
ಲಂಡನ್ (ಜುಲೈ 4, 2023): ಕೇರಳ ಮೂಲದ ವ್ಯಕ್ತಿ ಯುಕೆಯಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳ ಸಾವಿಗೆ ಕಾರಣನಾಗಿದ್ದಾನೆ. ಈ ಸಂಬಂಧ ಕೇರಳ ಮೂಲದ ಎನ್‌ಆರ್‌ಐ 52 ವರ್ಷದ ಸಾಜು ಚೆಲವಾಲೆಲ್‌ಗೆ ಸ್ಥಳೀಯ ನ್ಯಾಯಾಲಯ 40 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ನಾರ್ಥಾಂಪ್ಟನ್‌ನಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ, ಸಾಜು ಚೆಲವಾಲೆಲ್ ತಮ್ಮ ಮೇಲಿನ ಆರೋಪಗಳನ್ನು ಒಪ್ಪಿಕೊಂಡಿದ್ದರು ಎಂದು ತಿಳಿದುಬಂದಿದ್ದು, ಈಗ ಅಪರಾಧಿಗೆ ಸಾಕ್ಷಿ ಒದಗಿಸಲಾಗಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ತುರ್ತು ಸಿಬ್ಬಂದಿಗೆ ಇಂಗ್ಲೆಂಡ್‌ನ ಕೆಟ್ಟರಿಂಗ್ ನಗರದ ಮನೆಯಿಂದ ಕರೆ ಬಂದಿದ್ದು, ಕುಟುಂಬ ಸದಸ್ಯರು ಗಂಭೀರವಾದ ಗಾಯಗಳಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂತು. ಬಳಿಕ, ಆ ಸಿಬ್ಬಂದಿ ಬಂದು ನೋಡಿದಾಗ ಸಾಜು ಅವರ ಪತ್ನಿ ಅಂಜು ಅಶೋಕ್ (35) ಮತ್ತು ಅವರ ಮಕ್ಕಳಾದ ಜೀವ ಸಾಜು (6) ಮತ್ತು ಜಾನ್ವಿ ಸಾಜು (4) ಮೃತದೇಹಗಳು ಪತ್ತೆಯಾಗಿದ್ದವು.
ಇದನ್ನು ಓದಿ: ಪತ್ನಿ ಶವ 3 ದಿನ ಫ್ರೀಜರ್‌ನಲ್ಲಿಟ್ಟ ಪಾಪಿ ಪತಿ: ಗಂಡನಿಂದ್ಲೇ ಕೊಲೆ ಎಂದು ಮಹಿಳೆ ಕುಟುಂಬಸ್ಥರ ಆರೋಪ
ಅಲ್ಲದೆ, ಮೂವರ ಕತ್ತನ್ನು ಹಿಸುಕಿ ಕೊಲೆ ಮಾಡಲಾಗಿತ್ತು. ಅವರು ಉಸಿರುಕಟ್ಟುವಿಕೆಯಿಂದ ಮೃತಪಟ್ಟಿದ್ದರು ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಕಂಡುಬಂತು. ಬಳಿಕ ನಾರ್ಥಾಂಪ್ಟನ್ ಕ್ರೌನ್ ಕೋರ್ಟ್‌ನಲ್ಲಿ ಸಾಜು 3 ಕೊಲೆ ಆರೋಪಗಳಿಗೆ ತಪ್ಪೊಪ್ಪಿಕೊಂಡಿದ್ದರು. 2021 ರಿಂದ, ಕೆಟ್ಟರಿಂಗ್ ಜನರಲ್ ಆಸ್ಪತ್ರೆಯ ಮೂಳೆಚಿಕಿತ್ಸೆ ವಿಭಾಗದಲ್ಲಿ ನರ್ಸ್ ಆಗಿ ಕೊಲೆಯಾದ ಅಂಜು ಅಶೋಕ್ ಕೆಲಸ ಮಾಡುತ್ತಿದ್ದರು. ಆಕೆ ಮೂಲತಃ ಕೇರಳದ ಕೊಟ್ಟಾಯಂ ಜಿಲ್ಲೆಯ ವೈಕೋಮ್‌ನವರು. ಆಸ್ಪತ್ರೆಯು ಅವರನ್ನು ಬದ್ಧತೆ ಮತ್ತು ದಯೆಯುಳ್ಳ ಸ್ಟಾಫ್ ನರ್ಸ್ ಎಂದು ಬಣ್ಣಿಸುವ ಮೂಲಕ ಗೌರವಿಸಿತ್ತು ಎಂದೂ ತಿಳಿದುಬಂದಿದೆ.
