ಮಂಗಳೂರು ಕಿಸ್ಸಿಂಗ್ ವೀಡಿಯೋ: ವೈರಲ್ ಆಗೋ ಮುನ್ನವೇ ಕಾಲೇಜಿನಿಂದ ವಿದ್ಯಾರ್ಥಿ ಸಸ್ಪೆಂಡ್

By Govindaraj S  |  First Published Jul 21, 2022, 2:18 PM IST

ಮಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳ ಸೆಕ್ಸ್ ವಿಡಿಯೋ ವೈರಲ್ ಪ್ರಕರಣ ಸಂಬಂಧ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿಕೆ ನೀಡಿದ್ದು, ವಿಡಿಯೋ ಮಾಡಿದ ವಿದ್ಯಾರ್ಥಿಯೇ ಕಾಲೇಜಿನ ತರಗತಿಯ ವಾಟ್ಸ್ ಅಪ್ ಗ್ರೂಪ್‌ಗೆ ವಿಡಿಯೋ ಹಾಕಿರೋದಾಗಿ ಹೇಳಿದ್ದಾರೆ. 


ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ‌ಮಂಗಳೂರು

ಮಂಗಳೂರು (ಜು.21): ಮಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳ ಸೆಕ್ಸ್ ವಿಡಿಯೋ ವೈರಲ್ ಪ್ರಕರಣ ಸಂಬಂಧ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿಕೆ ನೀಡಿದ್ದು, ವಿಡಿಯೋ ಮಾಡಿದ ವಿದ್ಯಾರ್ಥಿಯೇ ಕಾಲೇಜಿನ ತರಗತಿಯ ವಾಟ್ಸ್ ಅಪ್ ಗ್ರೂಪ್‌ಗೆ ವಿಡಿಯೋ ಹಾಕಿರೋದಾಗಿ ಹೇಳಿದ್ದಾರೆ.  ನಗರದ ಅಪಾರ್ಟ್‌ಮೆಂಟ್‌ನಲ್ಲಿ ಪ್ರತಿಷ್ಠಿತ ‌ಕಾಲೇಜು ವಿದ್ಯಾರ್ಥಿಗಳು ರೂಂ ಪಡೆದಿದ್ದರು. ಆ ರೂಮ್‌ನಲ್ಲಿ ಕೆಲ ವಿದ್ಯಾರ್ಥಿನಿಯರ ಜೊತೆ ಅನುಚಿತವಾಗಿ ‌ನಡೆದುಕೊಂಡ ವಿಡಿಯೋ ವೈರಲ್ ಆಗಿತ್ತು.‌ ಈ ಬಗ್ಗೆ ಪರಿಶೀಲಿಸಿ ವಿಡಿಯೋ ಮಾಡಿದ ಹುಡುಗನನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದೇವೆ.‌ 

Tap to resize

Latest Videos

ಉಳಿದ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಯಾರು ಅನ್ನೋ ಮಾಹಿತಿ ಸಿಕ್ಕಿದೆ. ಕೃತ್ಯ ನಡೆದ ಸ್ಥಳ ಮಂಗಳೂರು ನಗರದ ಬಾವುಟಗುಡ್ಡೆ ಬಳಿಯ ಅಪಾರ್ಟ್‌ಮೆಂಟ್ ಆಗಿದೆ. ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಮಂಗಳೂರು ‌ನಗರದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳು. ವಿದ್ಯಾರ್ಥಿನಿಯನ್ನ ಠಾಣೆಗೆ ಕರೆಸಿ ಮಾಹಿತಿ ಪಡೆಯುವ ಕೆಲಸ ಆಗಿದೆ. ಈ ಘಟನೆ ಜನವರಿಯಲ್ಲಿ ನಡೆದ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಹುಡುಗರು ಎರಡು ತಿಂಗಳುಗಳ ಕಾಲ ಆ ರೂಮ್‌ನಲ್ಲಿ ಇದ್ದರು. ನಂತರ ಮದ್ಯಪಾನ ಮತ್ತು ಯಾರನ್ನೋ ಕರೆದುಕೊಂಡು ಬರ್ತಾರೆ ಅಂತ ಮಾಲೀಕರು ಖಾಲಿ ಮಾಡಿಸಿದ್ದರು. 

Mangaluru: ಕಿಸ್ಸಿಂಗ್ ವೀಡಿಯೋ ಜಾಡು ಹಿಡಿದ ಪೊಲೀಸರಿಗೆ ವಿದ್ಯಾರ್ಥಿಗಳ ಬೆತ್ತಲು ವೀಡಿಯೋ ಲಭ್ಯ!

ಕಾಲೇಜು ಆಡಳಿತಕ್ಕೆ ಈ ವಿಷಯ ಗೊತ್ತಾಗಿ ವಿದ್ಯಾರ್ಥಿಗಳನ್ನ ಅಮಾನತು ಮಾಡಿದ್ದಾರೆ. ಸದ್ಯ ಯಾವುದೇ ಪ್ರಕರಣ ದಾಖಲಿಸಿಲ್ಲ, ವಿಚಾರಣೆ ನಡೆಸಿ ಪ್ರಕರಣ ದಾಖಲಿಸ್ತೇವೆ.‌ ವಿದ್ಯಾರ್ಥಿ ತನ್ನ ಕ್ಲಾಸಿನ ವಾಟ್ಸ್ ಅಪ್ ಗ್ರೂಪ್‌ಗೆ ಈ ವಿಡಿಯೋ ನೇರವಾಗಿ ಶೇರ್ ಮಾಡಿದ್ದಾನೆ. ‌ಆಗ ಕ್ಲಾಸ್ ಕೋ ಅರ್ಡಿನೇಟರ್ ಈ ವಿಷಯ ಪ್ರಿನ್ಸಿಪಾಲ್‌ಗೆ ತಿಳಿಸಿದ್ದಾರೆ. ಆ ಬಳಿಕ ಪ್ರಿನ್ಸಿಪಾಲ್ ವಿದ್ಯಾರ್ಥಿಗಳು ಮತ್ತು ಹೆತ್ತವರನ್ನ ಕರೆಸಿದ್ದಾರೆ.‌ ಆಂತರಿಕ ಶಿಸ್ತು ಪಾಲನಾ ‌ಸಮಿತಿ ಮೂಲಕ ವಿಚಾರಣೆ ‌ನಡೆಸಿ ಸಸ್ಪೆಂಡ್ ಮಾಡಿದ್ದಾರೆ.‌ ಕೆಲವರು ಫೇಕ್ ಸೋಶಿಯಲ್ ಮೀಡಿಯಾ ಖಾತೆ ತೆರೆದು ಅಪ್ ಲೋಡ್ ಮಾಡಿದ್ದಾರೆ. 

