ಆನ್‌ಲೈನ್ ಗೇಮ್‌ ಸಾಲದ ಸುಳಿಗೆ ಸಿಲುಕಿ ಯುವಕರಿಬ್ಬರು ಆತ್ಮಹತ್ಯೆ

By Kannadaprabha News  |  First Published Jul 13, 2024, 5:00 AM IST

ಬೆಳಗಾವಿ ವಡಗಾಂವಿ ಪ್ರದೇಶದ ಆನಂದ ನಗರದ ವಿಕ್ರಮ್ ಸಿಂಗ್ ಧಾರಾಸಿಂಗ್ ಶೇಖಾವತ, ವಿಜಯಪುರದ ರಾಕೇಶ ಶ್ರೀಶೈಲ್ ಜಂಬಲದಿನ್ನಿ ಆತ್ಮಹತ್ಯೆಗೆ ಶರಣಾದ ಯುವಕರು. 


ಹುಬ್ಬಳ್ಳಿ/ಬೆಳಗಾವಿ(ಜು.13):  ಆನ್‌ಲೈನ್ ಗೇಮ್‌ ಗೀಳಿನಿಂದ ಹಣ ಕಳೆದುಕೊಂಡಿದ್ದ ಯುವಕರಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬೆಳಗಾವಿ ವಡಗಾಂವಿ ಪ್ರದೇಶದ ಆನಂದ ನಗರದ ವಿಕ್ರಮ್ ಸಿಂಗ್ ಧಾರಾಸಿಂಗ್ ಶೇಖಾವತ (26), ವಿಜಯಪುರದ ರಾಕೇಶ ಶ್ರೀಶೈಲ್ ಜಂಬಲದಿನ್ನಿ (22) ಆತ್ಮಹತ್ಯೆಗೆ ಶರಣಾದ ಯುವಕರು. 

ರಾಜಸ್ಥಾನ ಮೂಲಕ ಯುವಕ ವಿಕ್ರಂ ಸಿಂಗ್‌ ಆನ್‌ಲೈನ್‌ ಗೇಮ್‌ ಹವ್ಯಾಸ ಬೆಳೆಸಿಕೊಂಡು ಅದಕ್ಕಾಗಿ ಸಾಲ ಮಾಡಿ, ಸಾಲ ಮರು ಪಾವತಿಸಲಾಗದೇ ಮನನೊಂದು ಮನೆಯ ಕೋಣೆಯಲ್ಲಿ ಟವಲ್‌ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Tap to resize

Latest Videos

undefined

ಸಾಲಬಾಧೆ ತಾಳದೇ ಬೆಳಗಾವಿಯಲ್ಲಿ ಮತ್ತೊಬ್ಬ ರೈತ ಆತ್ಮಹತ್ಯೆ!

ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ (ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್) 6ನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಕೇಶ ಆನ್‌ಲೈನ್‌ ಗೇಮಿಂಗ್‌ ಗೀಳು ಹಚ್ಚಿಕೊಂಡು ಅದರಲ್ಲಿ ದುಡ್ಡು ಕಳೆದುಕೊಂಡಿದ್ದ. ಈ ಕಾರಣದಿಂದಾಗಿಯೇ ಅಂಬೇಡ್ಕರ್‌ ಹಾಸ್ಟೆಲ್‌ನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

click me!