ನನ್ನ ಪತಿ ಆವರಗೊಳ್ಳ ಶ್ರೀ ಹೆಸರನ್ನು ದುರ್ಬಳಕೆ ಮಾಡಿಕೊಂಡು ತೇಜೋವಧೆ ಮಾಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಪತಿಯ ಕಿರುಕುಳದ ಬಗ್ಗೆ ದೂರು ನೀಡಿದ್ದಾರೆ.
ವರದಿ :ವರದರಾಜ್ ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಸೆ.8): ನನ್ನ ಹಾಗು ನನ್ನ ಪತಿಯ ನಡುವೆ ದಾಂಪತ್ಯ ಜೀವನದಲ್ಲಿ ಸಮಸ್ಯೆ ಇದ್ದು, ಅದನ್ನು ದುರ್ಬಳಕೆ ಮಾಡಿಕೊಂಡು ವಿನಾಕಾರಣ ಆವರಗೊಳ್ಳ ಶ್ರೀ ಹೆಸರನ್ನು ದುರ್ಬಳಕೆ ಮಾಡಿಕೊಂಡು ತೇಜೋವಧೆ ಮಾಡಲಾಗುತ್ತಿದೆ ಎಂದು ಸಂತ್ರಸ್ಥೆ ಮೇಘನಾ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಗಂಡನು ಯಾವುದೇ ಹಸ್ತಕ್ಷೇಪವಿಲ್ಲದ ಆವರಗೊಳ್ಳ ಶ್ರೀ ಹೆಸರನ್ನು ಬಳಸಿ ಅಪಪ್ರಚಾರ ಅಪನಿಂದನೆ, ಅವಹೇಳನಕಾರಿ ಸಂದೇಶಗಳನ್ನು ಯುಟ್ಯೂಬ್ ವಿ -2 ಕನ್ನಡ ನ್ಯೂಸ್ ಚಾನಲ್ ನಲ್ಲಿ ಪ್ರಸಾರ ಪಡಿಸಿರುತ್ತಾರೆ ಎಂದು ಮೇಘನಾ ತಿಳಿಸಿದರು. ನನ್ನ ಗಂಡನೊಂದಿಗೆ ವೈವಾಹಿಕ ಜೀವನ ಹೊಂದಾಣಿಕೆ ಆಗದ ಕಾರಣ ಒಂದು ವರ್ಷದ ಹಿಂದೆಯೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ದಾವಣಗೆರೆ ನ್ಯಾಯಾಲಯದಲ್ಲಿ ದಾವೆ ಹಾಕಲಾಗಿದೆ. ಅಲ್ಲದೇ ವಿಚಾರಣಾ ಹಂತದಲ್ಲಿರುತ್ತದೆ. ನನ್ನ ಗಂಡನ ದುಷ್ಕೃತ್ಯ , ದುಶ್ಚಟಗಳಿಗೆ ಬಲಿಯಾಗಿ ಮನನೊಂದು ದಾವಣಗೆರೆಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದು ವಿಚಾರಣಾ ಹಂತದಲ್ಲಿದೆ. ನನ್ನ ಗಂಡನು ವಿಪರೀತವಾಗಿ ಕುಡಿದು ಬಂದು ಹಿಂಸೆ ಕೊಡುತ್ತಿದ್ದ. ದುಡ್ಡಿಗಾಗಿ ಪೀಡಿಸುತ್ತಿದ್ದ. ಯಾವುದೇ ದುಡಿಮೆ ಮಾಡದೆ ಸಾಲ ಮಾಡಿ ಎಲ್ಲರನ್ನು ಯಾಮಾರಿಸುತ್ತಿದ್ದ. ನನ್ನ ಗಂಡನ ದುಡ್ಡಿನ ಅಮಲಿಗೆ ಬೇಸತ್ತು , ಆತ ಕಟ್ಟಿದ ಸುಳ್ಳಿನ ಜಾಲಕ್ಕೆ ಬಲಿಯಾಗಿ ನಾನು ದೂರಾದೆ ಎಂದರು.
ಯಾವುದೇ ಭಾಗಿತ್ವವಿಲ್ಲದ ಗುರುಗಳ ಹೆಸರನ್ನು ಬಳಸಿಕೊಂಡು ನನ್ನನ್ನು 30ಲಕ್ಷಕ್ಕೆ ಬೆದರಿಸುವ ಪ್ರಯತ್ನ ಮಾಡಲಾಗಿದೆ. ನಾನು ನನ್ನ ಗಂಡ ಜೊತೆಗಿದ್ದ ಖಾಸಗಿ ಫೋಟೋ ವಿಡಿಯೋಗಳನ್ನು ನನಗೆ ಗೊತ್ತಿಲ್ಲದ ಹಾಗೆ ಮಾಡಿಕೊಂಡು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡುತ್ತೇನೆಂದು ನನಗೆ ಹೆದರಿಸುತ್ತಿದ್ದಾನೆ ಎಂದು ತಿಳಿಸಿದರು.
