
ಕೋರ್ಬಾ( ಜು. 21) ಮದ್ಯದ ಅಮಲಿನಲ್ಲಿ ಕೆಲವರು ಮಾಡುವ ಕೆಲಸ ದೊಡ್ಡ ಅವಘಡಕ್ಕೂ ಕಾರಣವಾಗಿರುವ ಹಲವು ಉದಾಹರಣೆಗಳಿವೆ. ಪುಣೆಯ ಈ ಕುಡುಕ ಸಹ ಅಂಥದ್ದೇ ಒಂದು ಕೆಲಸ ಮಾಡಿದ್ದ. ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ.
ಅನಾಥ ಶವಕ್ಕೆ ಗೌರವದ ವಿದಾಯ ಸಲ್ಲಿಸಿದ ರೈಲ್ವೆ ಪೊಲೀಸ್‌ಗೊಂದು ಸೆಲ್ಯೂಟ್
ಪುಣೆಯ ಪಟಾಸ್ ಖುತ್‌ಬಾವ್ ರೈಲ್ವೆ ನಿಲ್ದಾಣದಲ್ಲಿ 35 ವರ್ಷದ ವ್ಯಕ್ತಿ ಮದ್ಯದ ಅಮಲಿನಲ್ಲಿ ದ್ವಿಚಕ್ರ ವಾಹನವನ್ನು ರೈಲ್ವೆ ಹಳಿ ಮೇಲೆ ಎಸೆದಿದ್ದಾನೆ. ಈ ವಾಹನವು ಪುಣೆ ದಾನಪುರ ಎಕ್ಸ್‌ಪ್ರೆಸ್ ರೈಲಿನ ಎಂಜಿನ್‌ನ ಅಡಿಯಲ್ಲಿ ಸಿಕ್ಕು ಸುಮಾರು 17 ಕಿ.ಮೀ. ದೂರ ರೈಲಿನ ಅಡಿಯಲ್ಲಿ ಎಳೆದುಕೊಂಡು ಬಂದಿದೆ. ರೈಲ್ವೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿದ್ದಾರೆ.
ರೈಲ್ವೆ ಹಳಿ ಸುತ್ತ ಎಚ್ಚರಿಕೆ ಫಲಕ ಅಳವಡಿಕೆ ಮಾಡಿರಲಾಗುತ್ತದೆ. ಆದರೆ ಮದ್ಯದ ನಶೆಯಲ್ಲಿದ್ದ ವ್ಯಕ್ತಿ ಮಾಡಿದ ಕೆಲಸ ದೊಡ್ಡ ಅವಘಡಕ್ಕೆ ಕಾರಣವಾಗಬಹುದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