ಯುಗಾದಿ ಹಬ್ಬದ ಮಾಂಸದ ಚೀಟಿ ಹಾಕಿದ್ದೀರಾ? ಹಾಗಿದ್ರೆ ತಪ್ಪದೇ ಈ ಸುದ್ದಿ ಓದಿ

By Suvarna News  |  First Published Mar 28, 2024, 11:36 AM IST

ಯುಗಾದಿ ಹಬ್ಬದ ಮಾಂಸದ ಚೀಟಿ ಹಾಕಿದ್ದೀರಾ? ಹಾಗಿದ್ರೆ ಈ ಸುದ್ದಿ ತಪ್ಪದೇ ಓದಿ. ಬೆಂಗಳೂರಿನಲ್ಲಿ ಯುಗಾದಿ ಹಬ್ಬದ ಸಾಮಗ್ರಿ, ಮಾಂಸಕ್ಕಾಗಿ ಚೀಟಿ ಹಾಕಿದ್ದ ಸಾವಿರಾರು ಜನ ಈಗ ಮೋಸ ಹೋಗಿದ್ದಾರೆ.


ಬೆಂಗಳೂರು (ಮಾ.28): ಯುಗಾದಿ ಹಬ್ಬದ ಮಾಂಸದ ಚೀಟಿ ಹಾಕಿದ್ದೀರಾ? ಹಾಗಿದ್ರೆ ಈ ಸುದ್ದಿ ತಪ್ಪದೇ ಓದಿ. ಬೆಂಗಳೂರಿನಲ್ಲಿ ಯುಗಾದಿ ಹಬ್ಬದ ಸಾಮಗ್ರಿ, ಮಾಂಸಕ್ಕಾಗಿ ಚೀಟಿ ಹಾಕಿದ್ದ ಸಾವಿರಾರು ಜನ ಈಗ ಮೋಸ ಹೋಗಿದ್ದಾರೆ. ಯುಗಾದಿ ಹಬ್ಬದ   ಹಬ್ಬದ ಮಾಂಸದ ಚೀಟಿ ಹಾಕಿದವರಿಗೆ  ಉಂಡೆನಾಮ ಹಾಕಿ ವ್ಯಕ್ತಿಯೊಬ್ಬ ರಾತ್ರೋರಾತ್ರಿ ಮನೆ ಖಾಲಿ ಮಾಡಿದ್ದಾನೆ.

ಯುಗಾದಿ ಹಬ್ಬದ ಚೀಟಿ ಮಾಡುತ್ತಿದ್ದ ಪುಟ್ಟಸ್ವಾಮಿ ಎಂಬಾತ ಎಲ್ಲರಿಗೂ ಮೋಸ ಮಾಡಿ ರಾತ್ರೋ ರಾತ್ರಿ ಮನೆ ಖಾಲಿ ಮಾಡಿದ್ದು, ಈ ಸಂಬಂಧ ಬ್ಯಾಟರರಾಯನಪುರ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಒಬ್ಬೊಬ್ಬರ ಬಳಿ 4 ರಿಂದ 5 ಸಾವಿರ ಹಣ ಪಡೆದು ಮೋಸ ಮಾಡಿದ್ದು, ಬೆಂಗಳೂರಿನ ಗಿರಿನಗರದಲ್ಲಿ ಈ ಘಟನೆ  ನಡೆದಿದೆ.

Tap to resize

Latest Videos

undefined

ಬಾಣಸವಾಡಿಯಲ್ಲಿ ಹವಾ ಇಡೋ ವಿಚಾರಕ್ಕೆ ರೌಡಿಶೀಟರ್ ಕೇರಂ ದಿನೇಶ್ ಕೊಲೆಗೈದ ಸ್ಪೀಡ್ ದಿಲೀಪ್ ಗ್ಯಾಂಗ್

ಪುಟ್ಟಸ್ವಾಮಿ ಓಡಿ ಹೋಗಿದ್ದಾನೆ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ಮೋಸ ಹೋದವರೆಲ್ಲ ಆತನ ಮನೆ ಮುಂದೆ ಜಮಾಯಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಪುಟ್ಟಸ್ವಾಮಿ ಯುಗಾದಿ ಚೀಟಿ ನಡೆಸುತ್ತಿದ್ದ. ಈ ಬಾರಿ ಚೀಟಿ ಸಂಖ್ಯೆನ್ನೂ ಹೆಚ್ಚಿಸಿಕೊಂಡು ಕೋಟ್ಯಾಂತರ  ರೂಪಾಯಿ ಗುಳುಂ ಮಾಡಿದ್ದಾನೆ. ಯುಗಾದಿ ಹತ್ತಿರ ಬಂದಿದ್ದೆ ಪುಟ್ಟಸ್ವಾಮಿ ಎಸ್ಕೇಪ್ ಆಗಿದ್ದು, ಹಬ್ಬಕ್ಕೆ ದುಡ್ಡು ಒಂದೇ ಬಾರಿಗೆ ಹೊಂದಿಸೋಕೆ ಆಗಲ್ಲ ಅಂತ ಚೀಟಿ ಹಾಕಿದ್ದ ಜನರಿಗೆ ಈಗ ದಿಕ್ಕೇ ತೋಚದಂತೆ ಆಗಿದೆ.

ಬೆಂಗಳೂರು: ಸಿಕ್ಸ್‌ ಪ್ಯಾಕ್‌ ಗೆಳೆಯನ 'ಮೈನಾ' ಲವ್ ಸ್ಟೋರಿ; ವಿಶೇಷ ಚೇತನ ಹುಡುಗಿಗೆ 56 ಲಕ್ಷ ರೂ. ಪಂಗನಾಮ

ಯುಗಾದಿ ಅಂದರೆ 'ಯುಗದ ಆದಿ' ಅಂದರೆ ಹೊಸ ಯುಗದ ಆರಂಭ ಎಂದರ್ಥ. ಚೈತ್ರ ಮಾಸದ ಮೊದಲ ದಿನದಂದು ಯುಗಾದಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಏಪ್ರಿಲ್ 9 ರಂದು (ಮಂಗಳವಾರ) ಯುಗಾದಿ ಹಬ್ಬ ಆಚರಿಸಲಾಗುವುದು. ಈ ಹಬ್ಬವನ್ನು ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಇನ್ನು ಕರಾವಳಿ ಜಿಲ್ಲೆ, ಕೇರಳ ಮತ್ತು ಉತ್ತರ ಭಾರತದ ಕೊಲ್ಕತ್ತಾದ ಸೇರಿ ಕೆಲವು ಕಡೆ ಏಪ್ರಿಲ್​ 14ರ ಸೌರಮಾನ ಯುಗಾದಿ (ವಿಷು) ಹಬ್ಬವನ್ನು ಆಚರಿಸಲಾಗುತ್ತದೆ.

click me!