ಕಲಬುರಗಿ: ಪೆಟ್ರೋಲ್‌ ಸುರಿದು ವಿದ್ಯಾರ್ಥಿಯ ಬರ್ಬರ ಕೊಲೆ, ಕಾರಣ..?

By Kannadaprabha News  |  First Published Jun 21, 2021, 3:25 PM IST

* ಕಲಬುರಗಿ ನಗರದ ಹೊರವಲಯದ ಸೈಯದ್‌ ಚಿಂಚೋಳಿ ಕ್ರಾಸ್‌ ಬಳಿ ನಡೆದ ಘಟನೆ
* ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಪರಾರಿಯಾದ ದುಷ್ಕರ್ಮಿಗಳು
* ಆರೋಪಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸರು 
 


ಕಲಬುರಗಿ(ಜೂ.21): ಮತ್ತೊಂದು ಕೊಲೆ ಪ್ರಕರಣ ನಗರದ ಜನರನ್ನು ಬೆಚ್ಚಿ ಬೀಳಿಸಿದೆ. ಎಂಜಿನಿಯರಿಂಗ್‌ ವಿದ್ಯಾರ್ಥಿಯ ಕೈ ಕಟ್ಟಿ ಹಾಕಿ ಮೈಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಗರದ ಹೊರವಲಯದ ಸೈಯದ್‌ ಚಿಂಚೋಳಿ ಕ್ರಾಸ್‌ ಬಳಿ ನಡೆದಿದೆ. 

ಬರ್ಬರ ಹತ್ಯೆಗೊಳಗಾದವನನ್ನು ಶಿವಪುತ್ರಪ್ಪ ಪಗಡೆ (25) ಎಂದು ಗುರುತಿಸಲಾಗಿದೆ. ಆಳಂದ ತಾಲೂಕಿನ ಬೋಧನ ಗ್ರಾಮದ ನಿವಾಸಿಯಾಗಿದ್ದ ಶಿವಪುತ್ರಪ್ಪ, ನಗರದ ಶಹಾಬಜಾರ್‌ನಲ್ಲಿ ವಾಸವಾಗಿದ್ದ. ಡಿಪ್ಲೋಮಾ ಮುಗಿಸಿ ಇಂಜಿನಿಯರಿಂಗ್‌ ಓದುತ್ತ ನಗರದಲ್ಲಿ ಕೆಲಸ ಮಾಡಿಕೊಂಡಿದ್ದ. 

Tap to resize

Latest Videos

ಹಿಂದಿನಿಂದ ಬಂದು ಕತ್ತಿಗೆ ಇರಿದ ಸ್ನೇಹಿತ, ಆಸ್ಪತ್ರೆಯಲ್ಲಿ ಸಿಪಾಯಿ

ಸೈಯದ್‌ ಚಿಂಚೋಳಿ ಮುಖ್ಯರಸ್ತೆ ಬಳಿಯ ಜಮೀನೊಂದರಲ್ಲಿ ವಿದ್ಯಾರ್ಥಿಯ ಕೈಗೆ ಹಗ್ಗ ಕಟ್ಟಿ ಮುಖದ ಮೇಲೆ ಕಲ್ಲು ಹಾಕಿ, ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ದಾರಿಹೋಕರು ಮೃತದೇಹ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಸ್ಥಳಕ್ಕೆ ಡಿಸಿಪಿ ಅಡ್ಡೂರು ಶ್ರೀನಿವಾಸಲು, ಎಸಿಪಿ ಜೆ.ಎಚ್‌ ಇನಾಮದಾರ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಕೊಲೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ಮೃತ ಯುವಕನ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
 

click me!