ಸಹೋದರನ ಜೊತೆಗೆ ಅನೈತಿಕ ಸಂಬಂಧ, ವಿರೋಧಿಸಿದ ತಾಯಿಯನ್ನೇ ಕೊಂದ ಮಗಳು!

Published : Mar 09, 2023, 06:54 PM IST
ಸಹೋದರನ ಜೊತೆಗೆ ಅನೈತಿಕ ಸಂಬಂಧ, ವಿರೋಧಿಸಿದ ತಾಯಿಯನ್ನೇ ಕೊಂದ ಮಗಳು!

ಸಾರಾಂಶ

ಉತ್ತರ ಪ್ರದೇಶದ ಉನ್ನಾವೋದಲ್ಲಿ ಹೃದಯವಿದ್ರಾವಕ ಘಟನೆಯೊಂದು  ನಡೆದಿದೆ. ಮಲ ಸಹೋದರನೊಂದಿಗಿನ ಪ್ರೇಮಕ್ಕೆ ಅಡ್ಡಿಯಾಗಿದ್ದ ತನ್ನ ತಾಯಿಯನ್ನು ಪ್ರಿಯಕರನ ಜೊತೆ ಸೇರಿ ಮಗಳೇ ಕೊಂದು ಪರಾರಿಯಾಗಿದ್ದಾಳೆ.

ಉತ್ತರ ಪ್ರದೇಶ (ಮಾ.9): ಉತ್ತರ ಪ್ರದೇಶದ ಉನ್ನಾವೋದಲ್ಲಿ ಹೃದಯವಿದ್ರಾವಕ ಘಟನೆಯೊಂದು  ನಡೆದಿದೆ. ಮಲ ಸಹೋದರನ ಪ್ರೇಮಕ್ಕೆ ಅಡ್ಡಿಯಾಗಿದ್ದ ತನ್ನ ತಾಯಿಯನ್ನು ಪ್ರಿಯಕರನ ಜೊತೆ ಸೇರಿ ಮಗಳೇ ಕೊಂದು ಪರಾರಿಯಾಗಿದ್ದಾಳೆ. ಆರೋಪಿ ಯುವಕ ಕೊಲೆಯಾದ ತಾಯಿಗೆ ಮಲಮಗನಾಗಿದ್ದ. ಇಬ್ಬರನ್ನೂ ನೋಡಬಾರದ ಪರಿಸ್ಥಿತಿಯಲ್ಲಿ ನೋಡಿದ ತಾಯಿ  ಮಗಳಿಗೆ ಮತ್ತೊಬ್ಬನೊಂದಿಗೆ ಮದುವೆ ನಿಶ್ಚಯ ಮಾಡಿದ್ದಳು ಈ ಕಾರಣ, ಪ್ರೇಮಿಗಳು ತಾಯಿಯನ್ನು ಕೊಲ್ಲಲು ಸಂಚು ರೂಪಿಸಿದ್ದನು. ಮಲ-ಸಹೋದರ, ಸಹೋದರಿ ನಡುವಿನ ಅಕ್ರಮ ಸಂಬಂಧಕ್ಕೆ ತಾಯಿ ತೀವ್ರವಾದ ವಿರೋಧ ವ್ಯಕ್ತಪಡಿಸಿದ್ದರು. ಕೊಲೆ ನಡೆದ ದಿನ ಕೂಡ ಆರೋಪಿಗಳು ಮಹಿಳೆಯೊಂದಿಗೆ ಉಳಿದುಕೊಂಡಿದ್ದರು. ಬೆಳಗ್ಗೆ ಮಲಗಿದ್ದ ತಾಯಿಯನ್ನು ಕೊಂದು ಇಬ್ಬರೂ ಪರಾರಿಯಾಗಿದ್ದಾರೆ. ಮಹಿಳೆಯ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಮಗಳು ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಉನ್ನಾವೋದ ಸದರ್ ಕೊತ್ವಾಲಿ ಪ್ರದೇಶದ ಮೊಹಲ್ಲಾ ಬಂಡುಹಾರ್‌ನಲ್ಲಿ ಬಾಡಿಗೆ ಮನೆಯಲ್ಲಿ ಮಗಳೊಂದಿಗೆ ವಾಸಿಸುತ್ತಿದ್ದ ಶಾಂತಿ ಸಿಂಗ್ ಎಂಬ ಮಹಿಳೆ ಕೊಲೆಯಾದ ತಾಯಿಯಾಗಿದ್ದಾಳೆ.  ಶಿವಂ ಮತ್ತು ತನ್ನು ಅಕಾ ಪೂಜಾ ಈ ಪ್ರಕರಣದಲ್ಲಿ ಬಂಧಿತ ಆರೋಪಿಗಳು.  ಇವರಿಬ್ಬರು  ಶಾಂತಿ ಸಿಂಗ್ ಳನ್ನು ಚಾಕುವಿನಿಂದ ಕುತ್ತಿಗೆ ಮತ್ತು ಮುಖಕ್ಕೆ ಹಲವು ಬಾರಿ ಇರಿದು  ಕೊಂದಿದ್ದಾರೆ.