ಅಂಜು ತನ್ನ ಶಾಲಾ ಶಿಕ್ಷಣವನ್ನು ಮುಗಿಸಿದ ನಂತರ ಕೊಚ್ಚಿಯ ಅಮೃತಾ ಆಸ್ಪತ್ರೆಯಲ್ಲಿ ಕೆಲಸ ಪಡೆದಿದ್ದರು. ಅಲ್ಲದೆ, ಸೌದಿ ಅರೇಬಿಯಾದಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದರು, IELTS ಪರೀಕ್ಷೆಗೆ ಅಧ್ಯಯನ ಮಾಡಲು ವೈಕೋಮ್‌ಗೆ ಮರಳಿದರು ಮತ್ತು ಅಂತಿಮವಾಗಿ ಯುಕೆಯ ಕೆಟ್ಟರಿಂಗ್‌ನಲ್ಲಿ ಉದ್ಯೋಗ ಕಂಡುಕೊಂಡಿದ್ದರು.
ಇದನ್ನೂ ಓದಿ: ಪಾಪಿಗೆ ತಕ್ಕ ಶಿಕ್ಷೆ! ಮನೆಗೆ ನುಗ್ಗಿ ರೇಪ್ ಮಾಡಿದವನ ಮರ್ಮಾಂಗವನ್ನೇ ಸೀಳಿದ ಸಂತ್ರಸ್ತೆ
ಇನ್ನು, ಯುಕೆಯಲ್ಲಿ ಉದ್ಯೋಗದ ಕೊರತೆಯಿಂದಾಗಿ ಸಾಜು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ವರದಿಗಳು ಹೇಳುತ್ತಿವೆ. ಈ ಜೋಡಿ 2012ರಲ್ಲಿ ವಿವಾಹವಾಗಿತ್ತು. ಸಾಜು ಕಣ್ಣೂರಿನ ಪಡಿಯೂರು ಪಂಚಾಯತ್‌ನ ಕೊಂಬನ್‌ಪಾರ ಮೂಲದವರಾಗಿದ್ದು, ಪತ್ರಿಕೆಯಲ್ಲಿನ ಮ್ಯಾಟ್ರಿಮೋನಿಯಲ್ ಜಾಹೀರಾತಿನ ಮೂಲಕ ಅಂಜು ಅವರ ಪರಿಚಯವಾಗಿ ಮದುವೆಯಾಗಿದ್ದರು. 12 ನೇ ತರಗತಿಯ ನಂತರ ಸಾಜು ಮನೆ ತೊರೆದು ಬೆಂಗಳೂರಿನಲ್ಲಿ ಡ್ರೈವರ್ ಆಗಿ ಕೆಲಸ ಕಂಡುಕೊಂಡರು. ಬಳಿಕ ಸೌದಿ ಅರೇಬಿಯಾದ ಕಂಪನಿಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಅಂಜು ಸಾಜು ಅವರನ್ನು ಮದುವೆಯಾಗದ್ದರು ಎಂದೂ ತಿಳಿದುಬಂದಿದೆ. .
ಇದನ್ನೂ ಓದಿ: ವೃದ್ಧನ ಮೃತದೇಹ 2 ವರ್ಷ ಫ್ರೀಜರ್‌ನಲ್ಲಿಟ್ಟ: ಪಿಂಚಣಿ ಹಣವನ್ನು ಶಾಪಿಂಗ್‌ಗೆ ಬಳಸ್ತಿದ್ದ ಪಾಪಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