ನಾನು ಪುನಃ ಅವನ ಬಳಿ ಹೋಗಬೇಕೆಂಬ ಉದ್ದೇಶದಿಂದ ಗುರುಗಳ ಹೆಸರನ್ನು ಬಳಸಿಕೊಂಡು ಈ ರೀತಿಯ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ್ದರಿಂದ ಖಾಸಗಿ ವಾಹಿನಿಯಲ್ಲಿ ವಾಹಿನಿ ಮೇಲೆ ಹಾಗು ನನ್ನ ಗಂಡನ ಮೇಲೆ ದಾವಣಗೆರೆ ವಿದ್ಯಾನಗರದ ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಾಲಾಗಿದ್ದು ವಿಚಾರಣ ಹಂತದಲ್ಲಿರುತ್ತದೆ ಎಂದು ತಿಳಿಸಿದರು.
ಕೋರ್ಟ್ 4 ಸಲ ಸಮನ್ ಕಳುಹಿಸಿದ್ದರೂ, ಉದ್ದೇಶ ಪೂರ್ವಕವಾಗಿ ನನ್ನ ಗಂಡ ಹಾಜರಾಗದೆ ತಪ್ಪಿಸಿಕೊಂಡು ಓಡಾಡುತ್ತಿದ್ದಾನೆ. ಅವನು ಹೇಳಿರುವುದೆಲ್ಲ ಸುಳ್ಳು ಮಾಹಿತಿಯಾಗಿರುತ್ತದೆ ಎಂದರು.
US Shooting: ಫೇಸ್‌ಬುಕ್ ಲೈವ್ ಮಾಡಿ ಸಿಕ್ಕಸಿಕ್ಕವರ ಮೇಲೆ ಗುಂಡಿನ ದಾಳಿ; ಇಬ್ಬರ ಹತ್ಯೆ
ಸ್ವ- ಇಚ್ಛೆಯಿಂದಲೇ ನಾನು ನನ್ನ ಗಂಡನೊಂದಿಗೆ ಬಾಳಲು ಸಾಧ್ಯವಿಲ್ಲ ಎಂದು ನಿರ್ಧರಿಸಿ ಅವನಿಂದ ದೂರಾಗಿ ನನ್ನ ಬದುಕಿನಾಶ್ರಯಕ್ಕೆ ಕೆಲಸವನ್ನು ಮಾಡುತ್ತ ಜೀವನ ನಡೆಸುತ್ತಿದ್ದೇನೆ. ಅವನಿಂದ ನನಗಾಗಿರುವ ಅನ್ಯಾಯವನ್ನು ಒಂದೆರೆಡು ನಿಮಿಷದಲ್ಲಿ ಹೇಳಲಾಗುವುದಿಲ್ಲ. ನನ್ನ ಗಂಡನ ಬಗ್ಗೆ ಇರುವ ಎಲ್ಲಾ ಸಾಕ್ಷಿಗಳನ್ನು ಕೋರ್ಟಿಗೆ ಹಾಜರು ಪಡಿಸುತ್ತೇನೆ.
ಗಾಂಜಾ ಮಿಲ್ಕ್‌ಶೇಕ್ : ಕೇರಳದ ಜ್ಯೂಸ್ ಅಂಗಡಿ ಮೇಲೆ ದಾಳಿ, ಸೆಣಬಿನ ಬೀಜ ಎಂದ ಮಾಲೀಕ
ಇದು ನನ್ನ ಹಾಗು ನನ್ನ ಗಂಡನ ದಾಂಪತ್ಯದ ಸಮಸ್ಯೆ. ಇದರಲ್ಲಿ ಗುರುಗಳಾಗಲಿ, ಕುಟುಂಬದವರಾಗಲಿ ಯಾರ ಮಾತನ್ನು ನಾನು ಕೇಳಿರುವುದಿಲ್ಲ ಯಾರ ಭಾಗಿತ್ವವು ಇರುವುದಿಲ್ಲ ಎಂದು ತಿಳಿಸುತ್ತೇನೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮೇಘನಾ ತಂದೆ ರುದ್ರಪ್ಪ ಉಪಸ್ಥಿತರಿದ್ದರು.