ಯುರೋ ಬಾಂಡ್ ಕಂಪೆನಿಯ ಮಾಲೀಕನ ಹೆಸರಿನಲ್ಲಿ ಕರೆ ಮಾಡಿ, ತನ್ನ ಮಗನಿಗೆ ಅಪಘಾತವಾಗಿದ್ದು, ತುರ್ತಾಗಿ ಏರ್ ಲಿಫ್ಟ್ ಮಾಡಲು ಹಣದ ಅಗತ್ಯವಿದೆ ಎಂದು ವ್ಯಕ್ತಿಯೊಬ್ಬರು 3,00,000 ರೂ ಖಾತೆಗೆ ಹಾಕಿಸಿಕೊಂಡು, ವಂಚಿಸಿದ ಪ್ರಕರಣ ಉಡುಪಿಯಲ್ಲಿ ಬೆಳಕಿಗೆ ಬಂದಿದೆ.
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಸೆ.8): ವಂಚನೆ ಕೂಡ ಆಧುನಿಕರಣ ಗೊಳ್ಳುತ್ತಿದೆ, ಆನ್ಲೈನ್ ವಂಚನೆಯ ನಾನಾ ಅನಾಹುತಗಳನ್ನು ಪ್ರತಿದಿನ ಕಾಣುತ್ತೇವೆ . ಜೊತೆಗೆ ಮೊಬೈಲ್ ಗೆ ಕರೆ ಮಾಡುವ ಮೂಲಕ ಯಾಮಾರಿಸುವ ವಂಚಕರ ಜಾಲವು ಬಹಳ ದೊಡ್ಡದಿದೆ. ಬುದ್ಧಿವಂತರ ಜಿಲ್ಲೆ ಎಂದು ಕರೆಸಿಕೊಳ್ಳುವ ಉಡುಪಿಯಲ್ಲೂ ಕೂಡ ಆನ್ಲೈನ್ ವಂಚನೆಗೆ ಮೋಸ ಹೋಗುವವರ ಸಂಖ್ಯೆ ಕಡಿಮೆ ಏನಿಲ್ಲ. ಮೊಬೈಲ್ ಕರೆಯ ವಂಚನೆಯ ಜಾಲಕ್ಕೆ ಉಡುಪಿಯ ಉದ್ಯಮಿಯೊಬ್ಬರು ಲಕ್ಷಾಂತರ ರೂಪಾಯಿ ಕೊಟ್ಟು ಕೈಸುಟ್ಟುಕೊಂಡಿದ್ದಾರೆ. ಯುರೋ ಬಾಂಡ್ ಕಂಪೆನಿಯ ಮಾಲೀಕನ ಹೆಸರಿನಲ್ಲಿ ಕರೆ ಮಾಡಿ, ತನ್ನ ಮಗನಿಗೆ ಅಪಘಾತವಾಗಿದ್ದು, ತುರ್ತಾಗಿ ಏರ್ ಲಿಫ್ಟ್ ಮಾಡಲು ಹಣದ ಅಗತ್ಯವಿದೆ ಎಂದು ವ್ಯಕ್ತಿಯೊಬ್ಬರು 3,00,000 ರೂ ಖಾತೆಗೆ ಹಾಕಿಸಿಕೊಂಡು, ವಂಚಿಸಿದ ಪ್ರಕರಣ ಇದು .ಅಪಘಾತದಂತಹ ತುರ್ತು ಸಂದರ್ಭದಲ್ಲಿ ಮಾನವೀಯ ನೆಲೆಯಲ್ಲಿ ಸ್ಪಂದಿಸಲು ಹೋದ ಮಂದಾರ್ತಿಯ ಉದ್ಯಮಿಯೋರ್ವರಿಗೆ ದೋಖಾ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಯೂಮಿನಿಯಂ ಫ್ಯಾಬ್ರಿಕೇಷನ್ ಉದ್ಯಮ ನಡೆಸುತ್ತಿರುವ , ಉಡುಪಿಯ ಮಂದಾರ್ತಿ ಪ್ರಮೋದ್ ಶೆಟ್ಟಿಯವರಿಗೆ ಬೆಳಗಾಂ ನ ಡೀಲರ್ ಕರೆ ಮಾಡಿ ಕಂಪೆನಿಯ ಮಾಲೀಕ ರಾಜೇಶ್ ಶಾ ಎಂಬವರ ಮಗನಿಗೆ ಕಾರವಾರ ಗೋವಾ ರಸ್ತೆಯಲ್ಲಿ ಅಪಘಾತವಾಗಿದೆ ಎಂದು ತಿಳಿಸಿದ್ದರು.
undefined
ರಾಜೇಶ್ ಶಾ ಅವರು ಸಹಾಯಕ್ಕಾಗಿ ಕರೆ ಮಾಡುತ್ತಾರೆ, ನೀವು ಸಹಕರಿಸಿ ಎಂದಿದ್ದರು. ರಾಜೇಶ್ ಶಾ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿಯೂ, ತನ್ನ ಮಗ ವಿವೇಕ್ ಶಾ ಗೆ ಗಂಭೀರ ಅಪಘಾತವಾಗಿದ್ದು, ತುರ್ತಾಗಿ ಏರ್ ಲಿಫ್ಟ್ ಮಾಡಲು 3,00,000 ರೂ.ಯ ಅಗತ್ಯವಿದೆ. ಖಾತೆಗೆ ಹಣವನ್ನು ವರ್ಗಾಯಿಸುವಂತೆ ಕೋರಿದ್ದರು. ತಾನು ಮಂಗಳೂರಿನ ಎ.ಜೆ ಆಸ್ಪತ್ರೆಗೆ ಬಂದ ನಂತರ ತಮ್ಮ ಹಣವನ್ನು ಹಿಂದಿರುಗಿಸುತ್ತೇನೆ ಎಂದು ತಿಳಿಸಿದ್ದಾರೆ.
