ಹುಬ್ಬಳ್ಳಿಯಲ್ಲಿ ಎರಡು ಜೀವ ಬಲಿಪಡೆದ ಮೀಟರ್ ಬಡ್ಡಿ

By Suvarna News  |  First Published Jul 19, 2022, 8:24 PM IST

ಆತ್ಮಹತ್ಯೆ ಮಾಡಿಕೊಂಡಿದ್ದ ತಮ್ಮನನ್ನು ನೋಡಲು ಹೋಗಿ ಅಣ್ಣನೂ ಸಹ ದುರಂತ ಅಂತ್ಯಕಂಡಿದ್ದಾನೆ.  ಮೀಟರ್ ಬಡ್ಡಿ, ಅಕ್ರಮದ ದಂಧೆಕೊರರ ಹಾವಳಿಗೆ ಎರಡು ಜೀವಗಳು ಬಲಿಯಾದಂತಾಗಿವೆ.


ಹುಬ್ಬಳ್ಳಿ, (ಜುಲೈ.19): ಹುಬ್ಬಳ್ಳಿಯಲ್ಲಿ ಮೀಟರ್ ಬಡ್ಡಿ, ಅಕ್ರಮದ ದಂಧೆಕೊರರ ಹಾವಳಿಗೆ ಎರಡು ಜೀವಗಳು ಬಲಿಯಾಗಿವೆ. ಬಡ್ಡಿ ಕುಳಗಳ ಕಾಟಕ್ಕೆ ಬೇಸತ್ತ ಬಟ್ಟೆ ವ್ಯಾಪಾರಿಯೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿನ ಸುದ್ದಿ‌ಕೇಳಿ ತಮ್ಮನನ್ನು ನೋಡಲು ಹೋದ ಅಣ್ಣನೂ ಸಹ ದುರಂತ ಅಂತ್ಯಕಂಡಿದ್ದಾನೆ. 

ಈ  ಘಟನೆ ಹುಬ್ಬಳ್ಳಿಯ ಉಣಕಲ್ ಕೆರೆಯಲ್ಲಿ ನಡೆದಿದ್ದು, ಹುಬ್ಬಳ್ಳಿಯ ಕೇಶ್ವಾಪುರದ ಮಯೂರ ಎಸ್ಟೇಟ್ ನಿವಾಸಿ ಸುನೀಲ ದೋಂಗಡೆ(39) ಎಂಬಾತನೇ ಆತ್ಮಹತ್ಮೆ ಮಾಡಿಕೊಂಡ ಬಟ್ಟೆ ವ್ಯಾಪಾರಿಯಾಗಿದ್ದಾನೆ. ಕ್ರಿಕೆಟ್ ಬೆಟ್ಟಿಂಗ್ ನಲ್ಲಿನಹಣ ತೊಡಗಿಸಿ ಕೈ ಸುಟ್ಟುಕೊಂಡಿದ್ದ  ಸುನಿಲ್  ಹಲವರಿಂದ ಕೈಗಡ ಸಾಲ ಪಡೆದಿದ್ದ ಈತನಿಗೆ ಬಡ್ಡಿ ಕುಳಗಳ ಕಾಟ ಹೆಚ್ಚಾಗಿತ್ತು ಎನ್ನಲಾಗಿದೆ. ಕೇಶ್ವಾಪುರ ನಟೋರಿಸ್ ರೌಡಿ ಷೀಟರ್ ಒಬ್ಬ 20 ಲಕ್ಷಕ್ಕೆ‌ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. 

