15 ವರ್ಷದಿಂದ ನಾಪತ್ತೆಯಾಗಿದ್ದ ಕಳ್ಳ ಪೊಲೀಸರಿಗೆ ಸಿಕ್ಕ ರೋಚಕ ಕಥೆ!

Published : Feb 11, 2023, 07:08 PM IST
15 ವರ್ಷದಿಂದ ನಾಪತ್ತೆಯಾಗಿದ್ದ ಕಳ್ಳ ಪೊಲೀಸರಿಗೆ ಸಿಕ್ಕ ರೋಚಕ ಕಥೆ!

ಸಾರಾಂಶ

2007ರಲ್ಲಿ  ಬಟ್ಟೆ ಅಂಗಡಿಯಲ್ಲಿ ಸೇಲ್ಸ್‌ಮೆನ್‌ ಆಗಿ ಕೆಲಸ ಮಾಡಿದ್ದ ವ್ಯಕ್ತಿ ಮಾಲೀಕನಿಗೆ 40 ಸಾವಿರ ರೂಪಾಯಿ ಮೋಸ ಮಾಡಿದ್ದ. ಜೈಲಿನಿಮದ ಜಾಮೀನು ಪಡೆದುಕೊಂಡ ಬಳಿಕ ತಲೆಮರೆಸಿಕೊಂಡಿದ್ದ.

ಮುಂಬೈ (ಫೆ.11): ಮಹತ್ವದ ಕಾರ್ಯಾಚರಣೆಯಲ್ಲಿ 15 ವರ್ಷದ ಹಿಂದಿನ ಪ್ರಕರಣದಲ್ಲಿ ಬೇಕಾಗಿದ್ದ ಅರೋಪಿಯನ್ನು ಮುಂಬೈ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಕಳೆದ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ 38 ವರ್ಷದ ಪ್ರವೀಣ್‌ ಅಶುಭಾ ಜಡೇಜಾರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಎಲ್‌ಐಸಿ ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಇಷ್ಟು ವರ್ಷಗಳ ಬಳಿಕ ಸಿಕ್ಕಿದ್ದರಲ್ಲೂ ರಹಸ್ಯವಿದೆ. ಪ್ರವೀಣ್‌ ಅಶುಭಾ ಎರಡು ಚಿನ್ನದ ಹಲ್ಲುಗಳನ್ನು ಹೊಂದಿದ್ದ ಇದೊಂದೇ ಪೊಲೀಸರಿಗೆ ಇದ್ದ ಮಾಹಿತಿಯಾಗಿತ್ತು. ಕೊನೆಗೆ ಇದರ ಆಧಾರದಲ್ಲಿಯೇ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. 2007ರಲ್ಲಿ ಬಟ್ಟೆ ಅಂಗಡಿಯಲ್ಲಿ ಸೇಲ್ಸ್‌ಮೆನ್‌ ಆಗಿ ಕೆಲಸ ಮಾಡುತ್ತಿದ್ದ ಪ್ರವೀಣ್‌ ಮಾಲೀಕನಿಗೆ 40 ಸಾವಿರ ರೂಪಾಯಿ ಮೋಸ ಮಾಡಿ ನಾಪತ್ತೆಯಾಗಿದ್ದ. ಪೊಲೀಸರಿಂದ ಸಿಕ್ಕಿಬೀಳುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಗುಜರಾತ್‌ನ ಕಛ್‌ಗೆ ತೆರಳಿದ್ದ. 'ಈ ವ್ಯಕ್ತಿಯನ್ನು ವೀಣ್ ಅಶುಭ ಜಡೇಜಾ ಅಕಾ ಪ್ರವೀಣ್ ಸಿಂಗ್ ಅಕಾ ಪ್ರದೀಪ್ ಸಿಂಗ್ ಅಶುಭ ಜಡೇಜಾ ಎಂದು ಗುರುತಿಸಲಾಗಿದೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಆರೋಪಿಯ ವಿರುದ್ಧ ವಂಚನೆ ಮತ್ತು ಪೊಲೀಸರನ್ನು ದಾರಿ ತಪ್ಪಿಸಿದ ಆರೋಪವನ್ನು ಹೊರಿಸಲಾಗಿದೆ. 2007ರಲ್ಲಿ ಕೆಲವು ದಿನಗಳ ಬಂಧನದ ನಂತರ ಆರೋಪಿ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದ. ವಿಚಾರಣೆಯ ನಂತರ, ಆರೋಪಿ ಮುಂಬೈನಿಂದ ಪರಾರಿಯಾಗಿದ್ದ.ಮತ್ತೆ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಆದ್ದರಿಂದ ನ್ಯಾಯಾಲಯ ಆತನನ್ನು ಪರಾರಿ ಎಂದು ಘೋಷಣೆ ಮಾಡಿತ್ತು' ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

