* ಹನುಮಂತಪ್ಪನ ಮೇಲೆ ಪೆಟ್ರೋಲ್ ಸುರಿದು ದಹನಕ್ಕೆ ಯತ್ನಿಸಿದ ಗಂಗಾಧರ್
* ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಗರಗ ಗ್ರಾಮದ ಹನುಮಂತಪ್ಪನ ಜಮೀನಿನಲ್ಲಿ ನಡೆದ ದುಷ್ಕೃತ್ಯ
* ಗಾಯಾಳು ಹನುಮಂತಪ್ಪನಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ಚಿತ್ರದುರ್ಗ(ಮೇ.04): ಜಮೀನು ವಿವಾದ(Land Dispute) ಹಿನ್ನೆಲೆ ವ್ಯಕ್ತಿಯ ಸಜೀವ ದಹನಕ್ಕೆ ಯತ್ನ ಮಾಡಿರೋ ದುಷ್ಕೃತ್ಯ ಚಿತ್ರದುರ್ಗ(Chitradurga) ಜಿಲ್ಲೆ ಹೊಸದುರ್ಗ(Hosadurga) ತಾಲೂಕಿನ ಗರಗ ಗ್ರಾಮದ ರೈತ ಹನುಮಂತಪ್ಪನ ಜಮೀನಿನಲ್ಲಿ ಇಂದು(ಬುಧವಾರ) ನಡೆದಿದೆ.
ಗರಗ ಗ್ರಾಮದ ಗಂಗಾಧರ ಹಾಗು ಹೆಗ್ಗೆರೆ ಗ್ರಾಮದ ಹನುಮಂತಪ್ಪ ನಡುವೆ ಕಳೆದ ಎರಡ್ಮೂರು ವರ್ಷಗಳಿಂದಲೂ ಜಮೀನು ವಿಚಾರಕ್ಕೆ ಗಲಾಟೆ ಶುರುವಾಗಿದ್ದು, ನಿತ್ಯ ಜಮೀನಿಗೆ ತೆರಳಿದ್ರೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇರುತ್ತಿತ್ತು. ಆದ್ರೆ ನಿನ್ನೆ ಜಮೀನಿನಲ್ಲಿ ಸ್ವಲ್ಪ ಕೆಲಸವಿದ್ದ ಕಾರಣ ಜಮೀನಿಗೆ ಹನುಮಂತಪ್ಪ ತೆರಳಿದ್ದ ವೇಳೆ, ಗಂಗಾಧರ್ ಹಾಗೂ ಹನುಮಂತಪ್ಪ ಮಧ್ಯೆ ಎಂದಿನಂತೆ ಜಗಳ(Flash) ಶುರುವಾಗಿದೆ. ಆ ಜಗಳ ವಿಕೋಪಕ್ಕೆ ತಿರುಗಿ, ಹನುಮಂತಪ್ಪ ಮೇಲೆ ಪೆಟ್ರೋಲ್ ಸುರಿದು ಸಜೀವ ದಹನಕ್ಕೆ ಗರಗ ಗ್ರಾಮದ ಗಂಗಾಧರ್, ಲಕ್ಷ್ಮಣ ಎಂಬುವವರ ವಿರುದ್ಧ ಹನುಮಂತಪ್ಪ ಹಾಗೂ ಸಂಬಂಧಿಕರು ಗಂಭೀರ ಆರೋಪ(Allegation) ಮಾಡಿದ್ದಾರೆ.
ಚಿಕ್ಕಬಳ್ಳಾಪುರ: ಗೀತಂ ಯುನಿವರ್ಸಿಟಿಯಲ್ಲಿ ಉಗಾಂಡ ಮೂಲದ ವಿದ್ಯಾರ್ಥಿನಿ ಸಾವು
ಇನ್ನೂ ಘಟನೆಯಲ್ಲಿ ತೀವ್ರ ಗಾಯಗೊಂಡಿರೋ ಹನುಮಂತಪ್ಪ ಬೆಂಗಳೂರಿನ(Bengaluru) ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ(Treatment) ಪಡೆಯುತ್ತಿದ್ದಾರೆ. ಪೆಟ್ರೋಲ್ ದಾಳಿಯಿಂದ ತೀವ್ರ ಗಾಯಗೊಂಡಿರೋ ವ್ಯಕ್ತಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಬೇಗ ಗುಣಮುಖರಾಗಿ ಬರಲಿ ಎಂಬುದು ಸಂಬಂಧಿಕರ ಆಶಯವಾಗಿದೆ.
ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳು ನಾಪತ್ತೆಯಾಗಿದ್ದು, ಅವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕೂಡಲೇ ಪೊಲೀಸರು(Police) ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಪೊಲೀಸ್ ಠಾಣೆ ಮುಂಭಾದ ಸಂಬಂಧಿಕರು ಧರಣಿ ನಡೆಸಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಶುರುಮಾಡಿದ್ದು, ಆರೋಪಿಗಳಾದ ಗಂಗಾಧರ, ಲಕ್ಷ್ಮಣನ ವಿರುದ್ಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.