ಪ್ರಮೋದ್ ಶೆಟ್ಟಿಯವರು ಗೆಳೆಯರಿಂದ ತುರ್ತಾಗಿ 3,00,000 ರೂ.ಯನ್ನು ಬ್ಯಾಂಕ್ ಖಾತೆಗೆ ಗೂಗಲ್ ಪೇ ಮಾಡಿಸಿದ್ದಾರೆ. ನಂತರ ಮಂಗಳೂರು ವಿಮಾನ ನಿಲ್ದಾಣದಿಂದ ಎ.ಜೆ ಆಸ್ಪತ್ರೆಗೆ ಬರಲು ಇನ್ನೋವಾ ಕಾರನ್ನು ಬುಕ್ ಮಾಡಿ ಸ್ನೇಹಿತರೊಂದಿಗೆ ತುರ್ತು ಚಿಕಿತ್ಸಾ ವಿಭಾಗದಲ್ಲಿ ಸಂಜೆಯವರೆಗೆ ಕಾದು ವಾಪಾಸಾಗಿದ್ದಾರೆ.
ವಾಪಾಸಾದ ನಂತರವೇ ತಾನು ಮೋಸ ಹೋಗಿರೋದು ಗೊತ್ತಾಗಿದೆ. ನಂತರ ರಾಜೇಶ್ ಶಾ ಹೆಸರಲ್ಲಿ ಕರೆ ಮಾಡಿದ ನಂಬರಿಗೆ ವಾಪಾಸು ಕರೆ ಮಾಡಿದರೆ, ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು.
ಪಾಕಿಸ್ತಾನ ವಿರುದ್ಧ ಭಾರತಕ್ಕೆ ಸೋಲು: ಪಾಕ್ ಪರ ಜಯಘೋಷ, ಕೇಸ್ ಬುಕ್
ವಂಚಕರು ರಾಜೇಶ್ ಶಾ ಅವರ ಹೆಸರಲ್ಲಿ ಮೊದಲು ಬೆಳಗಾವಿಯ ಡೀಲರ್ ಗೆ ಕರೆ ಮಾಡಿ, ಆತ ದೂರ ಇರೋದನ್ನು ಅರಿತು ಅವರಿಂದಲೇ ನಂಬರ್ ಪಡೆದು ಪ್ರಮೋದ್ ಗೆ ಕರೆ ಮಾಡಿದ್ದರು. ವಾಸ್ತವದಲ್ಲಿ ಬೆಳಗಾವಿಯ ಡೀಲರ್ ಗೂ ಕೂಡ ಕರೆ ಮಾಡಿರುವವರು ನಕಲಿ ವ್ಯಕ್ತಿಗಳು ಅನ್ನೋದು ಗೊತ್ತಿರ್ಲಿಲ್ಲ. ಕರೆ ಮಾಡಿದ ವ್ಯಕ್ತಿಯ ಡಿಪಿಯಲ್ಲಿ ರಾಜೇಶ ಶಾ ಅವರ ಫೋಟೋ ಇತ್ತು. ಹಾಗಾಗಿ ಪ್ರಮೋದ್ ಸುಲಭವಾಗಿ ನಂಬಿ ಹಣ ವರ್ಗಾಯಿಸಿದ್ದರು.
DAVANAGERE; ದಾಂಪತ್ಯ ಜೀವನದಲ್ಲಿ ಬಿರುಕು, ಶ್ರೀಗಳ ಹೆಸರು ದುರ್ಬಳಕೆ ಆರೋಪ
ಉತ್ತರ ಪ್ರದೇಶದಲ್ಲಿಯೂ ನಕಲಿ ಕರೆ
ಇದೇ ರೀತಿ ರಾಜೇಶ್ ಶಾ ಹೆಸರಲ್ಲಿ ಉತ್ತರ ಪ್ರದೇಶದ ಉದ್ಯಮಿಯೋರ್ವರಿಗೆ ಕರೆ ಮಾಡಿದ್ದು, ಅವರು 2,00,000 ರೂ.ಯನ್ನು ಖಾತೆಗೆ ಜಮಾ ಮಾಡಲು ಹೋದಾಗ ರಾಜೇಶ್ ಶಾ ಅವರ ಪಾನ್ ಕಾರ್ಡ್ ನಂಬರ್ ಕೇಳಿದ್ದಾರೆ. ಆಗ ಅವರು ಕಂಪೆನಿಗೆ ಕರೆ ಮಾಡಿದಾಗ ಕರ್ನಾಟಕದಲ್ಲಿ ನಕಲಿ ಕರೆ ಮಾಡಿ ಹಣ ದೋಚಿದ ವಿಚಾರ ತಿಳಿದು ಅವರು ಹಣವನ್ನು ವರ್ಗಾಯಿಸಿಲ್ಲ. ಬ್ಯಾಂಕ್ ಖಾತೆಯಲ್ಲಿ ಆತನ ಹೆಸರು ಅಜಿತ್ ಯಾದವ್ ದೇವದತ್ ಎಂದು ಹೆಸರಿದ್ದು ಈಗ ಈ ಖಾತೆಯೂ ಚಾಲ್ತಿಯಲ್ಲಿಲ್ಲ ಎನ್ನಲಾಗಿದೆ.