ಉತ್ತರ ಪ್ರದೇಶದಲ್ಲಿ ನಡುಗಿದ ಮಾಫಿಯಾ, ಗ್ಯಾಂಗ್‌ಸ್ಟರ್ ಅತೀಕ್ ಅಹಮ್ಮದ್ ಪುತ್ರನ ಎನ್‌ಕೌಂಟರ್!

By Suvarna News  |  First Published Apr 13, 2023, 1:34 PM IST

ಉತ್ತರ ಪ್ರದೇಶದಲ್ಲಿ ಮಾಫಿಯಾ, ಗ್ಯಾಂಗ್‌ಸ್ಟರ್ಸ್ ಹೂತು ಹಾಕುತ್ತೇನೆ ಎಂದು ವಿಧಾನಸೌಧದಲ್ಲಿ ಪ್ರತಿಜ್ಞೆ ಮಾಡಿದ್ದರು. ಇದರಂತೆ ಒಬ್ಬರ ಹಿಂದೆ ಮತ್ತೊಬ್ಬ ಪಾತಕಿಗಳನ್ನು ಎನ್‌ಕೌಂಟರ್ ಮಾಡುತ್ತಿದ್ದಾರೆ. ಗ್ಯಾಂಗ್‌ಸ್ಟರ್ ಅತೀಕ್ ಅಹಮ್ಮದ್ ಪುತ್ರ ಹಾಗೂ ಮತ್ತೊರ್ವ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ನನ್ನು ಯುಪಿ STF ಎನ್‌ಕೌಂಟರ್ ಮಾಡಿದ್ದಾರೆ.


ಲಖನೌ(ಏ.13): ಶಾಸಕ ರಾಜು ಪಾಲ್ ಹತ್ಯೆ ಪ್ರಮುಖ ಸಾಕ್ಷಿ, ಉಮೇಶ್‌ ಪಾಲ್‌ ಕೊಲೆ ಪ್ರಕರಣ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಪ್ರಶ್ನಿಸಿತ್ತು. ಇದರ ಬೆನ್ನಲ್ಲೇ ಉತ್ತರ ಪ್ರದೇಶದ ಮಾಫಿಯಾ ಗ್ಯಾಂಗ್‌ನ್ನು ಮಣ್ಣಲ್ಲಿ ಹೂತುಹಾಕುತ್ತೇನೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದರು. ಈ ಹೇಳಿಕೆ ಬೆನ್ನಲ್ಲೇ ಯುಪಿ ಪೊಲೀಸರು ಉಮೇಶ್ ಪಾಲ್ ಹತ್ಯೆ ಆರೋಪಿಗಳನ್ನ ಹುಡುಕಿ ಹುಡುಕಿ ಎನ್‌ಕೌಂಟ್ ಆರಂಭಿಸಿದ್ದರು. ಇತ್ತ ರಾಜು ಪಾಲ್ ಹತ್ಯೆ ಮಾಡಿದ ಅಪರಾಧಿ ಗ್ಯಾಂಗ್‌ಸ್ಟರ್ ಅತೀಕ್ ಅಹಮ್ಮದ್ ಒಂದೊಂದು ವಾರ ಒಂದೊಂದು ಜೈಲಿಗೆ ಕರೆದೊಯ್ಯಲಾಗುತ್ತಿದೆ. ಇದರ ಬೆನ್ನಲ್ಲೇ ಉಮೇಶ್ ಪಾಲ್ ಕೊಲೆ ಆರೋಪಿ, ಅತೀಕ್ ಅಹಮ್ಮದ್ ಪುತ್ರ ಅಸಾದ್ ಹಾಗೂ ಮತ್ತೊರ್ವ ಆರೋಪಿ ಮಕ್ಸೂಸದನ್ ಪುತ್ರ ಗುಲಾಂ ಇಬ್ಬರನ್ನು ಉತ್ತರ ಪ್ರದೇಶ ಸ್ಪೆಷಲ್ ಟಾಸ್ಕ್ ಫೋರ್ಸ್(STF) ಎನ್‌ಕೌಂಟರ್ ಮಾಡಿದ್ದಾರೆ.

ಅಸಾದ್ ಹಾಗೂ ಗುಲಾಂ ಇಬ್ಬರು ಮೋಸ್ಟ್ ವಾಂಟೆಡ್ ಕ್ರಿಮಿನಲ್ ಪಟ್ಟಿಯಲ್ಲಿ ಸೇರಿಕೊಂಡಿದ್ದರು. ಉಮೇಶ್ ಪಾಲ್ ಹತ್ಯೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ ಇವರಿಬ್ಬರಿಗ ತಲೆಗೆ ಉತ್ತರ ಪ್ರದೇಶ ಸರ್ಕಾರ 5 ಲಕ್ಷ ರೂಪಾಯಿ ಇನಾಮು ಘೋಷಿಸಿತ್ತು. ಇದೀಗ ಇಬ್ಬರನ್ನು STFಎನ್‌ಕೌಂಟರ್ ಮಾಡಿದೆ. 

