ಪ್ರೀತಿಸುವಂತೆ ಯುವಕನ ಕಾಟ, ವಿಷ ಸೇವಿಸಿದ ಯುವತಿ, 20 ದಿನಗಳ ಜೀವನ್ಮರಣ ಹೋರಾಟದಲ್ಲಿ ಸೋತ ವಿದ್ಯಾಶ್ರೀ!

By Suvarna News  |  First Published May 9, 2022, 2:06 PM IST

* ವಿಷ ಸೇವಿಸಿದ ವಿದ್ಯಾರ್ಥಿನಿ 20 ದಿನಗಳ ಬಳಿಕ ಸಾವು

* ಹೊಸನಗರ ತಾಲೂಕಿನ ವಸವೆ ಗ್ರಾಮದ  ವಿದ್ಯಾರ್ಥಿನಿ

* ನೆರೆಮನೆಯ  ಶಶಾಂಕ್  ಪ್ರತಿದಿನ ಕಾಲೇಜಿಗೆ ಹೋಗಿ ಬರುವಾಗ ಪ್ರೀತಿಸುವಂತೆ ಕಾಡುತ್ತಿದ್ದ


ಶಿವಮೊಗ್ಗ(ಮೇ.09): ಪ್ರೀತಿಸುವಂತೆ ಯುವಕನೋರ್ವ ಪೀಡಿಸುತ್ತಿದ್ದು, ಕಿರುಕುಳ ತಾಳಲಾರದೆ ವಿಷ ಸೇವಿಸಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೇ 20 ದಿನಗಳ ಕಾಲ ಜೀವನ್ಮರಣದ ನಡುವೆ ಹೋರಾಟ ನಡೆಸಿ ಸಾವನ್ನಪ್ಪಿದ್ದಾಳೆ. 

ಹೊಸನಗರ ತಾಲೂಕಿನ ವಸವೆ ಗ್ರಾಮದ ಕುಂಟಿಗೆ ವಾಸಿಯಾದ ಪಟೇಲ್ ಈಶ್ವರಪ್ಪ ಗೌಡರ ಪುತ್ರಿ ಹೊಸನಗರ ಪಟ್ಟಣದ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿನಿ ವಿದ್ಯಾಶ್ರೀ (21) ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ. 

Tap to resize

Latest Videos

ಅವರ ನೆರೆಮನೆಯಾತ ಮಹೇಶಗೌಡ ಎಂಬವವರ ಪುತ್ರ ಶಶಾಂಕ್ ಎಂಬಾತನು ಪ್ರತಿದಿನ ಕಾಲೇಜಿಗೆ ಹೋಗಿ ಬರುವಾಗ ತನ್ನನ್ನು ಪ್ರೀತಿಸುವಂತೆ ಹಾಗೂ ಮದುವೆಯಾಗುವಂತೆ ಪೀಡಿಸುತ್ತಿದ್ದ ಹಾಗೂ ಬೆದರಿಕೆ ಹಾಕುತ್ತಿದ್ದ. ಈ ಯುವಕನ ಕಿರುಕುಳ ತಾಳಲಾರದೆ ವಿದ್ಯಾಶ್ರೀ ಕಳೆದ ತಿಂಗಳು ಏಪ್ರಿಲ್ 19ರಂದು ಕಳೆನಾಶಕ ಸೇವಿಸಿ ಆತ್ಮಹತ್ಯೆಗೆತ್ನಿಸಿದ ಕಾರಣ ಮನೆಯವರು ಆಕೆಯನ್ನು ತಕ್ಷಣ ಹೊಸನಗರ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದು ಪ್ರಥಮ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ‌ ಅಲ್ಲಿ ಕಳೆದ 20 ದಿನಗಳಿಂದ ಜೀವನ್ಮರಣದ ಹೋರಾಟ ನಡೆಸಿದ್ದರು.  ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಕೊನೆಯುಸಿರೆಳೆದಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾಶ್ರೀ ಸಹೋದರ ಕೆ‌‌.ಈ ರಕ್ಷಿತ್  ಹೊಸನಗರ ಆರಕ್ಷಕ ಠಾಣೆಗೆ ದೂರು ನೀಡಿ ತನ್ನ ತಂಗಿಯ ಸಾವಿಗೆ ಕಾರಣರಾದ ಶಶಾಂಕ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.ಪಟೇಲ್ ಈಶ್ವರಪ್ಪ ಗೌಡರಿಗೆ ಓರ್ವ ಪುತ್ರ, ಓರ್ವಳು ಪುತ್ರಿ ಇದ್ದು ಪ್ರೀತಿಯ ಹೆಣ್ಣುಮಗಳ ದುರಂತ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕರು ಆಗ್ರಹಿಸಿದ್ದಾರೆ. ಇನ್ನೂ

ತಮ್ಮ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿನಿ ವಿದ್ಯಾಶ್ರೀ ದುರಂತ ಸಾವಿಗೆ ಕಾಲೇಜಿನ ಉಪನ್ಯಾಸಕರು ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿಯವರು ತೀವ್ರ ಸಂತಾಪ ಸೂಚಿಸಿದ್ದಾರೆ.

ಪೋಷಕರು ಓದು ಎಂದು ಬುದ್ದಿ ಹೇಳಿದ್ದಕ್ಕೆ ನೇಣಿಗೆ ಶರಣಾದ ವಿದ್ಯಾರ್ಥಿ!