2007ರಲ್ಲಿ ಬಟ್ಟೆ ಅಂಗಡಿಯಲ್ಲಿ ಸೇನ್ಸ್‌ ಮೆನ್‌ ಅಗಿ ಪ್ರವೀಣ್‌ ಕೆಲಸ ಮಾಡುತ್ತಿದ್ದ. ಇನ್ನೊಬ್ಬ ವ್ಯಾಪಾರಿಯಿಂದ 40 ಸಾವಿರ ರೂಪಾಯಿ ಪಡೆದುಕೊಂದು ಬರುವಂತೆ ಪ್ರವೀಣ್‌ಗೆ ಮಾಲೀಕ ಒಂದು ದಿನ ತಿಳಿಸಿದ್ದ. ಪಡೆದುಕೊಂಡ ಹಣವನ್ನು ಮಾಲೀಕನಿಗೆ ನೀಡುವ ಬದಲು, ನಾನು ಟಾಯ್ಲೆಟ್‌ಗೆ ಹೋಗಿ ಬರುವ ವೇಳೆ ಯಾರೋ ಒಬ್ಬರು ಈ ಹಣವನ್ನು ಕದ್ದುಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ಹಾಗೂ ಮಾಲೀಕನಿಗೆ ತಿಳಿಸುವ ಮೂಲಕ ದಾರಿ ತಪ್ಪಿಸುವ ಕೆಲಸ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

Bengaluru: ಪೊಲೀಸರ ಕಿರುಕುಳ ಆರೋಪ: ಲೈವ್ ವಿಡಿಯೋ ಮಾಡಿ ಯುವಕ ಆತ್ಮಹತ್ಯೆ ಯತ್ನ

ಈ ಕುರಿತಾಗಿ ಮಾಲೀಕ ದೂರು ನೀಡಿದ ಬಳಿಕ ತನಿಕೆ ನಡೆದಿತ್ತು. ಪ್ರವೀಣ್‌ ಈ ಹಣವನ್ನು ಕದ್ದಿದ್ದು ಸ್ಪಷ್ಟವಾಗಿತ್ತು. ಪೊಲೀಸರಿಗೆ ಈತ ದಾರಿ ತಪ್ಪಿಸಿದ್ದ ಕಾರಣಕ್ಕೆ ಮುಂಬೈ ಪೊಲೀಸ್‌ ಈತನನ್ನು ಬಂಧಿಸಿತ್ತು.'ಆರೋಪಿಯನ್ನು ಆಗ ಬಂಧಿಸಲಾಗಿತ್ತು. ಆದರೆ ನ್ಯಾಯಾಲಯದಿಂದ ಜಾಮೀನು ಪಡೆದ ನಂತರ ಆತ ತಲೆಮರೆಸಿಕೊಂಡಿದ್ದ' ಎಂದಿದ್ದಾರೆ.

Ramanagara: ಬ್ಯಾಂಕ್‌ ನೋಟಿಸ್‌ಗೆ ಹೆದರಿ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಆರೋಪಿಗಾಗಿ ಇತ್ತೀಚೆಗೆ ಮುಂಬೈ ಪೊಲೀಸರು ಮತ್ತೆ ಹುಡುಕಾಟ ನಡೆಸಿದ್ದರು.“ಕೆಲವು ದಿನಗಳ ಹಿಂದೆ ಪೊಲೀಸರು ಶೋಧ ತನಿಖೆಯನ್ನು ಪುನರಾರಂಭಿಸಿದರು, ಇದರಲ್ಲಿ ಅವರು ಆರೋಪಿಗಳ ಮಾಜಿ ಸಹಚರರನ್ನು ವಿಚಾರಣೆಗೆ ಒಳಪಡಿಸಿದರು ಮತ್ತು ಪ್ರವೀಣ್ ಮಾಂಡ್ವಿಯ ಸಬ್ರೈ ಗ್ರಾಮದಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನುವುದು ತಿಳಿದುಬಂದಿತ್ತು. ಗುಜರಾತಿನ ಕಛ್ ಜಿಲ್ಲೆಯಲ್ಲಿರುವ ತಾಲೂಕಾ ಪೊಲೀಸರು ಎಲ್‌ಐಸಿ ಏಜೆಂಟ್‌ಗಳಂತೆ ವರ್ತಿಸಿ ಪ್ರವೀಣ್‌ನನ್ನು ಮುಂಬೈಗೆ ಕರೆಸಿಕೊಂಡರು. ದೃಢೀಕರಣದ ನಂತರ ಆರೋಪಿಯನ್ನು ಬಂಧಿಸಲಾಯಿತು' ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?