Tap to resize

Latest Videos

ಉಮೇಶ್‌ ಪಾಲ್‌ ಕಿಡ್ನ್ಯಾಪ್‌ ಕೇಸ್‌: ಯುಪಿ ಗ್ಯಾಂಗ್‌ಸ್ಟರ್‌ ಅತೀಕ್ ಅಹಮದ್‌ಗೆ ಜೀವಾವಧಿ ಶಿಕ್ಷೆ

ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಅಸಾದ್ ಹಾಗೂ ಗುಲಾಂ ಇಬ್ಬರು ಪ್ರಮುಖ ಆರೋಪಿಯಾಗಿದ್ದರು. ಇವರ ಪತ್ತೆಗಾಗಿ ಬಲೆ ಬೀಸಿದ್ದ ಸ್ಪೆಷಲ್ ಟಾಸ್ಕ್ ಫೋರ್ಸ್ ತಂಡ ಇಂದು ಜಾನ್ಸಿ ಬಳಿ ಎನ್‌ಕೌಂಟರ್ ಮಾಡಿದೆ. ಈ ಮೂಲಕ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಒಟ್ಟು ನಾಲ್ವರು ಮೋಸ್ಟ್ ವಾಂಟೆಡ್ ಕ್ರಿಮಿನಲ್ಸ್ ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ.

ಅಸಾದ್ ಹಾಗೂ ಗುಲಾಂ ಎನ್‌ಕೌಂಟರ್‌ಗೂ ಮೊದಲು, ಪ್ರಯಾಗರಾಜ್‌ನ ಗೋಠಿ ಹಾಗೂ ಬೇಲ್ವಾ ಪ್ರದೇಶಗಳ ಮಧ್ಯೆ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ವಿಜಯ ಚೌಧರಿ ಅಲಿಯಾಸ್‌ ಉಸ್ಮಾನ್‌ ಹತನಾಗಿದ್ದ.  ಉಮೇಶ್‌ ಮೇಲೆ ದಾಳಿ ಮಾಡಲು ಬಳಕೆ ಮಾಡಿದ ಎಸ್‌ಯುವಿಯನ್ನು ಚಾಲನೆ ಮಾಡುತ್ತಿದ್ದ ಆರೋಪಿ ಅರ್ಬಾಜ್‌ನನ್ನು ಬಂಧಿಸಲು ಪೊಲೀಸರು ಸುತ್ತುವರೆದ ಸಮಯದಲ್ಲಿ ಆತನ ಗುಂಡಿನ ದಾಳಿ ನಡೆಸಿದ್ದಾನೆ. ಆತ್ಮರಕ್ಷಣೆಗಾಗಿ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಆರೋಪಿ ಗಾಯಗೊಂಡಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿದರು ಸಹ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.  

ಉಮೇಶ್ ಪಾಲ್ ಹತ್ಯೆ ಮಾಡಿದದ್ದ ಆರೋಪಿ ಆಪ್ತನ ಮನೆ ಮೇಲೆ ಬುಲ್ಡೋಡರ್ ಹತ್ತಿಸಿದ ಯೋಗಿ ಸರ್ಕಾರ!

ಉಮೇಶ್‌ ಪಾಲ್‌ ಕೊಲೆ ಪ್ರಕರಣದ ಆರೋಪಿ, ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ನ ನಿಕಟ ಸಹಚರ ಜಾಫರ್‌ ಅಹ್ಮದ್‌ ಎಂಬಾತನ ಪ್ರಯಾಗರಾಜ್‌ದಲ್ಲಿದ್ದ ಮನೆಯನ್ನು ಅಲ್ಲಿನ ಅಭಿವೃದ್ಧಿ ಅಧಿಕಾರಿಗಳು ಬುಲ್ಡೋಜರ್‌ ಮೂಲಕ ನೆಲಸಮಗೊಳಿಸಿದ್ದಾರೆ. ಉಮೇಶ್‌ ಪಾಲ್‌ನನ್ನು ಫೆ.24ರಂದು ಐವರು ಹಂತಕರು ಗುಂಡಿಕ್ಕಿ ಸಾಯಿಸಿದ್ದರು. ಈ ಪೈಕಿ ಉಮೇಶ್‌ ಮೇಲೆ ಮೊದಲು ಗುಂಡು ಹೊಡೆದವನೇ ವಿಜಯ್‌ ಆಗಿದ್ದ. ಫೆ.27ರಂದು ಇನ್ನೊಬ್ಬ ಹಂತಕ ಅರ್ಬಾಜ್‌ನನ್ನು ಎನ್‌ಕೌಂಟರ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

click me!