
ವಿಜಯನಗರ (ಜುಲೈ 21): ವಿಜಯನಗರದಲ್ಲಿ ಯುವತಿಯ ಭೀಕರ ಹತ್ಯೆ ನಡೆದಿದ್ದು, ಪಾಗಲ್ ಪ್ರೇಮಿಯೊಬ್ಬ ಮಾಜಿ ಪ್ರೇಯಸಿಯ ರುಂಡ ಕಡಿದ್ದಾರೆ. ನಿರ್ಮಲಾ(23) ಕೊಲೆಯಾದ ಯುವತಿ. ಯುವತಿಯ ಸಂಬಂಧಿ ಬೋಜರಾಜ್( 26) ಎಂಬುವವರಿಂದ ಕೃತ್ಯ . ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕನ್ನಬೊರಯ್ಯನ ಹಟ್ಟಿ ಗ್ರಾಮದಲ್ಲಿ ನಡೆದಿದೆ. ಕಾನಾಹೊಸಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬಿಎಸ್ಸಿ ನರ್ಸಿಂಗ್ ವಿಧ್ಯಾಭ್ಯಾಸ ಮಾಡುತ್ತಿದ್ದ ನಿರ್ಮಲಾ, ಮುಂಬರುವ ಪರೀಕ್ಷೆಗಾಗಿ ಓದಲು ಊರಿಗೆ ಬಂದಿದ್ದಳು. ನಿರ್ಮಲಾಳನ್ನು ಮದುವೆ ಮಾಡಿಕೊಂಡುವಂತೆ ಈ ಮೊದಲು ಕುಟುಂಬದವರನ್ನು ಬೋಜರಾಜ್ ಕೇಳಿದ್ದ ಎಂದು ಹೇಳಲಾಗಿದೆ. ಇದರ ನಡುವೆ 2 ತಿಂಗಳ ಹಿಂದೆ ಬೇರೆ ಯುವತಿಯನ್ನ ಬೋಜರಾಜ್ ಮದುವೆಯಾಗಿದ್ದ. ಮದುವೆಯಾದ ನಂತರ ತನ್ನ ಮಾಜಿ ಪ್ರೇಯಸಿ ಊರಿಗೆ ಬಂದ ವೇಳೆ ಆಕೆಯ ತಲೆ ಕಡಿದು ಅಪರಾಧ ಎಸಗಿದ್ದಾರೆ. ಮಚ್ಚಿನಿಂದ ಪ್ರೇಯಸಿಯ ತೆಲೆ ಕಡಿದು ರುಂಡದೊಂದಿಗೆ ಠಾಣೆಗೆ ಶರಣಾಗಿದ್ದಾನೆ. ಕೂಡ್ಲಿಗಿ ತಾಲೂಕಿನ ಖಾನಾಹೊಸಹಳ್ಳಿ ಠಾಣೆಗೆ ಪ್ರೇಯಸಿಯ ರುಂಡದೊಂದಿಗೆ ಬಂದ ಪಾಗಲ್ ಪ್ರೇಮಿ ಬೋಜರಾಜ್ ಬಂದಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಬಂದಿದ್ದು ಪರಿಶೀಲನೆ ನಡೆಸಿದ್ದಾರೆ.
ಇಂದು ಮಧ್ಯಾಹ್ನ ಸುಮಾರು 12.30 ಅಥವಾ 1 ಗಂಟೆ ಸುಮಾರಿಗೆ . ಕಾನಾಹೊಸಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕನ್ನಬೊರಯ್ಯನ ಹಟ್ಟಿ ಗ್ರಾಮದವನಾದ ಬೋಜರಾಜ್ ಎನ್ನುವ ವ್ಯಕ್ತಿ ಠಾಣೆಗೆ ಬಂದು ನಾನು ನನ್ನ ದೂರದ ಸಂಬಂಧಿಯಾಗಿರುವ ನಿರ್ಮಲಾ ಎನ್ನುವ ಹುಡುಗಿಯನ್ನು ಇಂದು ಬೆಳಗ್ಗೆ ಕೊಲೆ ಮಾಡಿದ್ದೇನೆ ಎಂದು ಹೇಳಿದ್ದಲ್ಲದೆ, ಆಕೆಯ ರುಂಡವನ್ನು ಬೈಕ್‌ನಲ್ಲಿರುವ ಚೀಲದಲ್ಲಿದೆ ಎಂದು ಹೇಳಿ ಶರಣಾಗಿದ್ದ ಎಂದು ವಿಜಯನಗರ ಎಸ್‌ಪಿಎ ಡಾ.ಅರುಣ್ ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇದರ ಬಗ್ಗೆ ಮೊದಲ ಹಂತದಲ್ಲಿ ಸಿಲುಕಿರುವ ಮಾಹಿತಿ ಏನೆಂದರೆ, ಬೋಜರಾಜ್ ಅವರು ನಿರ್ಮಲಾ ಎನ್ನುವ ಮಹಿಳೆಯ ನಡತೆಯ ಬಗ್ಗೆ ಅನುಮಾನಿತರಾಗಿದ್ದ. ಇದರಿಂದ ಸಿಟ್ಟಿಗೆದ್ದದ್ದ ಬೋಜರಾಜ್, ಇಂದು ಬೆಳಗ್ಗೆ ನಿರ್ಮಲಾ ಅವರು ಮನೆಯಲ್ಲಿ ಒಬ್ಬರೇ ಇದ್ದಾಗ, ಮಚ್ಚಿನಿಂದ ಆಕೆಯ ತಲೆಯನ್ನು ಕಡಿದಿದ್ದಾರೆ. ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಕೊಲೆ ಆರೋಪಿ ವಿರುದ್ಧ 158/22, 450 ಹಾಗೂ 305 ಅಡಿಯಲ್ಲಿ ಕೇಸ್ ದಾಖಲಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