Udupi Ambulance Crashes - ಪಾನಮತ್ತನಾಗಿದ್ದನೇ ಚಾಲಕ?

Published : Jul 21, 2022, 03:11 PM ISTUpdated : Jul 21, 2022, 03:21 PM IST
Udupi Ambulance Crashes - ಪಾನಮತ್ತನಾಗಿದ್ದನೇ ಚಾಲಕ?

ಸಾರಾಂಶ

ಉಡುಪಿ ಜಿಲ್ಲೆ ಶಿರೂರು ಟೋಲ್ ಗೇಟ್ ಬಳಿ ನಡೆದ ಅಂಬ್ಯುಲೆನ್ಸ್ ಭೀಕರ ಅಪಘಾತಕ್ಕೆ ಚಾಲಕನ ಮದ್ಯಪಾನವೇ ಕಾರಣವಾಯಿತೇ ಪೊಲೀಸರು ಚಾಲಕನನ್ನು ವಿಚಾರಣೆಗೊಳಪಡಿಸಿದ್ದಾರೆ.

ಉಡುಪಿ (ಜು.21): ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಗಡಿಭಾಗ ಶಿರೂರು ಟೋಲ್  ಗೇಟ್ನಲ್ಲಿ ನಡೆದ ಭೀಕರ ಅಪಘಾತ, ಜನತೆಯ ಎದೆ ಜಲ್ ಎನ್ನುವಂತೆ ಮಾಡಿದೆ. ಅಪಘಾತದಲ್ಲಿ ಮಡಿದ ನಾಲ್ವರ ಶವ ತವರೂರು ಹೊನ್ನಾವರಕ್ಕೆ ರವಾನೆಯಾಗಿದ್ದರೆ, ಇತ್ತ ಆಂಬುಲೆನ್ಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮದ್ಯಪಾನ ನಡೆಸಿ ಆಂಬುಲೆನ್ಸ್ ಚಲಾಯಿಸಿದ್ದೇ ಈ ಅಪಘಾತಕ್ಕೆ ಕಾರಣವಾಯಿತಾ? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಉಡುಪಿ(Udupi) ಜಿಲ್ಲೆಯ ಬೈಂದೂರು(Byndoor) ತಾಲೂಕಿನ ಶಿರೂರು ಟೋಲ್ ಗೇಟ್(Shirooru Toll Gate) ಬಳಿ ವೇಗವಾಗಿ ಬಂದ ಅಂಬುಲೆನ್ಸ್(Ambulance) ಟೋಲ್ ಕಂಬಕ್ಕೆ ಢಿಕ್ಕಿ ಹೊಡೆದು ಭೀಕರ ಅಫಘಾತ(Accident) ಆಗಿತ್ತು. ಈ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದು, ಇನ್ನೂ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಬಸ್ ಅಪಘಾತ, ಅದೃಷ್ಟವಶಾತ್ ವನಶ್ರೀ‌ ಗಾಣಿಗ ಸಂಸ್ಥಾನಮಠದ ಶ್ರೀ ಪ್ರಾಣಾಪಾಯದಿಂದ ಪಾರು

ಮೃತರನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ(Honnavar)ದ ನಿವಾಸಿಗಳಾದ ಒಂದೇ ಕುಟುಂಬದ ಲೋಕೇಶ್(Lokesh) ಮಾಧವ ನಾಯ್ಕ(Madhav Naik), ಜ್ಯೋತಿ ಲೋಕೇಶ್ ನಾಯ್ಕ್(Jyoti Lokesh Naik), ಮಂಜುನಾಥ ಮಾಧವ ನಾಯ್ಕ(Manjunath Naik), ಗಜಾನನ ಲಕ್ಷ್ಮಣ್ ನಾಯ್ಕ್(Gajanana Lakshman Naik) ಎಂದು ಗುರತಿಸಲಾಗಿದೆ. ಮೃತರ ಸಂಬಂಧಿಗಳಾದ ಗೀತಾ ಗಜಾನನ ನಾಯ್ಕ್, ಶಶಾಂಕ್ ಮತ್ತು ಟೋಲ್ ಗೇಟ್ ಸಿಬ್ಬಂದಿ ಶಂಬಾಜಿ ಪೋರ್ಪಡೆ ಗೆ ಪ್ರತ್ಯೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ದುರ್ಘಟನೆಗೆ ಹಲವು ಆಯಾಮಗಳಿವೆ. ಟೋಲ್ ನಲ್ಲಿ ಮಲಗಿದ್ದ ದನವನ್ನು ತಪ್ಪಿಸಲೆಂದು ಚಾಲಕ ಬ್ರೇಕ್ ಹಾಕಿದಾಗ, ಅಂಬುಲೆನ್ಸ್ ಮಗುಚಿ ಬಿದ್ದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತೆ. ಟೋಲ್ ಸಿಬ್ಬಂದಿಗಳು ಆಂಬುಲೆನ್ಸ್ ರೂಟ್ ನಲ್ಲಿ ಮಲಗಿದ್ದ ದನವನ್ನು ಹಾಗೆಯೇ ಬಿಟ್ಟ ಬಗ್ಗೆ ಆಕ್ಷೇಪಗಳು ಕೂಡ ಕೇಳಿಬಂದಿವೆ. 

