
ಕೊಚ್ಚಿ: ಚಿನ್ನ ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಏರ್ ಇಂಡಿಯಾ ಕ್ಯಾಬಿನ್ ಕ್ರೀವ್ ಓರ್ವನನ್ನು ಕೊಚ್ಚಿ ಏರ್‌ಪೋರ್ಟ್‌ನಲ್ಲಿ (Kochi Airport) ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ವಯನಾಡ್ (Wayanad) ಮೂಲದ ಶಾಫಿ ಬಂಧಿತನಾದ ಏರ್ ಇಂಡಿಯಾದ ಸಿಬ್ಬಂದಿ, ಈತ ತನ್ನ ತೋಳುಗಳ ಕೈ ತೋಳುಗಳ ಮೇಲೆ ಚಿನ್ನವನ್ನು ಇಟ್ಟು ಅದಕ್ಕೆ ಗಮ್ ಟೇಪ್‌ನಿಂದ ಕವರ್ ಮಾಡಿದ್ದ ನಂತರ ಉದ್ದ ತೋಳಿನ ಶರ್ಟ್ ಧರಿಸಿದ್ದ. ಹೀಗೆ ಈತ ಕಳ್ಳ ಸಾಗಣೆ ಮಾಡಿ ತಂದ 1,487 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಆತನನ್ನು ಬಂಧಿಸಿದ್ದಾರೆ.
ಬಹ್ರೇನ್ ನಿಂದ ಕೋಝಿಕೋಡ್-ಕೊಚ್ಚಿಗೆ ( Bahrain-Kozhikode-Kochi) ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದ ಶಫಿ ಎಂಬಾತ ಕಳ್ಳಸಾಗಣೆ ಮೂಲಕ ಚಿನ್ನ ತರುತ್ತಿದ್ದಾನೆ ಎಂಬ ಗೌಪ್ಯ ಮಾಹಿತಿ ಕಸ್ಟಮ್ಸ್ ಪ್ರಿವೆಂಟಿವ್ ಕಮಿಷನರೇಟ್‌ಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ತಪಾಸಣೆ ಮಾಡಿದಾಗ ಚಿನ್ನ ಇರುವುದು ಪತ್ತೆಯಾಗಿದೆ.
10.5 ಕೋಟಿ ಮೌಲ್ಯದ ಚಿನ್ನ ಸಮುದ್ರಕ್ಕೆಸೆದ ಕಳ್ಳಸಾಗಣೆದಾರರು...!
ಆರೋಪಿ ಕೈಗಳಿಗೆ ಚಿನ್ನವನ್ನು ಸುತ್ತಿ ಗಮ್‌ಟೇಪ್‌ನಿಂದ ಅಡಗಿಸಿದ್ದ ನಂತರ ಫುಲ್ ಸ್ಲೀವ್‌ನ ಶರ್ಟ್ ಧರಿಸಿದ್ದ ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೂ ಮೊದಲು ಸಿಂಗಾಪುರದಿಂದ ಚೆನ್ನೈ ಏರ್‌ಪೋರ್ಟ್‌ಗೆ ಆಗಮಿಸಿದ ಇಬ್ಬರು ಪ್ರಯಾಣಿಕರು 3.3 ಕೋಟಿ ಮೊತ್ತದ 6.8 ಕೆಜಿ ತೂಕದ ಚಿನ್ನ ಕಳ್ಳಸಾಗಣೆ ಮಾಡಿ ಚೆನ್ನೈ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದರು.
