
ವಿಜಯಪುರ, (ಜುಲೈ 19): ವಿ.ಆರ್.ಎಲ್ ಖಾಸಗಿ ಬಸ್ ಸೋಮವಾರ ತಡರಾತ್ರಿ ಇಲಕಲ್ ಸಮೀಪ ಅಪಘಾತಕೀಡಾಗಿದೆ. ಬಸ್‌ನಲ್ಲಿದ್ದ ವನಶ್ರೀ ಸಂಸ್ಥಾನಮಠ ಗಾಣಿಗ ಗುರುಪೀಠದ ಡಾ.ಜಯಬಸವ ಕುಮಾರ ಜಗದ್ಗುರುಗಳಿಗೆ ಸಣ್ಣ ಪೆಟ್ಟುಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಜಯಪುರದಿಂದ ಹರಿಹರ ಪೀಠಕ್ಕೆ ಸೋಮವಾರ ರಾತ್ರಿ ವಿ.ಆರ್.ಎಲ್ ಖಾಸಗಿ ಬಸ್ ಮೂಲಕ ಪ್ರಯಾಣಿಸುವಾಗ ಇಲಕಲ್ ಸಮೀಪ ಬಸ್ ಅಪಘಾತಕೀಡಾಗಿದೆ. ಅಪಘಾತದಲ್ಲಿ ಡಾ.ಜಯಬಸವ ಕುಮಾರ ಸ್ವಾಮೀಜಿಯವರಿಗೆ ಕುತ್ತಿಗೆ ಹಾಗೂ ಬೆನ್ನು ಭಾಗಕ್ಕೆ ಸ್ವಲ್ಪ ಪೆಟ್ಟಾಗಿದ್ದು, ಅದೃಷ್ಟವಶಾತ್ ಪೂಜ್ಯರು ಪ್ರಾಣಾಪಾಯದಿಂದ ಪಾರಾಗಿದ್ದು, ವನಶ್ರೀ ಸದ್ಭಕ್ತರು ಯಾವುದೇ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಸಿಂಧನೂರು: ಲಾರಿ-ಕಾರು ನಡುವೆ ಭೀಕರ ಅಪಘಾತ, ಸ್ಥಳದಲ್ಲೇ ನಾಲ್ವರ ದುರ್ಮರಣ
ಅಪಘಾತದಲ್ಲಿ ಗಾಯಗೊಂಡ ಸ್ವಾಮೀಜಿಯವರನ್ನು ತುರ್ತು ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೂಜ್ಯರ ಆರೋಗ್ಯ ಸ್ಥಿತಿ ಕುರಿತು ಶ್ರೀಮಠದ ಸದ್ಭಕ್ತರಲ್ಲಿ ಸಾಕಷ್ಟು ಆತಂಕ ಮನೆ ಮಾಡಿತ್ತು. ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದ ನಂತರ ಡಾ.ಜಯಬಸವ ಕುಮಾರ ಶ್ರೀಗಳು ಭಕ್ತರನ್ನುದ್ದೇಶಿಸಿ ಸಂದೇಶ ಕಳುಹಿಸಿದ್ದಾರೆ. ಅಪಘತದಲ್ಲಿ ಕತ್ತು ಹಾಗೂ ಬೆನ್ನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಭಕ್ತರು ಆತಂಕ ಪಡಬೇಕಿಲ್ಲ..!
ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಾಲ್ಕೈದು ದಿನಗಳಲ್ಲಿ ಗುಣಮುಖರಾಗಲಿದ್ದೇನೆ. ಯಾರೂ ಆತಂಕಪಡುವ ಅವಶ್ಯಕತೆಯಿಲ್ಲ. ಶೀಘ್ರ ಗುಣಮುಖನಾಗಿ ಭಕ್ತರ ಸೇವೆಗೆ ಶೀಘ್ರ ಮರಳಲಿದ್ದೇನೆ. ಅಲ್ಲಿಯವರೆಗೂ ಎಲ್ಲರೂ ಸಹಕರಿಸಿ. ಹಾಗೇ ಅಪಘಾತದಲ್ಲಿ ಗಾಯಗೊಂಡ ಇತರ ಸಹ ಪ್ರಯಾಣಿಕರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