ವಿಜಯಪುರ: ಲೈಂಗಿಕ ಕ್ರಿಯೆ ನಡೆಸುವಾಗಲೇ ಸಿಕ್ಕಿಬಿದ್ದ ಮಹಿಳೆ, ಯುವಕನ ಬರ್ಬರ ಕೊಲೆ..!

By Kannadaprabha News  |  First Published Jul 23, 2020, 11:15 AM IST

ಅನೈತಿಕ ಸಂಬಂಧ ಶಂಕೆ| ಮಹಿಳೆ, ಯುವಕನ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ| ವಿಜಯಪುರ ತಾಲೂಕಿನ ಅಲಿಯಾಬಾದ ಗ್ರಾಮದಲ್ಲಿ ನಡೆದ ಘಟನೆ| ಈ ಕುರಿತು ವಿಜಯಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು|


ವಿಜಯಪುರ(ಜು.23): ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಮಹಿಳೆ ಹಾಗೂ ಯುವಕನ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ತಾಲೂಕಿನ ಅಲಿಯಾಬಾದ ಗ್ರಾಮದ ತೋಟದ ಮನೆಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಅಲಿಯಾಬಾದ್ ಗ್ರಾಮದ ಯುವಕ ಅಮರನಾಥ ಸೊಲ್ಲಾಪುರ(25) ಅದೇ ಗ್ರಾಮದ ಮಹಿಳೆ ಸುನೀತಾ ತಳವಾರ (35) ಕೊಲೆಗೀಡಾದವರು. 

"

Tap to resize

Latest Videos

ಮಂಗಳವಾರ ರಾತ್ರಿ ಅಲಿಯಾಬಾದ ಗ್ರಾಮದ ತೋಟದ ಮನೆಯಲ್ಲಿ ಅನೈತಿಕ ಸಂಬಂಧ ನಡೆಸುವ ವೇಳೆ ಸಿಕ್ಕ ಮಹಿಳೆ ಹಾಗೂ ಯುವಕನ ಕೊಲೆ ನಡೆದಿದೆ ಎನ್ನಲಾಗಿದೆ. ಕೊಲೆ ಮಾಡಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. 

ಮಗಳ ಮುಂದೆಯೇ ಜರ್ನಲಿಸ್ಟ್ ಕೊಲೆ, ದೂರು ಕೊಟ್ಟಿದ್ದೆ ತಪ್ಪಾಯ್ತಾ?

ಘಟನಾ ಸ್ಥಳಕ್ಕೆ ವಿಜಯಪುರ ಗ್ರಾಮಾಂತರ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ತನಿಖೆ ಮುಂದುವರೆಸಿದ್ದಾರೆ. ಈ ಕುರಿತು ವಿಜಯಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

click me!