ಐದು ವರ್ಷಗಳ ಹಿಂದೆ ಹಣಕ್ಕಾಗಿ ಸ್ನೇಹಿತನನ್ನು ಕೊಲೆಗೈದ ಪ್ರಕರಣ ಆರೋಪಿಗೆ ಕೊಲೆ ಪ್ರಕರಣಕ್ಕೆ ಜೀವಾವಧಿ ಶಿಕ್ಷೆ, 50,000 ರೂ ದಂಡ ಹಾಗು ದೌರ್ಜನ್ಯ ತಡೆ ಕಾಯ್ದೆಯಲ್ಲಿ 3 ವರ್ಷ ಕಾರಾಗೃಹ ಶಿಕ್ಷೆ 10,000 ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ್ ಶಿವಪ್ಪ ಆದೇಶಿಸಿದ್ದಾರೆ.
ಉಡುಪಿ (ಡಿ.20): ಐದು ವರ್ಷಗಳ ಹಿಂದೆ ಹಣಕ್ಕಾಗಿ ಸ್ನೇಹಿತನನ್ನು ಕೊಲೆಗೈದ ಪ್ರಕರಣ ಆರೋಪಿಗೆ ಕೊಲೆ ಪ್ರಕರಣಕ್ಕೆ ಜೀವಾವಧಿ ಶಿಕ್ಷೆ, 50,000 ರೂ ದಂಡ ಹಾಗು ದೌರ್ಜನ್ಯ ತಡೆ ಕಾಯ್ದೆಯಲ್ಲಿ 3 ವರ್ಷ ಕಾರಾಗೃಹ ಶಿಕ್ಷೆ 10,000 ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ್ ಶಿವಪ್ಪ ಆದೇಶಿಸಿದ್ದಾರೆ. ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮ ಪ್ರಶಾಂತ್ ಅಲಿಯಾಸ್ ಪಚ್ಚು ಅಲಿಯಾಸ್ ಮಣಿ (31) ಶಿಕ್ಷೆಗೆ ಗುರಿಯಾದ ಆರೋಪಿ.
ಘಟನೆಯ ವಿವರ:
2017 ರ ಮಾರ್ಚ್ 1 ರಂದು ಬೆಳಗ್ಗೆ 9.30 ಕ್ಕೆ ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮದ ಪೇತ್ರಿ ಬಳಿಯಿರುವ ವೃತ್ತಿನ್ ಎಂಟರ್ ಪ್ರೈಸಸ್ ಕಟ್ಟಡದ ಪಶ್ಚಿಮಕ್ಕೆ ಇರುವ ಅಶ್ವಥಕಟ್ಟೆಯ ಬಳಿ ಪ್ರಶಾಂತ್ ಖರ್ಚಿಗಾಗಿ ಹಣವನ್ನು ಕೇಳಿದಾಗ ಪ್ರಕಾಶ್ ನಾಯ್ಕ್ (38) ಹಣ ನೀಡಲು ನಿರಾಕರಿಸಿದ್ದಾರೆ. ಈ ವೇಳೆ ಪ್ರಶಾಂತ್ ಚೂರಿಯಿಂದ ಇರಿದು ಕೊಲೆ ಮಾಡಿದ್ದನು.
undefined
ತನಿಖೆಯನ್ನು ಪೂರ್ಣಗೊಳಿಸಿದ್ದ ಅಂದಿನ ಡಿವೈಎಸ್ಪಿ ಕುಮಾರ್ ಸ್ವಾಮಿ 27-5-2017 ರಂದು ದೋಷರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣಲ್ಲಿ ಒಟ್ಟು 34 ಸಾಕ್ಷಿಗಳ ಪೈಕಿ, 2 ಪ್ರತ್ಯಕ್ಷ ಸಾಕ್ಷಿಗಳನ್ನು ಒಳಗೊಂಡಂತೆ ಒಟ್ಟು 12 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. ಪ್ರಾಸಿಕ್ಯೂಷನ್ ಪರ ಹಿರಿಯ ಸರಕಾರಿ ಅಭಿಯೋಜಕಿ ಶಾಂತಿಬಾಯಿ ವಾದಿಸಿದ್ದಾರೆ.
Udupi: ಕುಖ್ಯಾತ ಕಳ್ಳನ ಬಂಧನ, 7 ಲಕ್ಷ ಮೌಲ್ಯದ ಸ್ವತ್ತು ವಶ
ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿ ಪ್ರಶಾಂತ್ ಈ ಹಿಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದನು. ಆ ಪ್ರಕರಣದಲ್ಲಿ ಜಾಮೀನನಲ್ಲಿ ಹೊರಗಿದ್ದಾಗ ಪ್ರಕಾಶ್ ನನ್ನು ಕೊಲೆ ಮಾಡಿದ್ದನು. ನಂತರ ಪೋಕ್ಸೊ ಪ್ರಕರಣದಲ್ಲಿ ಪ್ರಶಾಂತ್ ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಅತಿಥಿ ಶಿಕ್ಷಕನ ಅಮಾನವೀಯ ದಾಳಿ, ಕಿಮ್ಸ್‌ನಲ್ಲಿರುವ ಗಾಯಾಳು ಅತಿಥಿ ಶಿಕ್ಷಕಿಯ ಆರೋಗ್ಯ
ಈತನು ಪೋಕ್ಸೊ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲದಲ್ಲೇ ಬೂಟುಗಳನ್ನು ಎಸೆದು ಕಾನೂನು ವಿರೋಧಿ ಚಟುವಟಿಕೆ ನಡೆಸಿದ್ದನು. ನಂತರ ಕೊಲೆ ಪ್ರಕರಣದಲ್ಲಿ ಈತನನ್ನು ವಿಡಿಯೋ ಮೂಲಕ ವಿಚಾರಣೆ ನಡೆಸಲಾಗಿತ್ತು.
Telangana: ತಂದೆಯೆದುರೇ ಕಿಡ್ನ್ಯಾಪ್ ಆದ ಯುವತಿ..! ಸಿಸಿ ಕ್ಯಾಮೆರಾದಲ್ಲಿ ಸೆರೆ