ಹೆದ್ದಾರಿಯಲ್ಲಿ ಬೈಕ್‌ಗೆ ಗುದ್ದಿದ ಅಪರಿಚಿತ ವಾಹನ: ದಿಕ್ಕಾಪಾಲಾಗಿ ಬಿದ್ದ ಯುವಕರ ಮೃತದೇಹಗಳು

By Sathish Kumar KH  |  First Published Feb 11, 2023, 7:14 PM IST

ರಾತ್ರಿ ವೇಳೆ ಮನೆಯಿಂದ ಹೊರಗೆ ಹೋಗಬೇಡಿ ಎಂದರೂ ತಾಯಿಯ ಮಾತನ್ನು ಕೇಳದೇ, ದೇವರ ಜಾತ್ರೆಗೆಂದು ಮನೆಯಿಂದ ಬೈಕ್‌ ತೆಗೆದುಕೊಂದು ಹೋದವರು ಮರಳಿ ಮನೆಗೆ ಬಾರದ ಲೋಕಕ್ಕೆ ಹೋಗಿದ್ದಾರೆ.


ದಾವಣಗೆರೆ (ಫೆ.11): ರಾತ್ರಿ ವೇಳೆ ಮನೆಯಿಂದ ಹೊರಗೆ ಹೋಗಬೇಡಿ ಎಂದರೂ ತಾಯಿಯ ಮಾತನ್ನು ಕೇಳದೇ, ದೇವರ ಜಾತ್ರೆಗೆಂದು ಮನೆಯಿಂದ ಬೈಕ್‌ ತೆಗೆದುಕೊಂದು ಹೋದವರು ಮರಳಿ ಮನೆಗೆ ಬಾರದ ಲೋಕಕ್ಕೆ ಹೋಗಿದ್ದಾರೆ. ದಾವಣಗೆರೆ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ವೇಳೆ ದಾವಣಗೆರೆ ನಗರಕ್ಕೆ ವಾಪಸ್‌ ಬರುವಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲಿಯೇ ಮೂವರು ಯಿವಕರು ಸಾವನ್ನಪ್ಪಿದ್ದು, ಮೃತ ದೇಹಗಳು ದಿಕ್ಕಾಪಾಲಾಗಿ ಬಿದ್ದಿದ್ದವು. 

ಹೌದು, ರಾತ್ರಿ ವೇಳೆ ಬೈಕ್‌ ಹಾಗೂ ಸೈಕಲ್‌ ಸೇರಿ ಸಣ್ಣ ವಾಹನಗಳಲ್ಲಿ ಸಂಚಾರ ಮಾಡುವುದು ಭಾರಿ ಅಪಾಯಕರವಾಗಿದೆ. ಅದರಲ್ಲಿಯೂ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ಮಾಡುವುದು ಇನ್ನೂ ಅಪಾಯಕರ ಆಗಿರುತ್ತದೆ. ವೇಗವಾಗಿ ಓಡಾಡುವ ಕಾರು, ಬಸ್‌, ಟ್ರಕ್‌ ಸೇರಿ ಅನೇಕ ವಾಹನಗಳು ಸಣ್ಣದಾದ ಬೈಕ್‌ ಹಾಗೂ ಇತರೆ ವಾಹನಗಳಿಗೆ ಅಪಘಾತ ಮಾಡುವ ಪ್ರಕರಣಗಳೇ ಹೆಚ್ಚಾಗಿ ನಡೆಯುತ್ತವೆ. ಇದೇ ರೀತಿ ದಾವಣಗೆರೆ ತಾಲೂಕಿನ ಆನಗೋಡ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ತಡರಾತ್ರಿ ಘಟನೆ ನಡೆದಿದೆ. ಇನ್ನು ಮೂವರ ಯುವಕರ ಮೃತದೇಹಗಳು ಹೆದ್ದಾರಿಯಲ್ಲಿ ದಿಕ್ಕಾಪಾಲಾಗಿ ಅನಾಥ ಶವಗಳಂತೆ ಬಿದ್ದಿದ್ದವು. 

