ಲಕ್ನೋ(ಜು. 21)  ಉತ್ತರ ಪ್ರದೇಶದ ಪತ್ರಕರ್ತರೊಬ್ಬರನ್ನು ದುಷ್ಕರ್ಮಿಗಳ ಗುಂಪು ನಡು ರಸ್ತೆಯಲ್ಲೇ ಹತ್ಯೆ ಮಾಡಿದೆ. ತನ್ನ ಸೋದರ ಸೊಸೆಗೆ ಕೆಲವರು ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ರಕರ್ತ ದೂರು ದಾಖಲಿಸಿದ ಕೆಲವೇ ದಿನದಲ್ಲಿ ಕೊಲೆಯಾಗಿ ಹೋಗಿದ್ದಾರೆ. ಪೊಲೀಸರು ಕೊಲೆಗೆ ಸಂಬಂಧಿಸಿ ಐದು ಜನರ ತಂಡವೊಂದನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ತನ್ನ ಮಗಳ ಜತೆ ಬೈಕ್ ನಲ್ಲಿ ತೆರಳುತ್ತಿದ್ದ ಪತ್ರಕರ್ತ ವಿಕ್ರಮ್ ಜೋಶಿ ಮೇಲೆ ದಾಳಿಯಾಗಿದೆ.  ಪತ್ರಕರ್ತನ ಮೇಲೆ ಗುಂಡಿನ ದಾಳಿಮಾಡಲಾಗಿದೆ.  ದಾಳಿಯಿಂದ ಗಾಗೊಂಡ ತಂದೆಯ ಬಳಿ ಮಗಳು ಕುಳಿತು ಅಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮತ್ತೊಬ್ಬನೊಂದಿಗೆ ಸಲುಗೆ ಸಹಿಸದ ಪಾಗಲ್ ಪ್ರೇಮಿ ಮಾಡಿದ ಕೊಲೆ

ಹಲ್ಲೆಗೊಳಗಾದ ವಿಕ್ರಮ್ ಜೋಶಿ ಅವರನ್ನು ಯಶೋಧಾ ಆಸ್ಪತ್ರೆಗೆ ಸೇರಿಸಲಾಯಿತಾದರೂ ಪ್ರಯೋಜನ ಆಗಲಿಲ್ಲ. ಬೈಕ್ ನಲ್ಲಿ ತೆರಳುತ್ತಿದ್ದ ಪತ್ರಕರ್ತನ ಅಡ್ಡ ಹಾಕಿ ದಾಳಿ ಮಾಡಲಾಗಿದೆ. ತಪ್ಪಿಸಿಕೊಳ್ಳಲು ಯತ್ನಿಸಿದರೂ ಗುಂಪು ಬೆನ್ನು ಹತ್ತಿದೆ. ತಂದೆಯ ಬಳಿ ಕುಳೀತು ಮಗಳು ಸಹಾಯಕ್ಕಾಗಿ ಅಂಗಲಾಚಿದ್ದಾರೆ.

ಸೋದರ ಸೊಸೆಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ದೂರು ನೀಡಿದ್ದೇ ಕೊಲೆಗೆ ಕಾರಣವಾಗಿದೆ. ಅಪರತಾಧಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ವಿಕ್ರಮ್ ಜೋಶಿ ಸಹೋದರ ಒತ್ತಾಯಿಸಿದ್ದಾರೆ.