ಅಲ್ಲಿಗೆ ಬಂದುದನ್ನು ನೋಡಿ ಮಹಿಳೆಯರು ಅಲ್ಲಿಂದ ಪರಾರಿಯಾಗಿದ್ದಾರೆ.

Tap to resize

Latest Videos

undefined

ಬಿಗಿ ಭದ್ರತೆಯಲ್ಲಿ ನಕ್ಸಲೈಟ್ ಶ್ರೀಮತಿ ಯನ್ನು ಕಾರ್ಕಳಕ್ಕೆ ಕರೆತಂದ ಪೊಲೀಸರು!

ಇದೇ ದಿನ ಇಬ್ಬರು ಅಪರಿಚಿತ ಮಹಿಳೆಯರು ಇಲ್ಲಿಯೇ ಸಮೀಪದ ಮನೆಯಲ್ಲಿ ಕ್ರೈಸ್ತ ಧರ್ಮ ಪ್ರಚಾರ ಮಾಡಲು ಹೋಗಿ ಸ್ಥಳೀಯರಿಂದ ಓಡಿಸಲ್ಪಟ್ಟಿದ್ದರು. ಈ ಎರಡೂ ಘಟನೆಯ ಅಪರಿಚಿತ ಮಹಿಳೆಯರು ಒಬ್ಬರೇ ಆಗಿರಬಹುದೇ ಎಂಬ ಸಂಶಯ ಇದೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

click me!