Latest Videos

undefined

ಬೆಂಗಳೂರಿನಲ್ಲಿ ಹಾಡಹಗಲೇ ಲಾಂಗ್ ತೋರಿಸಿ ದರೋಡೆ -ಸಿಸಿಟಿವಿಯಲ್ಲಿ ಸೆರೆ ಆಯ್ತು ಕೃತ್ಯ

ಈ ಕುರಿತಂತೆ ಸುನೀಲ್ ದೊಂಗಡೇ ಸಾಯುವ ಮುನ್ನ ವಿಡಿಯೋ ಒಂದನ್ನು ಮಾಡಿದ್ದಾನೆ. ಉಣಕಲ್ ಕೆರೆಯ ಚನ್ನ ಬಸವೇಶ್ವರ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ, ಸ್ನೇಹಿತರೊಬ್ಬರಿಗೆ ಕರೆ ಮಾಡಿ ಮೊಬೈಲ್ ಅಲ್ಲಿಯೇ ಬಿಟ್ಟು ರಾತ್ರಿ ಕೆರೆಗೆ ಜಿಗಿದು ಸಾವಿಗೆ ಶರಣಾಗಿದ್ದಾನೆ. 

ವಿಷಯ ತಿಳಿದು ಮೃತನ ಸಹೋದರ ಕೆರೆ ಬಳಿ ತೆರಳಿ ಹುಡುಕಾಟ ನಡೆಸಿದ್ದು ಈ ವೇಳೆ ಕಾಲು ಜಾರಿ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಆತನು‌ ಮೃತಪಟ್ಟಿದ್ದು, ಕುಟುಂಬಸ್ಥರಲ್ಲಿ ಆಕ್ರಂಧನ ಮುಗಿಲು ಮುಟ್ಟಿದೆ.

ಆತ್ಮಹತ್ಯೆ ಪ್ರಕರಣ ದಾಖಲಿಸಿ ಕೊಂಡಿರುವ ಹುಬ್ಬಳ್ಳಿಯ ವಿದ್ಯಾನಗರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಮೃತನ ದೇಹವನ್ನು ಹೊರ ತೆಗೆದಿದ್ದಾರೆ.

ಮೀಟರ್ ಬಡ್ಡಿ ಬಾಧೆ ತಪ್ಪಿಸಲು ಸ್ವನಿಧಿ ಯೋಜನೆ
ಮೀಟರ್ ಬಡ್ಡಿಯಿಂದ ತಪ್ಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಸ್ವನಿಧಿ ಯೋಜನೆ(Svanidhi Scheme) ಜಾರಿ ಮಾಡಿದ್ದಾರೆ. ಜುಲೈ 18 ಪಾಲಿಕೆಯ ಡಾ.ರಾಜ್‌ಕುಮಾರ್ ಸಂಭಾಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವನಿಧಿ ಮಹೋತ್ಸವಕ್ಕೆ ಚಾಲನೆ ನೀಡಿದ್ದಾರೆ. ಹಾಗೂ ನಿಗದಿತ ಅವಧಿಯಲ್ಲಿ ಬ್ಯಾಂಕ್ ಗಳ ಸಾಲ ಮರು ಪಾವತಿಸಿದ ಬೀದಿ ಬದಿ ವ್ಯಾಪಾರಿಗಳಿಗೆ ಸಿಎಂ ಗೌರವ ಸಲ್ಲಿಸಿದ್ದಾರೆ.

ಇನ್ನು ಕಾರ್ಯಕ್ರಮದಲ್ಲಿ ಸ್ವನಿಧಿ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ ಬೊಮ್ಮಾಯಿ, ಒಟ್ಟು 9 ಸಾವಿರ ಫಲಾನುಭವಿಗಳಿಗೆ ಹಣಕಾಸಿನ ಸಹಕಾರ ಕೊಡಲಾಗುತ್ತೆ. ಮೀಟರ್ ಬಡ್ಡಿಯಿಂದ ತಪ್ಪಿಸಿ ಸರ್ಕಾರ ಸ್ವನಿಧಿ ಯೋಜನೆ ಮಾಡಿದ್ದಾರೆ. ಕೇಂದ್ರ ಸರ್ಕಾರದಿಂದ ಹಣ ಬರುತ್ತಿದೆ ಎಂದು ಹೇಳಿದ್ದರು.
 

click me!