ಪೊಲೀಸ್ ಸ್ಟೇಷನ್ ಮುಂಭಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಅಪ್ಪಚ್ವಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದ ಪೊಲೀಸ್ ಸ್ಟೇಷನ್ ಮುಂಭಾಗ ನಡೆದಿದೆ.
ಚಿಕ್ಕಮಗಳೂರು (ಮಾ.4): ಪೊಲೀಸ್ ಸ್ಟೇಷನ್ ಮುಂಭಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಅಪ್ಪಚ್ವಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದ ಪೊಲೀಸ್ ಸ್ಟೇಷನ್ ಮುಂಭಾಗ ನಡೆದಿದೆ. ಮೃತನನ್ನ ಸುಮಾರು 30 ವರ್ಷದ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಮೃತ ಶ್ರೀನಿವಾಸ್ ತರೀಕೆರೆ ತಾಲೂಕಿನ ಹುಣಸಘಟ್ಟ ಗ್ರಾಮದವರು. ತರೀಕೆರೆ ಪೊಲೀಸ್ ಸ್ಟೇಷನ್ ಮುಂಭಾಗ ನಡೆದು ಹೋಗುವಾಗ ಅಪರಿಚಿತ ಲಾರಿ ಡಿಕ್ಕಿ ಹೊಡೆದುಕೊಂಡು ಹೋಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮೃತ ಯುವಕ ಶ್ರೀನಿವಾಸ್ ಗೆ ವಿವಾಹವಾಗಿದ್ದು ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ಆದರೆ, ಯುವಕನಿಗೆ ಡಿಕ್ಕಿ ಹೊಡೆದ ಲಾರಿ ಯಾವುದು ಎಂದು ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣ ದಾಖಲಿಸಿಕೊಂಡಿರೋ ತರೀಕೆರೆ ಪೊಲೀಸರು ಯುವಕನಿಗೆ ಡಿಕ್ಕಿ ಹೊಡೆದ ಲಾರಿ ಅಥವಾ ಬೇರೆ ವಾಹನ ಯಾವುದು ಎಂದು ತನಿಖೆ ಕೈಗೊಂಡಿದ್ದಾರೆ.
ಚಾಕು ಚುಚ್ಚಿ ಮಹಿಳೆ ಕೊಲೆ
ತೆರದಾಳ: ದನಕರುಗಳನ್ನು ಮೇಯಿಸಲು ಹೋಗಿದ್ದ ಮಹಿಳೆಯನ್ನು ಯಾರೋ ಆರೋಪಿಗಳು ಹಾಡುಗಲೇ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಪಟ್ಟಣದ ಪುರಸಭೆ ಹಿಂಬಾಗದಲ್ಲಿ ನಡೆದಿದೆ. ಕಸ್ತೂರಿ ನಾಗಪ್ಪ ಹೊಸಟ್ಟಿ(53) ಕೊಲೆಯಾದ ದುರ್ದೈವಿ.
ಎಂದಿನಂತೆ ತನ್ನ ದನಕರುಗಳನ್ನು ಮೇಯಿಸಲು ಕಸ್ತೂರಿ ಮನೆಯಿಂದ ಹೊರ ಬಂದಿದ್ದಾರೆ. ಪುರಸಭೆ ಹಿಂಬದಿಯಲ್ಲಿ ಗಿಡಗಂಟಿಗಳಿದ್ದು, ಅಲ್ಲಿಗೆ ಹೋದ ಸಂದರ್ಭದಲ್ಲಿ ಯಾರೋ ಆರೋಪಿಗಳು ಚಾಕುವಿನಿಂದ ಹೊಟ್ಟೆಗೆ ಇರಿದು ಪರಾರಿಯಾಗಿದ್ದಾರೆ. ಸ್ಥಳದಲ್ಲಿಯೇ ಒದ್ದಾಡುತ್ತ ಬಿದ್ದಿದ್ದ ಕಸ್ತೂರಿಯನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹೆಚ್ಚಿನ ಚಿಕಿತ್ಸೆಗೆ ಜಮಖಂಡಿಗೆ ಕರೆದುಕೊಂಡು ಹೋಗುವ ಸಮಯದಲ್ಲಿ ರಸ್ತೆ ಮಧ್ಯೆ ಅಸುನೀಗಿದ್ದಾಳೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಜಮಖಂಡಿ ಡಿಎಸ್ಪಿ ಶಾಂತವೀರ, ಬನಹಟ್ಟಿಸಿಪಿಐ ಸುನೀಲ ಪಾಟೀಲ ಬೇಟಿ ನೀಡಿ ಪರಿಶೀಲಿಸಿದರು. ಠಾಣಾಧಿಕಾರಿ ಹೊನ್ನಪ್ಪ ತಳವಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಯಾದಗಿರಿ: ಮಗನ ಸಾವಿನ ಆಘಾತದಿಂದ ತಂದೆಯೂ ಆತ್ಮಹತ್ಯೆಗೆ ಶರಣು
ವೈಯಕ್ತಿಕ ನಿಂದನೆಗೆ ಕೆರಳಿ ಪಾನಮತ್ತ ಕಾರ್ಮಿಕರಿಬ್ಬರು ಗೆಳೆಯನ ಹತ್ಯೆ:
ಬೆಂಗಳೂರು: ಕುಡಿದ ಅಮಲಿನಲ್ಲಿ ಲಾರಿ ಬ್ರೋಕರ್ ಹಾಗೂ ಕಾರ್ಮಿಕರ ನಡುವೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಗೊರಗುಂಟೆಪಾಳ್ಯ ಸಮೀಪ ನಡೆದಿದೆ. ಪೀಣ್ಯ 1ನೇ ಹಂತದ ನಿವಾಸಿ ಶಿವಕುಮಾರ್ ಅಲಿಯಾಸ್ ಜೋಗಿ (40) ಕೊಲೆಯಾದ ವ್ಯಕ್ತಿ. ಕೃತ್ಯ ಸಂಬಂಧ ಮೃತನ ಸ್ನೇಹಿತರಾದ ಪೀಣ್ಯದ ಸಿದ್ದೋಜಿರಾವ್ ಅಲಿಯಾಸ್ ಕರ್ಣ ಹಾಗೂ ಗೊರಗುಂಟೆಪಾಳ್ಯದ ಗಿರೀಶ್ ಎಂಬುವರನ್ನು ಬಂಧಿಸಲಾಗಿದೆ.
Bengaluru: ಕಸದ ರಾಶಿಗೆ ಎಸೆದ 4-5 ತಿಂಗಳ ಮಗುವಿನ ಮೇಲೆ ವಾಹನ ಹರಿದು ಸಾವು!
ಆರ್‌ಎಂಸಿ ಯಾರ್ಡ್‌ನಲ್ಲಿ ಲಾರಿ ಬ್ರೋಕರ್ ಆಗಿದ್ದ ಶಿವಕುಮಾರ್, ತನ್ನ ಕುಟುಂಬದ ಜತೆ ಪೀಣ್ಯದಲ್ಲಿ ನೆಲೆಸಿದ್ದ. ಆದರೆ ಇತ್ತೀಚಿಗೆ ಯಾವುದೇ ಕೆಲಸವಿರದೆ ಆತ ಅಲೆಯುತ್ತಿದ್ದ. ಬಂಧಿತರು ಆರ್‌ಎಂಸಿ ಯಾರ್ಡ್‌ನಲ್ಲಿ ಲಾರಿಗಳಲ್ಲಿ ಸರಕು ಇಳಿಸುವ ಕೆಲಸಗಾರರಾಗಿ ದುಡಿಯುತ್ತಿದ್ದರು. ಮೊದಲಿನಿಂದಲೂ ಈ ಮೂವರು ಪರಸ್ಪರ ಪರಿಚಿತರಾಗಿದ್ದರು. ಬುಧವಾರ ರಾತ್ರಿ ಮದ್ಯದ ಅಮಲಿನಲ್ಲಿ ಗೆಳೆಯರಿಗೆ ಶಿವಕುಮಾರ್ ವೈಯಕ್ತಿಕವಾಗಿ ನಿಂದಿಸಿದ್ದಾನೆ. ಇದರಿಂದ ಕೆರಳಿದ ಆರೋಪಿಗಳು, ಆತನ ಮೇಲೆ ಹಲ್ಲೆ ನಡೆಸಿ ಬಳಿಕ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದು ಪರಾರಿಯಾಗಿದ್ದರು. ಕೆಲ ಹೊತ್ತಿನ ಬಳಿಕ ರಕ್ತದ ಮಡುವಿನಲ್ಲಿ ಅಪರಿಚಿತ ಮೃತದೇಹ ಕಂಡು ಸಾರ್ವಜನಿಕರು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ. ಬಳಿಕ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.