
ಲಕ್ನೋ, [ಫೆ.19]: ಪಾಠ ಮಾಡೋ ಶಿಕ್ಷಕ ಅಂದ್ರೆ, ಇಲ್ಲ ಆ ವಿದ್ಯಾರ್ಥಿನಿಯನ್ನ ಲವ್ ಮಾಡ್ತೀನಿ ಎಂದವರು ಕೊನೆಗೆ ಮಸಣ ಸೇರಿದ್ದಾರೆ.
ಹೌದು..ಒಂದೇ ವಿದ್ಯಾರ್ಥಿನಿ ಹಿಂದೆ ಬಿದ್ದಿದ್ದ ಇಬ್ಬರು ಶಿಕ್ಷಕರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ್ ಜಿಲ್ಲೆಯ ಕುರೈಥಿಯಲ್ಲಿ ಬೆಳಕಿಗೆ ಬಂದಿದೆ.
ಓದೋ ಹುಡುಗಿಯ ಮನಸ್ಸಲ್ಲಿ ಪ್ರೀತಿ.. ಪ್ರೇಮ, ಆಟೋದಲ್ಲಿ ನಿರ್ಣಾಮ..!
ಕುರೈಥಿಯ ಎಚ್ ಪಿ ತಿವಾರಿ ಪಬ್ಲಿಕ್ ಶಾಲೆಯಲ್ಲಿ ಈ ಪ್ರಕರಣ ನಡೆದಿದೆ. ಶಾಲೆಯಲ್ಲಿ ಶಿಕ್ಷಕರಾದ ಅನೂಜ್ ಮತ್ತು ಸೂರಜ್ 3 ವರ್ಷಗಳಿಂದ ಒಬ್ಬರಿಗೊಬ್ಬರಿಗೆ ಗೊತ್ತಾಗದಾಗೆ ಅದೇ ಶಾಲೆಯ ವಿದ್ಯಾರ್ಥಿಯನ್ನು ಪ್ರೀತಿಸುತ್ತಿದ್ದರು.
ಆದ್ರೆ ವಿದ್ಯಾರ್ಥಿನಿ ಸೂರಜ್ ನನ್ನು ಪ್ರೀತಿಸುತ್ತಿದ್ದಳು.ಇದನ್ನ ತಿಳಿದ ಅನೂಜ್, ಸೂರಜ್ ಮೇಲೆ ಕೋಪಗೊಂಡು ವಿದ್ಯಾರ್ಥಿನಿಯನ್ನು ಬಿಟ್ಟುಬಿಡುವಂತೆ ಜಗಳ ಮಾಡಿದ್ದಾನೆ.
ನಾನು ಪ್ರೀತಿಸಿದ ಹುಡುಗಿಯನ್ನೇ ನೀನು ಪ್ರೀತಿಸುತ್ತಿದ್ದೀಯಾ ಎಂದು ಕೋಪಗೊಂಡ ಸೂರಜ್ ತನ್ನ ಸ್ನೇಹಿತನ ಜತೆ ಸೇರಿಕೊಂಡು ಅನೂಜ್ ನನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ. ನಂತರ ಮೃತ ದೇಹವನ್ನು ಬಾವಿಗೆ ಎಸೆದಿದ್ದಾರೆ.
ಎಣ್ಣೆ ಪಾರ್ಟಿ, ನಿದ್ರೆ ಮಾತ್ರೆ, 3 ಮಂದಿ: ಪುರುಷನ ಮೇಲಿನ ಮೋಹಕ್ಕಾಗಿ ಆಂಟಿಯ ಸ್ಕೆಚ್
ಆದ್ರೆ, ದಿನ ಬೆಳಗಾಗುವುದರಲ್ಲಿ ಅನೂಜ್ ಸಹ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಷಯ ತಿಳಿದು ರದ್ದಾಂತವಾಗಿಬಿಡುತ್ತೋ ಎನ್ನುವ ಭಯದಿಂದ ಮಾನಕ್ಕೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅನೂಜ್ ಸ್ನೇಹಿತ ರತ್ನೇಶ್ ನನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.
ಒಟ್ಟಿನಲ್ಲಿ ಒಂದು ಲವ್ ಇಬ್ಬರ ಜೀವ ಬಲಿ ತೆಗೆದುಕೊಂಡಿದೆ. ಪ್ರೀತಿಯ ಮಾಯೆಗೆ ಬಿದ್ದವರು ಸುಲಭವಾಗಿ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