
ತುಮಕೂರು (ಅ.5): ದನ ಮೇಯಿಸಲು ಹೋಗಿದ್ದ ಅಕ್ಕ-ತಂಗಿಯರಿಬ್ಬರು ಕೃಷಿ ಹೊಂಡದಲ್ಲಿ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗ್ರಾಮದಲ್ಲಿ ನಡೆದಿದೆ.
ಗಂಗಮ್ಮ(37), ಶಕುಂತಲಾ (36), ಮೃತ ಅಕ್ಕತಂಗಿಯರು. ಇಬ್ಬರೂ ತವರು ಮನೆ ಹರ್ಷಪುರದಲ್ಲೇ ವಾಸಿಸುತ್ತಿದ್ದರು.
ಸಂಜೆಯಾದ್ರೂ ಮನೆಗೆ ವಾಪಸ್ ಆಗದ ಅಕ್ಕ-ತಂಗಿ:
ಎಂದಿನಂತೆ ದನ ಮೇಯಿಸಲು ಹೊಲಕ್ಕೆ ತೆರಳಿದ್ದ ಅಕ್ಕತಂಗಿಯರು, ಸಂಜೆಯಾದರೂ ಮನೆಗೆ ಮರಳದಿದ್ದಾಗ, ಕುಟುಂಬಸ್ಥರು ಅನುಮಾನಗೊಂಡು ಹುಡುಕಾಟ ಆರಂಭಿಸಿದ್ದರು. ಅಕ್ಕಪಕ್ಕದವರನ್ನು ವಿಚಾರಿಸಿ, ದನ ಮೇಯಿಸಲು ಹೋಗುತ್ತಿದ್ದ ಪಕ್ಕದ ಹೊಲದಲ್ಲಿ ಹುಡುಕಾಟ ನಡೆಸುತ್ತಿದ್ದಾಗ, ಕೃಷಿ ಹೊಂಡದ ಬಳಿ ಇಬ್ಬರ ಚಪ್ಪಲಿಗಳು ಪತ್ತೆಯಾಗಿದ್ದವು. ಬಳಿಕ ಕೃಷಿ ಹೊಂಡದಲ್ಲಿ ಹುಡುಕಿದಾಗ ಗಂಗಮ್ಮ ಮತ್ತು ಶಕುಂತಲಾ ಅವರ ಶವಗಳು ಕಂಡುಬಂದವು.
ಇದನ್ನೂ ಓದಿ: ಬೆಂಗಳೂರು: ಪತಿಯಿಂದ ವರದಕ್ಷಿಣೆ ಕಿರುಕುಳ ಆರೋಪ; ಗೃಹಿಣಿ ನೇಣಿಗೆ ಶರಣು!
ಅನುಮಾನಸ್ಪಾದ ಸಾವು:
ಈ ಹೊಂಡ ಅನಿಲ್ ಎಂಬುವರಿಗೆ ಸೇರಿದ್ದು, ಸುತ್ತಲೂ ಯಾವುದೇ ಫೆನ್ಸಿಂಗ್ ಇರಲಿಲ್ಲ. ಈ ಘಟನೆ ಬಗ್ಗೆ ಕುಟುಂಬಸ್ಥರು, ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೃಷಿ ಹೊಂಡಗಳ ಸುರಕ್ಷತೆ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