ಯುವತಿ ಜತೆ ಡೇಟಿಂಗ್‌ ಆಸೆ ತೋರಿಸಿ 1 ಲಕ್ಷ ವಂಚನೆ..!

By Kannadaprabha News  |  First Published Jul 23, 2020, 7:23 AM IST

ಆನ್‌ಲೈನ್‌ನಲ್ಲಿ ಡೇಟಿಂಗ್‌ ಸರ್ವಿಸ್‌ಗೆ ಸಂತ್ರಸ್ತ ಯುವಕನ ಹುಡುಕಾಟ| ಜೂ.14 ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ, ನಾವು ನಿಮಗೆ ಡೇಟಿಂಗ್‌ ಸರ್ವಿಸ್‌ಗಾಗಿ ಮಹಿಳೆ ಜತೆ ಅವಕಾಶ ಮಾಡಿಕೊಡುವುದಾಗಿ ಹೇಳಿದ್ದ| ಆರೋಪಿಗಳಿಗೆ ಹಂತ ಹಂತವಾಗಿ 99,700 ಗೂಗಲ್‌ ಪೇ ಮೂಲಕ ಹಣ ಪಾವತಿಸಿದ ಸಂತ್ರಸ್ತ|


ಬೆಂಗಳೂರು(ಜು.23): ಸೈಬರ್‌ ಕಳ್ಳರು ಯುವತಿ ಜತೆ ಡೇಟಿಂಗ್‌ ಆಸೆ ತೋರಿಸಿ ಯುವಕನೊಬ್ಬನಿಗೆ 1 ಲಕ್ಷ ವಂಚಿಸಿರುವ ಘಟನೆ ನಡೆದಿದೆ. ಜೆ.ಪಿ.ನಗರ ಸಮೀಪ ಇಲಿಯಾಸ್‌ ನಗರದ ನಿವಾಸಿ 27 ವರ್ಷದ ಯುವಕ ಮೋಸ ಹೋಗಿದ್ದಾನೆ. 

ಈ ಬಗ್ಗೆ ದಕ್ಷಿಣ ವಿಭಾಗದ ಸಿಇಎನ್‌ ಠಾಣೆಯಲ್ಲಿ ಸಂತ್ರಸ್ತ ದೂರು ದಾಖಲಿಸಿದ್ದಾನೆ. ಇತ್ತೀಚಿಗೆ ಆನ್‌ಲೈನ್‌ನಲ್ಲಿ ಡೇಟಿಂಗ್‌ ಸರ್ವಿಸ್‌ಗೆ ಸಂತ್ರಸ್ತ ಹುಡುಕಾಟ ನಡೆಸಿದ್ದ. ಜೂ.14 ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ, ನಾವು ನಿಮಗೆ ಡೇಟಿಂಗ್‌ ಸರ್ವಿಸ್‌ಗಾಗಿ ಮಹಿಳೆ ಜತೆ ಅವಕಾಶ ಮಾಡಿಕೊಡುವುದಾಗಿ ಹೇಳಿದ್ದರು. 

Tap to resize

Latest Videos

ಇಂಡಿಗೋ ಏರ್‌ಲೈನ್ಸ್‌ನಲ್ಲಿ ನೌಕರಿ ಆಸೆ ತೋರಿಸಿ ಟೋಪಿ: ಮೋಸದ ಬಲೆಗೆ ಬಿದ್ದ ಯುವತಿ

ಈ ಮಾತು ನಂಬಿದ ಸಂತ್ರಸ್ತ, ಆರೋಪಿಗಳಿಗೆ ಹಂತ ಹಂತವಾಗಿ 99,700 ಗೂಗಲ್‌ ಪೇ ಮೂಲಕ ಹಣ ಪಾವತಿಸಿದ್ದಾನೆ. ಹಣ ಸಂದಾಯವಾದ ಬಳಿಕ ಆರೋಪಿಗಳು ಸಂಪರ್ಕ ಕಡಿತವಾಗಿದೆ.
 

click me!