
ರಾಯಚೂರು (ಅ.5): ಕಾಲುವೆಯಲ್ಲಿ ಈಜಲು ಹೋಗಿ ಯುವಕರಿಬ್ಬರು ದಾರುಣವಾಗಿ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಬಳಿ ನಡೆದಿದೆ.
ವೆಂಕಟೇಶ (28) ಮತ್ತು ಯಲ್ಲಾಲಿಂಗ (28) ಮೃತ ದುರ್ದೈವಿಗಳು, ಯುವಕರಿಬ್ಬರೂ ಮುದಗಲ್ ಪಟ್ಟಣದವರೆಂದು ಗುರುತಿಸಲಾಗಿದೆ.
ಕಾಂತಾರ ಸಿನಿಮಾ ಟಿಕೆಟ್ ಸಿಗದೇ ದುರಂತ!
ಇಬ್ಬರು ಸ್ನೇಹಿತರು ಇಂದು ಮಸ್ಕಿ ಪಟ್ಟಣಕ್ಕೆ ‘ಕಾಂತಾರಾ’ ಸಿನಿಮಾ ವೀಕ್ಷಣೆಗೆಂದು ಬಂದಿದ್ದರು. ಆದರೆ, ಮಧ್ಯಾಹ್ನದ ಶೋಗೆ ಟಿಕೆಟ್ ಸಿಗದ ಕಾರಣ, ಸಂಜೆಯ ಶೋಗೆ ಯೋಜನೆ ಹಾಕಿದ್ದರು. ಸಂಜೆವರೆಗೆ ಸಮಯ ಕಳೆಯಲು ಇಬ್ಬರೂ ಸಮೀಪದ ಕಾಲುವೆಯಲ್ಲಿ ಈಜಲು ಹೋಗಿದ್ದರು. ಕಾಲುವೆಯಲ್ಲಿ ಈಜಾಡುವ ವೇಳೆ ಈಜುಬಾರದ ಯಲ್ಲಾಲಿಂಗ ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗುತ್ತಿದ್ದಾಗ, ಅವನನ್ನು ರಕ್ಷಿಸಲು ಹೋದ ವೆಂಕಟೇಶ ಕೂಡ ದುರಂತಕ್ಕೀಡಾಗಿ ನೀರಿನಲ್ಲಿ ಮುಳುಗಿದ್ದಾನೆ.
ಇದನ್ನೂ ಓದಿ: ಚಿಕ್ಕೋಡಿ: ಬಾಲಕಿ ರೇಪ್ ಕೇಸ್, ಆರೋಪಿಗೆ ಗಲ್ಲು ಶಿಕ್ಷೆ, ಶಿಕ್ಷೆಗೆ ಗ್ರಾಮಸ್ಥರು ಸಂಭ್ರಮ, ಪಿಎಸ್‌ಐ ಭಾವುಕ!
ಮೃತದೇಹಗಳು ಸಿರವಾರ ಪಟ್ಟಣದ ಬಳಿ ಪತ್ತೆ:
ಮೃತದೇಹಗಳು ಸಿರವಾರದ ಬಳಿ ಕಾಲುವೆಯಲ್ಲಿ ಪತ್ತೆಯಾಗಿದ್ದು, ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದ್ದು, ಯುವಕರ ಕುಟುಂಬಸ್ಥರ ಅಕ್ರಂದನ ಮುಗಿಲುಮುಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