ಇವರು ಸಿಂಗಾಪುರದಿಂದ ಚೆನ್ನೈಗೆ ಏರ್ ಇಂಡಿಯಾ AI-347 ಹಾಗೂ 6E-52 ವಿಮಾನದಲ್ಲಿ ಆಗಮಿಸಿದ್ದರು. ಈ ಬಗ್ಗೆ ಚೆನ್ನೈ ಕಸ್ಟಮ್ಸ್ ಟ್ವಿಟ್ ಮಾಡಿತ್ತು. ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ, ಸಿಂಗಾಪುರದಿಂದ AI-347 ಮತ್ತು 6E-52 ಮೂಲಕ ಬಂದ 2 ಪ್ರಯಾಣಿಕರನ್ನು 07.03.23 ರಂದು ಕಸ್ಟಮ್ಸ್ ತಡೆಹಿಡಿದಿದೆ. ಅವರ ಲಗೇಜ್ ಪರಿಶೀಲಿಸಿದಾಗ ಒಟ್ಟು 6.8 ಕೆಜಿ ತೂಕದ ಚಿನ್ನ 3.32 ಕೋಟಿ ಮೌಲ್ಯದ ಚಿನ್ನ ಪತ್ತೆಯಾಗಿದ್ದು, ಅದನ್ನು CA 1962 ಕಾಯ್ದೆಯಡಿ ವಶಪಡಿಸಿಕೊಳ್ಳಲಾಗಿದೆ. ಅವರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ವಿಶ್ವದರ್ಜೆಯ ವೈಮಾನಿಕ ಸಂಸ್ಥೆಯಾಗುವತ್ತ ಏರ್ ಇಂಡಿಯಾ ಚಿತ್ತ
ಭಾರತದ ಏರ್ ಇಂಡಿಯಾ ಸಂಸ್ಥೆ ಏರ್‌ಬಸ್‌ನಿಂದ 250 ವಿಮಾನಗಳು ಮತ್ತು ಬೋಯಿಂಗ್‌ನಿಂದ 220 ವಿಮಾನಗಳನ್ನು ಖರೀದಿಸಲಿದೆ. ಏರ್ ಇಂಡಿಯಾ ಸಂಸ್ಥೆಯ ಮಾಲಕತ್ವ ಹೊಂದಿರುವ ಟಾಟಾ ಗ್ರೂಪ್ ತಮ್ಮ ವಿಮಾನಯಾನ ಸಂಸ್ಥೆಯನ್ನು ಪುನಶ್ಚೇತನಗೊಳಿಸಲು ಹಾಗೂ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲು, ಏರ್‌ಬಸ್ ಹಾಗೂ ಬೋಯಿಂಗ್ ಸಂಸ್ಥೆಗಳಿಂದ 470 ನೂತನ ವಿಮಾನಗಳನ್ನು ಖರೀದಿಸಲು ನಿರ್ಧರಿಸಿದೆ. ಇದು ವಾಣಿಜ್ಯ ನಾಗರಿಕ ವಿಮಾನಯಾನ ಕ್ಷೇತ್ರದ ಇತಿಹಾಸದಲ್ಲೇ ಬೋಯಿಂಗ್ ಸಂಸ್ಥೆಯ ಅತ್ಯಂತ ಬೃಹತ್ ವ್ಯವಹಾರವಾಗಿದ್ದು, ಅದು 34 ಬಿಲಿಯನ್ ಡಾಲರ್ ಮೌಲ್ಯದ ವಿಮಾನಗಳನ್ನು ಪೂರೈಸಲಿದೆ. ಇನ್ನೊಂದೆಡೆ ಏರ್‌ಬಸ್ ಸಂಸ್ಥೆ 35 ಬಿಲಿಯನ್ ಡಾಲರ್ ಪಡೆಯಲಿದೆ. ಬೋಯಿಂಗ್ ಜೊತೆ ಸಹಿ ಹಾಕಲಾಗಿರುವ ಒಪ್ಪಂದದಲ್ಲಿ ಇನ್ನೂ 50 ನೂತನ 737 ಮ್ಯಾಕ್ಸ್ ಜೆಟ್ ಹಾಗೂ 20 ನೂತನ 787 ವಿಮಾನಗಳನ್ನು ಖರೀದಿಸುವ ಆಯ್ಕೆಯೂ ಸೇರಿದೆ. ಆದರೆ ಇದಕ್ಕಾಗಿ ಇನ್ನೂ 12 ಬಿಲಿಯನ್ ಡಾಲರ್ ಪಾವತಿಸಲಾಗುತ್ತದೆ.
Bengaluru: ಟಾಕಿಂಗ್ ಟಾಮ್ ಬಳಸಿ ಡ್ರಗ್ಸ್ ಕಳ್ಳಸಾಗಣೆ: ಮೂವರ ಬಂಧನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