ಖತರ್ನಾಕ್ ಕಳ್ಳನೋರ್ವ ಹಾಡುಹಗಲೇ ತಹಸೀಲ್ದಾರ್ ಕಚೇರಿಗೆ ನುಗ್ಗಿ ಬರೊಬ್ಬರಿ ಎರಡು ಪ್ರಿಂಟರ್ ಕದ್ದೊಯ್ದ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಹಸೀಲ್ದಾರ್ ಕಚೇರಿಯಲ್ಲಿ ನಡೆದಿದೆ.
ತುಮಕೂರು (ಜೂ.2): ಖತರ್ನಾಕ್ ಕಳ್ಳನೋರ್ವ ಹಾಡುಹಗಲೇ ತಹಸೀಲ್ದಾರ್ ಕಚೇರಿಗೆ ನುಗ್ಗಿ ಬರೊಬ್ಬರಿ ಎರಡು ಪ್ರಿಂಟರ್ ಕದ್ದೊಯ್ದ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಹಸೀಲ್ದಾರ್ ಕಚೇರಿಯಲ್ಲಿ ನಡೆದಿದೆ.
ನಿನ್ನೆ ಬೆಳಗ್ಗೆ 8.30 ಗಂಟೆ ಸುಮಾರಿಗೆ ನಡೆದಿರುವ ಘಟನೆ. ಸಾರ್ವಜನಿಕ ಸೋಗಿನಲ್ಲಿ ತಹಸೀಲ್ದಾರ್ ಕಚೇರಿಗೆ ಬಂದಿರುವ ಖದೀಮ. ಶಿರಸ್ತೇದಾರ್ ಕಚೇರಿಯ ಎರಡು ಪ್ರಿಂಟರ್ ಗಳನ್ನ ಕದ್ದೊಯ್ದರು ಮೈಮರೆತು ಕುಳಿತಿದ್ದ ಸಿಬ್ಬಂದಿ. ಪ್ರಿಂಟರ್‌ಗಳನ್ನ ಬ್ಯಾಗ್‌ನಲ್ಲಿಟ್ಟುಕೊಳ್ಳುತ್ತಿರುವ ದೃಶ್ಯ ಕಚೇರಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ. ಬ್ಯಾಗ್‌ನಲ್ಲಿ ಪ್ರಿಂಟರ್‌ಗಳನ್ನಿಟ್ಟುಕೊಂಡು ಏನೂ ಆಗಿಯೇ ಇಲ್ಲವೆಂಬಂತೆ ನಿರ್ಭಯವಾಗಿ ನೆಡದುಹೋಗಿರುವ ಖದೀಮ.
undefined
ರೈಲು ಚಲಿಸುತ್ತಿದ್ದಂತೆ ಮೊಬೈಲ್ ಎಗರಿಸಿದ ಬಾಲಕ, ಅಸಹಾಯಕನಾಗಿ ನಿಂತ ಮಾಲೀಕ,ವಿಡಿಯೋ!
ಕಳೆದೆರಡು ದಿನಗಳಿಂದ ಗುಬ್ಬಿ ಪಟ್ಟಣದಲ್ಲಿ ಹೆಚ್ಚಾಗಿರುವ ಕಳ್ಳತನ. ಎರಡು ದಿನಗಳ ಹಿಂದೆ ಪಟ್ಟಣದ ದೊಡ್ಡ ಸೂಪರ್ ಮಾರ್ಕೆಟ್‌ನಲ್ಲಿ ಕಳ್ಳತನ ನಡೆದಿತ್ತು. ಈಗಿರುವ ತಹಸೀಲ್ದಾರ್ ಆರತಿ ಮನೆಯಲ್ಲೂ ಎರಡು ವರ್ಷಗಳ ಹಿಂದೆ ಕಳ್ಳತನ ನಡೆದಿತ್ತು. ಎರಡು ವರ್ಷಗಳಾದರೂ ಕಳ್ಳರನ್ನ ಪತ್ತೆಹಚ್ಚಿ ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಇದೀಗ ತಹಸೀಲ್ದಾರ್ ಕಚೇರಿಗೆ ಹಾಡುಹಗಲೇ ನುಗ್ಗಿ ಕಳ್ಳತನ ಮಾಡಲಾಗಿದೆ ಎಂದರೆ ಇನ್ನು ಸಾಮಾನ್ಯ ಜನರು ಮನೆಯಲ್ಲಿ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಉದ್ಭವವಾಗಿದೆ. ತಹಸೀಲ್ದಾರ್ ಕಚೇರಿಯ ಪ್ರಿಂಟರ್ ಕದ್ದೊಯ್ದಿರುವುದರಿಂದ ಕೆಲಸ ಕಾರ್ಯಗಳಿಗೆ ಬಂದಿದ್ದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಸಿಬ್ಬಂದಿ ನಿರ್ಲಕ್ಷ್ಯ, ಪೊಲೀಸ್ ಇಲಾಖೆಯ ವೈಫಲ್ಯದಿಂದ ಕಳ್ಳತನ ಪ್ರಕರಣಗಳು ಮೀತಿ ಮೀರಿ ನಡೆಯುತ್ತಿವೆ. ಇದಕ್ಕೆ ಕೊನೆ ಯಾವಾಗ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.