Latest Videos

undefined

ಸಾಫ್ಟ್‌ವೇರ್‌ ದಂಪತಿಯ ದುರಂತ ಅಂತ್ಯ: ಮದುವೆಗೆ ಹೊರಟಿದ್ದವರು ಮಸಣ ಸೇರಿದರು

30 ಮೀಟರ್‌ ದೂರದಲ್ಲಿ ಮೃತದೇಹ:
ತಡರಾತ್ರಿಯ ವೇಳೆ ಅಪರಿಚಿತ ವಾಹನ ಬೈಕ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ ಹಾಗೂ ಮೂವರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನು ಅವರ ಮೃತದೇಹಗಳು ಸುಮಾರು 10 ಮೀಟರ್‌ಗಳಿಗೂ ಅಧಿಕ ದೂರದಲ್ಲಿ ಬಿದ್ದಿದ್ದವು. ವಾಹನ ಗುದ್ದಿದ ರಭಸಕ್ಕೆ ಬೈಕ್‌ 30 ಮೀಟರ್ ದೂರದಲ್ಲಿತ್ತು. ಆದರೆ, ತಡರಾತ್ರಿ ವೇಳೆ ದೊಡ್ಡ ವಾಹನಗಳು ಯಾವುದೂ ಕೂಡ ನಿಲ್ಲಿಸಲಿಲ್ಲ. ಸುಮಾರು ಗಂಟೆಗಳಾದ ನಂತರ ವಾಹನ ಸವಾರರು ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಪೊಲೀಸರು ಬಂದು ಮೃತದೇಹಗಳನ್ನು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ದಾವಣಗೆರೆಯ ರಾಮನಗರದ ನಿವಾಸಿಗಳು:
ರಾಷ್ಟ್ರೀಯ ಹೆದ್ದಾರಿಯಲ್ಲಿಉ ಅಪಘಾತಕ್ಕೆ ಸಿಲುಕಿ ಸಾವನ್ನಪ್ಪಿದ ಯುವಕರು ದಾವಣಗೆರೆ ನಗರದ ರಾಮನಗರದ ನಿವಾಸಿಗಳು ಆಗಿದ್ದಾರೆ. ಪರಶುರಾಮ್ (24) ಸಂದೇಶ (23) ಶಿವು (26) ಮೃತ ದುರ್ಧೈವಿಗಳು. ದಾವಣಗೆರೆ ತಾಲೂಕಿನ ಕಾಟಿಹಳ್ಳಿ ಗ್ರಾಮದಲ್ಲಿ ದೇವಿ ಕಾರ್ಯದಲ್ಲಿ ಊಟ ಮಾಡಿ ವಾಪಸ್ಸಾಗುವಾಗ ಘಟನೆ ನಡೆದಿದೆ. ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರ ಭೇಟಿ ಪರಿಶೀಲನೆ ಮಾಡಿದ್ದಾರೆ. ಜಿಲ್ಲಾ ಆಸ್ಪತ್ರೆಗೆ ಶವ  ಸ್ಥಳಾಂತರ ಮೃತರ ಕುಟುಂಬದವರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. 

ಆಟೋ ಟ್ರಕ್ ಮುಖಾಮುಖಿ ಡಿಕ್ಕಿ, ಭೀಕರ ಅಪಘಾತದಲ್ಲಿ ಐವರು ಶಾಲಾ ಮಕ್ಕಳ ಸಾವು, ನಾಲ್ವರು ಗಂಭೀರ!

ಶವಾಗಾರದ ಬಳಿ ಕುಟುಂಬ ಸದಸ್ಯರ ಆಕ್ರಂದನ: ಇನ್ನು ಬೆಳಗ್ಗೆ ದಾವಣಗೆರೆ ಶವಾಗಾರದ ಬಳಿ ಕುಟುಂಬ ಸದಸ್ಯರು ತಮ್ಮ ಮಕ್ಕಳಿಗಾಗಿ ಕಣ್ಣೀರುಡುತ್ತಾ ಗೋಳಾಡುತ್ತಿರುವ ದೃಶ್ಯಗಳು ಕಂಡುಬಂದವು. ರಾತ್ರಿ ವೇಳೆ ಮನೆಯಿಂದ ಹೊರಗೆ ಹೋಗಬೇಡಿ ಎಂದು ಮನೆಯವರು ತಿಳಿಸಿದರೂ ಅವರ ಮಾತನ್ನು ಕೇಳದೇ ದೇವರ ಜಾತ್ರೆಗೆ ಹೋಗಿ ಬರುವುದಾಗಿ ತಿಳಿಸಿದರು. ಆದರೆ, ಜಾತ್ರೆಗೆ ಹೋದವರು ಮರಳಿ ಮನೆಗೆ ಬಾರಲೇ ಇಲ್ಲ. ಹೆದ್ದಾರಿಯಲ್ಲಿ ಮೂವರು ಒಂದೇ ಬೈಕ್‌ನಲ್ಲಿ ಚಾಲನೆ ಮಾಡಿಕೊಂಡು ಹೋಗಿದ್ದು, ತಡರಾತ್ರಿವರೆಗೂ ಮನೆಗೆ ಬರುವ ನಿರೀಕ್ಷೆಯಲ್ಲಿ ಕಾಯುತ್ತಿದ್ದೆವು. ಆದರೆ, ಆಸ್ಪತ್ರೆಯಲ್ಲಿ ಶವವಾಗಿ ಮಲಗಿದ್ದಾರೆ ಎಂದು ಕುಟುಂಬ ಸದಸ್ಯರ ಮುಗಿಲು ಮುಟ್ಟಿತ್ತು. ನಂತರ ಮೃತದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರ ಮಾಡಲಾಯಿತು.

click me!