ಬೆಂಗಳೂರಿನಲ್ಲಿ ಜಿಮ್‌ನಲ್ಲಿ ಪರಿಚಿತವಾದ ಸಿಕ್ಸ್ ಪ್ಯಾಕ್ ಗೆಳೆಯನಿಗೆ ತನು, ಮನ ಹಾಗೂ ಧನವನ್ನು ಅರ್ಪಿಸಿದ ವಿಶೇಷ ಚೇತನ ಯುವತಿಗೆ ಬರೋಬ್ಬರಿ 56 ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರು (ಮಾ.27): ಬೆಂಗಳೂರಿನಲ್ಲಿ ಜಿಮ್‌ನಲ್ಲಿ ಪರಿಚಿತವಾದ ಸಿಕ್ಸ್ ಪ್ಯಾಕ್ ಗೆಳೆಯನಿಗೆ ತನು, ಮನ ಹಾಗೂ ಧನವನ್ನು ಅರ್ಪಿಸಿದ ವಿಶೇಷ ಚೇತನ ಯುವತಿಗೆ ಬರೋಬ್ಬರಿ 56 ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಆರೋಗ್ಯಕ್ಕಾಗಿ ಜಿಮ್ ಸೇರಿಕೊಂಡ ವಿಶೇಷ ಚೇತನ ಯುವತಿಯ ಸ್ನೇಹ ಸಂಪಾದಿಸಿದ ಜಿಮ್‌ಬಾಡಿ ಗೆಳೆಯ ಮಾಡಿದ್ದೆಲ್ಲೂ ಮಹಾಮೋಸ... ಜಿಮ್‌ನಲ್ಲಿ ಸಭ್ಯಸ್ಥನಂತೆ ಮಾತನಾಡಿ ಸ್ನೇಹ ಬೆಳೆಸಿ, ಪ್ರೀತಿಯ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿದ್ದಾನೆ. ನಂತರ ಯುವತಿಯಿಂದ 56 ಲಕ್ಷ ರೂ. ಹಣವನ್ನು ಪಡೆದು, ದೈಹಿಕವಾಗಿಯೂ ಬಳಸಿಕೊಂಡು ಕೈ ಕೊಟ್ಟು ಓಡಿಹೋಗಿದ್ದಾನೆ. ತನು, ಮನ, ಧನವನ್ನೂ ಅರ್ಪಿಸಿದ ವಿಶೇಷ ಚೇತನ ಯುವತಿ, ಮೋಸಹೋಗಿ ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದಾಳೆ.
undefined
ಬೆಂಗಳೂರು ಪ್ರತಿಷ್ಠಿತ ಬ್ಯಾಂಕ್ ಮಾಜಿ ಉದ್ಯೋಗಿ ಆಗಿದ್ದರೂ, ಲ್ಯಾಪ್‌ಟಾಪ್ ಕದಿಯೋದೇ ಈಕೆಯ ಖಯಾಲಿ
ಹೌದು, ನಟ ಚೇತನ್ ಅಹಿಂಸಾ ಮತ್ತು ನಿತ್ಯಾ ಮೆನನ್ ಅವರ 'ಮೈನಾ' ಸಿನಿಮಾ ನೀವೆಲ್ಲರೂ ನೋಡಿರುತ್ತೀರಿ. ಅದರಲ್ಲಿ ರೈಲಿನಲ್ಲಿ ವಿಶೇಷ ಚೇತನ ಯುವತಿಯ ಮೇಲೆ ಹುಟ್ಟುವ ಪ್ರೀತಿ ಸುಖಾಂತ್ಯವನ್ನು ಕಾಣುತ್ತದೆ. ಎರಡೂ ಕಾಲಿಲ್ಲದ ಸುಂದರ ನಾಯಕಿಯನ್ನು ಪ್ರೀತಿ ಮಾಡಿದ ನಾಯಕ, ಆಕೆಯಂತೆಯೇ ತಾನೂ ಅಂಗವಿಕಲ ಎಂದು ನಂಬಿಸಿ ಮದುವೆಯಾಗಿ ನಂತರ ಸತ್ಯವನ್ನು ಹೇಳಿ ಸುಂದರ ಜೀವನ ಕೊಡುತ್ತಾನೆ. ಆದರೆ, ಬೆಂಗಳೂರಿನ ಜಿಮ್ ಒಂದರಲ್ಲಿ ವಿಶೇಷ ಚೇತನ ಯುವತಿಯ ಮೇಲೆ ಹುಟ್ಟಿದ ಪ್ರೀತಿ ಮೋಸದಲ್ಲಿ ಅಂತ್ಯವಾಗಿದೆ. ಸಿನಿಮಾದಲ್ಲಿ ವಿಶೇಷ ಚೇತನ ಯುವತಿಗೆ ಪ್ರೀತಿಸಿದ ಯುವಕ ಬಾಳು ಕೊಟ್ಟು ನಾಯಕನಾದರೆ, ಬೆಂಗಳೂರಿನ ಘಟನೆಯಲ್ಲಿ ವಿಶೇಷ ಚೇತನ ಯುವತಿಯನ್ನು ಪ್ರೀತಿಸಿದ ಜಿಮ್ ಬಾಡಿ ಗೆಳೆಯನೇ ವಿಲನ್ ಆಗಿದ್ದಾನೆ. ವಂಚನೆ ಮಾಡಿದ ಆರೋಪಿ ಸುರೇಂದ್ರ ಮೂರ್ತಿ ಆಗಿದ್ದಾನೆ. 2019ರಲ್ಲಿ ಪ್ರೀತಿಯ ನಾಟಕ ಆರಂಭಿಸಿದ ಸುರೇಂದ್ರ, ವಿಶೇಷ ಚೇತನಳನ್ನ ಮದುವೆ ಆಗುವುದಾಗಿ ಬರೋಬ್ಬರಿ 56 ಲಕ್ಷ ರೂ. ಹಣವನ್ನು ಪಡೆದು ವಂಚನೆ ಮಾಡಿದ್ದಾನೆ.
ಜಿಮ್‌ಗೆ ಬಂದ ವಿಶೇಷ ಚೇತನ ಯುವತಿಯನ್ನು ಪ್ರೀತಿಸಿ ಮದುವೆಯಾಗೋಣ ಎಂದು ನಂಬಿಸಿದ್ದಾನೆ. ನಂತರ, ನಾವಿಬ್ಬರೂ ಮುಂದಿನ ಜೀವನದಲ್ಲಿ ಸಂತಸದಿಂದ ಜೀವನ ಮಾಡಬೇಕೆಂದರೆ ಒಂದು ಬ್ಯುಸಿನೆಸ್ ಕಂಪನಿ ಆರಂಭಿಸುತ್ತೇನೆ. ಅದಕ್ಕೆ ನಾನು ಹಣ ಹೊಂದಿಸುತ್ತಿದ್ದು, ನಿನ್ನ ಬಳಿ ಹಣವಿದ್ದರೆ ಕೊಡು ಎಂದು ಕೇಳಿದ್ದಾನೆ. ನಂತರ, ಯುವತಿ ತಾನು ಮುಂದಿನ ಭವಿಷ್ಯಕ್ಕಾಗಿ ಕೂಡಿಟ್ಟ ಹಣವನ್ನು ಕೊಟ್ಟಿದ್ದಾಳೆ. ಆಗ, ಇನ್ನೂ ಸ್ವಲ್ಪ ಹಣದ ಅಗತ್ಯವಿದೆ ಎಂದು ಹೇಳಿದಾಗ, ತನ್ನ ಬಳಿ ಹಣವಿಲ್ಲವೆಂದರೂ ಹಠ ಮಾಡಿ ಯುವತಿ ಬಳಿಯಿದ್ದ ಚಿನ್ನ-ಬೆಳ್ಳಿಯನ್ನು ಅಡವಿಟ್ಟು ಹಣವನ್ನು ಪಡೆದುಕೊಂಡಿದ್ದಾನೆ. ನಂತರ, ತನಗೆ ಸಾಲ ಮಾಡಿದ್ದಕ್ಕೆ ಬಡ್ಡಿ ಕಟ್ಟಲಾಗುತ್ತಿಲ್ಲ ಎಂದು ಹೇಳಿ ಯುವತಿ ಕಡೆಯಿಂದ ಸಾಲ ಮಾಡಿಸಿ ಹಣ ಪೀಕಿದ್ದಾನೆ. ನಂತರ, ಇದೇ ಸಲುಗೆಯಿಂದ ಯುವತಿಯನ್ನು ಕರೆದುಕೊಂಡು ಹೋಗಿ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದಾನೆ.
