ಗಾಂಜಾ ಸಾಗಾಟ: ಅಂತಾರಾಜ್ಯ ಗ್ಯಾಂಗ್‌ನ ಇಬ್ಬರ ಬಂಧನ

By Kannadaprabha News  |  First Published Jun 21, 2021, 3:34 PM IST

* ಕರ್ನಾಟಕ-ಮಹಾರಾಷ್ಟ್ರ ನಡುವೆ ಗಾಂಜಾ ಸಾಗಾಟ 
* ಇಬ್ಬರು ಆರೋಪಿಗಳನ್ನು ಬಂಧಿಸಿದ ಆಳಂದ ಪೊಲೀಸರು
* ಸ್ಕಾರ್ಪಿಯೋ ವಾಹನದಲ್ಲಿ ಗಾಂಜಾ ಸಾಗಾಟ 


ಕಲಬುರಗಿ(ಜೂ.21): ಕರ್ನಾಟಕ-ಮಹಾರಾಷ್ಟ್ರ ನಡುವೆ ಸಾಗಾಟ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್‌ನ ಇಬ್ಬರು ಆರೋಪಿಗಳನ್ನು ಆಳಂದ ಪೊಲೀಸರು ಬಂಧಿಸಿದ್ದಾರೆ. ಆಳಂದ ತಾಲೂಕಿನ ಕೋಡಲಹಂಗರಗಾ ತಾಂಡಾದ ರಾಜು ಪವಾರ ಹಾಗೂ ಜೀರಹಳ್ಳಿ ತಾಂಡಾದ ಸಂತೋಷ ಚೌವ್ಹಾಣ ಬಂಧಿತ ಆರೋಪಿಗಳಾಗಿದ್ದಾರೆ.

ಸ್ಕಾರ್ಪಿಯೋ ವಾಹನದಲ್ಲಿ ಗಾಂಜಾ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಡಿವೈಎಸ್‌ಪಿ ಮಲ್ಲಿಕಾರ್ಜುನ್‌ ಸಾಲಿ ಅವರಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ವಿಶೇಷ ತಂಡ ರಚಿಸಿದ ಆಳಂದ ಪೊಲೀಸರು ಮಹಾರಾಷ್ಟ್ರದ ಉಮರ್ಗಾ- ಕರ್ನಾಟಕದ ಆಳಂದ ಮಾರ್ಗದ ಚಿತಲಿ ಕ್ರಾಸ್‌ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ.

Tap to resize

Latest Videos

ಕಲಬುರಗಿ: ಪೆಟ್ರೋಲ್‌ ಸುರಿದು ವಿದ್ಯಾರ್ಥಿಯ ಬರ್ಬರ ಕೊಲೆ, ಕಾರಣ..?

ಆರೋಪಿಗಳು ಜಿಲ್ಲೆಯ ಹಲವೆಡೆ ಬೆಳೆದ ಗಾಂಜಾ ಸಂಗ್ರಹಿಸಿ ಗುಪ್ತವಾಗಿ ಮಹಾರಾಷ್ಟ್ರಕ್ಕೆ ಸಾಗಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಬಂಧಿತರಿಂದ 6 ಲಕ್ಷ ರೂ. ಮೌಲ್ಯದ 59 ಕೆಜಿ ಒಣ ಗಾಂಜಾ ಹಾಗು 6 ಲಕ್ಷ ರು ಮೌಲ್ಯದ ಸ್ಕಾರ್ಪಿಯೋ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಆಳಂದ ಪೊಲೀಸರು, ಗಾಂಜಾ ಸಾಗಾಟದ ಹಿಂದಿರುವ ಗ್ಯಾಂಗ್‌ ಪತ್ತೆಗಾಗಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
 

click me!