 

ಹಾವೇರಿ ತಾಲೂಕು ಗುತ್ತಲ ಸಮೀಪದ ಹೊಸಮೇಲ್ಮುರಿಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ನೇಣು (Suicide) ಬಿಗಿದುಕೊಂಡು ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಮೃತ ಯುವಕ ಹೊಸಮೇಲ್ಮುರಿಯ  ಪಕ್ಕಿರೇಶ ಸುರೇಶ ಅರಳಿ (18) ಎಂದು ತಿಳಿದು ಬಂದಿದೆ. ನಿನ್ನೆ ಗುರುವಾರ ದಿವಸ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆ (PUC Exam) ಬರೆದು ಬಂದ ಮೇಲೆ ಸಂಜೆಯ ವೇಳೆ ಪಾಲಕರು (Parents) ಪರೀಕ್ಷೆ ಇರುವ ಸಲುವಾಗಿ ಕಾಲ ಹರಣ ಮಾಡದೇ ಓದಲು ಬುದ್ಧಿವಾದ ಹೇಳಿದ್ದಕ್ಕೆ ಬೇಜಾರ್ ಮಾಡಿಕೊಂಡು ಅವರ ಹೊಲದಲ್ಲಿನ ರೇಷ್ಮೆ ಮನೆಯಲ್ಲಿ ಶುಕ್ರವಾರ ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೋಷಕರು ದೂರು ನೀಡಿದ್ದಾರೆ.

ಶೀಲಶಂಕಿಸಿ ಪತಿಯ ಕಿರುಕುಳ, ನದಿಗೆ ಹಾರಿ ಮಹಿಳೆ ಆತ್ಮಹತ್ಯೆ: ಪತಿ ಹಾಗು ನಾದಿನಿಯಿಂದ ಕಿರುಕುಳದಿಂದ  ಬೇಸತ್ತು ಮಹಿಳೆಯೊಬ್ಬರು ಕಾವೇರಿ ನದಿಗೆ ಹಾರಿ  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ (Suicide) ಜಿಲ್ಲೆಯಲ್ಲಿ ನಡೆದಿದೆ. ಚಾಮರಾಜನಗರ ಜೆಎಸ್ಎಸ್‌ ಆಸ್ಪತ್ರೆಯಲ್ಲಿ (JSS Hospital) ಫಿಸಿಯೋ ಥೆರಪಿಸ್ಟ್  ಆಗಿದ್ದ 32 ವರ್ಷದ ನಾಗವೇಣಿ ಆತ್ಮಹತ್ಯೆ ಮಾಡಿಕೊಂಡವರಾಗಿದ್ದು ಇವರ ಶವ ಮಂಡ್ಯ (Mandya) ಜಿಲ್ಲೆ ಬೆಳಕವಾಡಿ ಬಳಿ ಹರಿಯುವ ಕಾವೇರಿ ನದಿಯಲ್ಲಿ (Cauvery River) ಶವ ಪತ್ತೆಯಾಗಿದೆ. 

ಚಾಮರಾಜನಗರ: ಜಮೀನು ಮಾರಿ ಸಾಲ ತೀರಿಸಿ ಎಂದು ಪಟ್ಟಿ ಮಾಡಿಟ್ಟು ಯುವಕ ಆತ್ಮಹತ್ಯೆ

ಚಾಮರಾಜನಗರ ಜಿಲ್ಲೆ ಯಳಂದೂರು ನಿವಾಸಿಯಾಗಿದ್ದ ನಾಗವೇಣಿ ಶನಿವಾರ ಕಾಣೆಯಾಗಿದ್ದರು‌.ಈ ಬಗ್ಗೆ ನಾಗವೇಣಿ ಪೋಷಕರು  ಯಳಂದೂರು ಪೊಲೀಸ್ ಠಾಣೆಯಲ್ಲಿ  ದೂರು ದಾಖಲಿಸಿದ್ದರು ಪತ್ನಿಯ ಶೀಲಶಂಕಿಸಿ ಪತಿ ಸ್ವಾಮಿನಾಯಕ ಅವರು ನಾಗವೇಣಿಗೆ ಮಾನಸಿಕ ಹಾಗು ದೈಹಿಕ  ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.  ಈ ಬಗ್ಗೆ ನಾಗವೇಣಿ ಅವರು ತಮ್ಮ ಪೋಷಕರ ಬಳಿ ಅಳಲು ತೋಡಿಕೊಂಡಿದ್ದರು. 

ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಷಯರೋಗ ಸೂಪರ್‌‌ವೈಸರ್ ಆಗಿರುವ ಸ್ವಾಮಿನಾಯಕ ಹಾಗು ಅವರ ಸಹೋದರಿ ಸಂತೇಮರಹಳ್ಳಿ ಮೋಳೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಭಾಗ್ಯ ಅವರು ನಾಗವೇಣಿಗೆ ನಿತ್ಯ ಕಿರುಕುಳ ನೀಡುತ್ತಿದ್ದು ಇದರಿಂದ ಬೇಸತ್ತು ನಾಗವೇಣಿ ಮನೆ ಬಿಟ್ಟು ಹೋಗಿ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಾಗವೇಣಿ ಪೋಷಕರು, ನಾಗವೇಣಿಯ ಪತಿ ಸ್ವಾಮಿನಾಯಕ್ ಹಾಗು ನಾದಿನಿ  ಭಾಗ್ಯ ವಿರುದ್ದ  ಮಂಡ್ಯ ಜಿಲ್ಲೆ ಮಳವಳ್ಳಿ ತಾಲೋಕಿನ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

click me!