Vijayapura Murder: ಇದು ಕೋಲ್ಡ್ ಬ್ಲಡ್ ಮರ್ಡರ್ ಕೇಸ್..! ಅಮ್ಮ-ಮಗನನ್ನ ಮುಗಿಸಿ ಚಾಟ್ಸ್ ಮಾರ್ತಿದ್ದ ಹಂತಕ..!
ಯುವತಿ ನಾವು ಪ್ರೀತಿಸುತ್ತಾ 5 ವರ್ಷಗಳಾಗುತ್ತಿವೆ. ಮದುವೆ ಮಾಡಿಕೊಳ್ಳುವಂತೆ ಕೇಳಿದಾಗ ಪ್ರತಿಬಾರಿ ಒಂದೊಂದು ನೆಪ ಹೇಳುತ್ತಲೇ ಬಂದಿದ್ದಾನೆ. ನಂತರ, ತನಗೆ ಹಣದ ಅಗತ್ಯವಿದೆ ಎಂದು ಕೇಳಿದಾಗ 56 ಲಕ್ಷ ರೂ.ನಲ್ಲಿ 9 ಲಕ್ಷ ರೂ. ಹಣವನ್ನು ವಾಪಸ್ ಕೊಟ್ಟಿದ್ದಾನೆ. ಉಳಿದ 47 ಲಕ್ಷ ರೂ. ಹಣ ಕೊಡು ಎಂದು ಕೇಳಿದರೆ ಮದುವೆ ಮಾಡಿಕೊಳ್ಳುವ ಗಂಡನಿಗೆ ಹಣದ ಲೆಕ್ಕಾಚಾರ ಹಾಕ್ತೀಯಾ ಎಂದು ಕೇಳಿದ್ದಾನೆ. ಸರಿ ಮದುವೆ ಯಾವಾಗ ಮಾಡಿಕೊಳ್ತೀಯಾ ಎಂದು ಕೇಳಿದರೆ ಜಗಳ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ. ಆಗ ಯುವತಿ ಆತನ ಮನೆಗೆ ಹೋಗಿ ವಿಚಾರ ಹೇಳಿದಾಗ ಆತನ ತಂದೆ ವಿಶೇಷ ಚೇತನ ಹುಡುಗಿ ನಮ್ಮ ಮನೆಗೆ ಸೊಸೆಯಾಗಿ ಬರುವುದು ಬೇಡ ಎಂದು ಹೇಳಿದ್ದಾರೆ. ಹಣವನ್ನಾದರೂ ಕೊಡಿ ಎಂದರೆ ನೀನು ಅವನನ್ನೇ ಕೇಳಿ ಎಂದು ಹೇಳಿದ್ದಾರೆ. ಹೀಗಾಗಿ, ದಿಕ್ಕು ತೋಚದ ಯುವತಿ ನ್ಯಾಯಕ್ಕಾಗಿ ಸಂಜಯ್ ನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಮಾಡಿದ್ದಾಳೆ.