ಚಾಲಕನ ನಿಯಂತ್ರಣ ತಪ್ಪಿ ಲಾರಿಗೆ ಕಾರು ಡಿಕ್ಕಿ: ಸ್ಥಳದಲ್ಲೇ 4 ಸಾವು

ಆಂಬುಲೆನ್ಸ್ ಅನ್ನು ರೋಶನ್ ರೋಡ್ರಿಗಸ್( Roshan Rodrigues) ಎಂಬ ಚಾಲಕ ಓಡಿಸುತ್ತಿದ್ದು,ಅತೀ ವೇಗವಾಗಿ ಚಲಾಯಿಸುತ್ತಿದ್ದರು ಎನ್ನುವುದು ತಿಳಿದು ಬಂದಿದೆ. ಸಿಸಿ ಟಿವಿ(CCTV) ದೃಶ್ಯಾವಳಿ ನೋಡಿದಾಗ , ಬ್ರೇಕ್ ಫೈಲ್ ಆದ ವಾಹನ ಬಂದಂತೆ , ಭಾಸವಾಗುತ್ತದೆಯಾದರೂ, ಚಾಲಕನ ಅತಿಯಾದ ವೇಗ ಇಲ್ಲಿ ಗಮನಿಸಬಹುದಾಗಿದೆ. ಟೋಲ್ ಮುಂಭಾಗದಲ್ಲಿ ಟೋಲ್ ಸಿಬ್ಬಂದಿ ಮತ್ತು ದನಕ್ಕೆ ಡಿಕ್ಕಿ ಹೊಡೆಯೋದ‌ನ್ನು ತಪ್ಪಿಸಲು ಚಾಲಕ ರೋಶನ್ ಬ್ರೇಕ್ ಹೊಡೆದಿದ್ದಾರೆ.  ಈ ವೇಳೆ ನಿಯಂತ್ರಣ ತಪ್ಪಿ ಆಂಬುಲೆನ್ಸ್ ಪಲ್ಟಿಯಾಗಿದೆ. ಆಂಬುಲೆನ್ಸ್ ಪಲ್ಟಿಯಾಗುತ್ತಿದ್ದಂತೆ ಆಂಬುಲೆನ್ಸ್ ಒಳಗಿದ್ದ ರೋಗಿ ಮತ್ತು ಸಂಬಂಧಿಕರು ಹೊರಗೆ ಎಸೆಯಲ್ಪಟ್ಟಿದ್ದಾರೆ. ಆಂಬುಲೆನ್ಸ್ ಚಾಲಕಮಾತ್ರ ಯಾವುದೇ ಗಾಯಗಳಿಲ್ಲದೆ  ಪಾರಾಗಿದ್ದಾನೆ. ಸದ್ಯ ಈತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಚಾಲಕ ರೋಷನ್ ಮಧ್ಯಪಾನ ಮಾಡಿರಬೇಕೆಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ಟೋಲ್ ಗೇಟ್ ಬಳಿ ಇರುವ ಆಂಬುಲೆನ್ಸ್ ಅಪಘಾತದ ಭೀಕರತೆಯನ್ನು ಬಿಚ್ಚಿಟ್ಟಿದೆ. ಇನ್ನೊಂದೆಡೆ ಬೆಂಡಾಗಿ‌ ನಿಂತಿರುವ ಟೋಲ್ ನ ಕಬ್ಬಿಣದ‌ ಕಂಬಗಳು ಅಪಘಾತದ ಕಥೆ ಹೇಳುವಂತಿದೆ. ಆಂಬುಲೆನ್ಸ್ ನ ಟಯರ್ ಸವಿದಿರುವುದು ಚಾಲಕನ ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ.ಚಾಲಕ ರೋಷನ್ ಭಟ್ಕಳದಲ್ಲಿ ಐದಾರು ನಿಮಿಷ ಮೂತ್ರವಿಸರ್ಜನೆಗೆ ನಿಲ್ಲಿಸಿದ್ದನಂತೆ. ನಂತರದಲ್ಲಿ ಅತೀ ವೇಗದಲ್ಲಿ ಚಲಾಯಿಸುತ್ತಾ ಬಂದು, ಟೋಲ್ ಬಳಿಯೂ ಅತೀ ವೇಗದಲ್ಲಿ ಚಲಾಯಿಸಿ ಹ್ಯಾಂಡ್ ಬ್ರೇಕ್ ಹಾಕಿದ್ದಾನೆ ಎನ್ನಲಾಗಿದೆ.

ಈ ಮಾರ್ಗದಲ್ಲಿ ದಿನನಿತ್ಯ ಐವತ್ತು ಆಂಬುಲೆನ್ಸ್ ಚಲಿಸುತ್ತವೆ, ಈ ರೀತಿ ವೇಗದಲ್ಲಿ ಯಾವ ಆಂಬುಲೆನ್ಸ್ ಹೋಗಿಲ್ಲ.ಅಪಘಾತ ನಡೆದ ಬಳಿಕ ಚಾಲಕನ ಡ್ರೈವಿಂಗ್ ಸೀಟ್ ಬಳಿ ಮಧ್ಯದ ಬಾಟಲಿಯೂ  ಕಂಡುಬಂದಿತ್ತು ಎಂದು ಟೋಲ್ ಸಿಬ್ಬಂದಿಗಳು ಹೇಳುತ್ತಾರೆ.ಮಧ್ಯ ಸೇವನೆ ಅನುಮಾನದ ಹಿನ್ನಲೆ ಯಲ್ಲಿ ಚಾಲಕನ ರಕ್ತದ ಪರೀಕ್ಚೆ ನಡೆಸಿ , ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಅದೇನೆ ಇರಲಿ, ಒಂದು ಜೀವ ಉಳಿಸಲು ಹೋಗಿ ನಾಲ್ಕು ಜೀವ ಕಳೆದುಹೋಗಿದೆ. ಆಂಬುಲೆನ್ಸ್ ಅಂದರೆ ಬೇಗ ಇರಬೇಕು ನಿಜ, ಆದರೆ ನಿಯಂತ್ರಣಕ್ಕೆ ಬಾರದಂತಹ ವೇಗದಿಂದ ಚಲಾಯಿಸಿ ಚಾಲಕ ರೋಷನ್ ಇದೀಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!