ಕೊಲೆಯಾದ ತಾಯಿ ತಮ್ಮ ಪುತ್ರಿ ಪೂಜಾಳ ವಿದ್ಯಾಭ್ಯಾಸಕ್ಕಾಗಿ ನಗರದಲ್ಲಿ ಬಾಡಿಗೆಗೆ ವಾಸವಾಗಿದ್ದರು. ಮೃತರು ಮೂಲತಃ ಉನ್ನಾವೋದ ಪೂರ್ವ ನಗರದ ನಿವಾಸಿಗಳು. ಮಹಿಳೆಯ ಕೊಲೆಯ ನಂತರ ಪುತ್ರಿ ಪೂಜಾ  ಮನೆಯಿಂದ ನಾಪತ್ತೆಯಾಗಿದ್ದಳು. ಬಾಲಕಿಯ ಮೊಬೈಲ್ ಕರೆ ವಿವರಗಳ ಆಧಾರದ ಮೇಲೆ ಪೊಲೀಸರು ಆಕೆಯ ಮಲ ಸಹೋದರ ಶಿವಂ ರಾವತ್ ನನ್ನು ಬಂಧಿಸಿದ್ದಾರೆ. ಶಿವಂ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಮೃತಳ ಮಗಳನ್ನು ಸಹ ಕಸ್ಟಡಿಗೆ ತೆಗೆದುಕೊಂಡರು.

ಆರೋಪಿ ಶಿವಂ ರಾವತ್ ಮತ್ತು ಮೃತ ಶಾಂತಿದೇವಿಯ ಮಗಳು ಪೂಜಾಳನ್ನು ಕಸ್ಟಡಿಗೆ ತೆಗೆದುಕೊಂಡ ನಂತರ, ಪೊಲೀಸರು ಕಟ್ಟುನಿಟ್ಟಿನ ವಿಚಾರಣೆಯನ್ನು ಪ್ರಾರಂಭಿಸಿದಾಗ ಇಬ್ಬರು  ತಮ್ಮ ಕೊಲೆಯ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ತನ್ನ ಮಲಸಹೋದರನೊಂದಿಗಿನ ಪ್ರೇಮಕ್ಕೆ ಅಡ್ಡಿಪಡಿಸಿದಕ್ಕೆ ಸ್ವಂತ ತಾಯಿಯನ್ನೇ ತನ್ನ ಪ್ರಿಯಕರನ ಜೊತೆಗೂಡಿ ಕೊಲೆ ಮಾಡಿರುವುದಾಗಿ  ಮಗಳು ಒಪ್ಪಿಕೊಂಡಿದ್ದಾಳೆ. ತಾಯಿ ಬೇರೊಬ್ಬನನ್ನು ಮದುವೆಯಾಗುವಂತೆ ಒತ್ತಾಯಿಸಿದಳು. ಇದಕ್ಕಾಗಿ ಈ ಸಂಚು ರೂಪಿಸಿದ್ದಾಗಿ ಹೇಳಿದ್ದಾಳೆ.

Bengaluru Crime: ಬ್ರೇಕಪ್‌ ಆಗಿದ್ದಕ್ಕೆ ಮಹಿಳೆಯ ಮುಖಕ್ಕೆ ಚಾಕುವಿನಿಂದ ಕೊಯ್ದ ಪಾಗಲ್‌

ಕೊಲೆಯಾದ ದಿನವೂ ಆರೋಪಿಗಳು ಒಂದೇ ಮನೆಯಲ್ಲಿರು. ಬೆಳಗ್ಗೆ ಮಲಗಿದ್ದ ಮಹಿಳೆಯನ್ನು ಕೊಂದು ಇಬ್ಬರೂ ಪರಾರಿಯಾಗಿದ್ದಾರೆ. ಮಹಿಳೆಯ ಹತ್ಯೆಯನ್ನು ವಿವರಿಸಿದ ಪೊಲೀಸರು ಮಹಿಳೆಯ ಮಗಳು ಮತ್ತು ಪ್ರಿಯಕರನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಹೋಳಿ ಬಣ್ಣ ಹಚ್ಚಿದ್ದಕ್ಕೆ ಹಿಂದು ಸ್ನೇಹಿತನಿಗೆ ಬೆಂಕಿ ಇಟ್ಟ ಮುಸ್ಲಿಂ ವ್ಯಕ್ತಿ!

ಇಡೀ ವಿಷಯವನ್ನು ವಿವರಿಸಿದ ಸಿಒ ಸಿಟಿ ಅಶುತೋಷ್ ಕುಮಾರ್, ಸುತ್ತಮುತ್ತಲಿನ ಜನರ ಪ್ರಕಾರ, 1 ದಿನದ ಹಿಂದೆ ವ್ಯಕ್ತಿಯೊಬ್ಬ ಮಹಿಳೆಯ ಮನೆಗೆ ಬಂದಿದ್ದಾನೆ. ಇದರಲ್ಲಿ ಆತನ ಮಗನಾದ ಶಿವಂ ಮತ್ತು ಆತನ ಮಲತಂಗಿ ತನು ಎಂಬುವರು ಅಕ್ರಮ ಸಂಬಂಧ ಹೊಂದಿದ್ದರು. ಮಹಿಳೆ ಇಬ್ಬರನ್ನೂ ಆಕ್ಷೇಪಾರ್ಹ ಸ್ಥಿತಿಯಲ್ಲಿ ನೋಡಿದಳು. ಕೋಪದಲ್ಲಿ ಮಗ ಶಿವಂ ತನ್ನ ತಾಯಿಯನ್ನು ಕೊಂದಿದ್ದಾನೆ. ಆರೋಪಿಗಳಿಬ್ಬರನ್ನೂ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?