ಪೋಷಕರನ್ನ ಕರೆಸಿ ಮುಂದಿನ ಕಾನೂನು ಕ್ರಮ ತೆಗೋತಿವಿ. ಹೆಣ್ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಕಂಡು ಬಂದಿಲ್ಲ, ಹಾಗಿದ್ದಲ್ಲಿ ಪ್ರಕರಣ ದಾಖಲು. ವಿದ್ಯಾರ್ಥಿನಿಯರ ವಯಸ್ಸಿನ ಆಧಾರದಲ್ಲಿ ಪೋಸ್ಕೋ ದಾಖಲಿಸುವ ಬಗ್ಗೆ ಕಾನೂನು ತಜ್ಞರ ಸಲಹೆ. ಇದರಲ್ಲಿ ‌ಮಂಗಳೂರು ನಗರ ಮತ್ತು ಹೊರಗಿನ ವಿದ್ಯಾರ್ಥಿಗಳು ಇದ್ದಾರೆ. ವಿಡಿಯೋದ ಹೊರತಾಗಿ ಯಾರೆಲ್ಲಾ ಇದ್ದರು ಅನ್ನೋ ಬಗ್ಗೆ ‌ತನಿಖೆ ಮಾಡುತ್ತೇವೆ.‌ ದೂರು ಯಾರಾದ್ರೂ ಕೊಟ್ಟರೆ ಅದರ ಮೇಲೆ ತನಿಖೆ ನಡೆಸ್ತೇವೆ. ವಿದ್ಯಾರ್ಥಿಗಳು ಟ್ರುತ್ ಆಂಡ್ ಡೇರ್ ಆಟ ಆಡುವಾಗ ಇದೆಲ್ಲ ‌ನಡೆದಿದೆ. ಅವರ ವಯಸ್ಸು 18 ವರ್ಷ ಕೆಳಗೆ ಇದ್ರೆ ಕಾನೂನು ಕ್ರಮ. ಈ ವಿಚಾರದಲ್ಲಿ ಕಾಲೇಜು ಆಡಳಿತದ ಹೊಣೆ ಇರುತ್ತೆ, ಪೊಲೀಸರಿಗೆ ತಿಳಿಸಬೇಕು. 

Mangaluru: ಕಾಲೇಜು ವಿದ್ಯಾರ್ಥಿಗಳ ಲಿಪ್ ಲಾಕ್ ವೈರಲ್: ವಿಡಿಯೋ ಮಾಡಿದ ವಿದ್ಯಾರ್ಥಿ ವಶಕ್ಕೆ!

ಪ್ರಕರಣ ದಾಖಲಾದರೆ ಕಾಲೇಜು ಆಡಳಿತದ ಬಗ್ಗೆಯೂ ವಿಚಾರಣೆ.‌ ವಿದ್ಯಾರ್ಥಿಗಳು ಹಾಸ್ಟೆಲ್, ಪಿಜಿಗಳಲ್ಲಿ ಇದ್ದಾಗ ಇಂಥ ಚಟುವಟಿಕೆಯಲ್ಲಿ ಇರ್ತಾರೆ. ಇದು ಗಮನಕ್ಕೆ ಬಂದಾಗ ಕಾಲೇಜು ಆಡಳಿತ ನಮ್ಮ ಗಮನಕ್ಕೆ ತರಬೇಕು.‌ ವಿದ್ಯಾರ್ಥಿಗಳು ಆಲ್ಕೋಹಾಲ್ ಸೇವನೆ ಮಾಡ್ತಾ ಇದ್ದರು. ಕಾಲೇಜುಗಳ ಆಡಳಿತ ವಿದ್ಯಾರ್ಥಿಗಳ ನಡವಳಿಕೆ ಬಗ್ಗೆ ಗಮನ ಹರಿಸಲಿ. ಮಕ್ಕಳು ಹಾಜರಾಗದೇ ಇದ್ರೆ ಪೋಷಕರಿಗೆ ಮಾಹಿತಿ ನೀಡಲಿ. ಇಂಥ ಘಟನೆಗಳು ಆದಾಗ ಪೊಲೀಸ್ ಇಲಾಖೆ ಗಮನಕ್ಕೆ ತರಲಿ.‌ ಟ್ರುತ್ ಅಂಡ್ ಡೇರ್ ಅಂದ್ರೆ ಸ್ಪರ್ಧೆ ಮಾಡಿ ಗೆಲ್ಲುವುದು‌. ಕಾಂಪಿಟೇಶನ್‌ನಲ್ಲಿ ಏನು ಬರುತ್ತೋ ಅದನ್ನು ‌ಮಾಡ್ತಾರೆ ಎಂದರು.

click me!