ಬೆತ್ತಲೆ ಫೋಟೋ ವೈರಲ್‌ ಬೆದರಿಕೆ: ಸ್ನೇಹಿತರ ಕಾಟಕ್ಕೆ ಕಂಗಾಲಾದ ಯುವತಿ..!

Kannadaprabha News   | Asianet News
Published : Jan 21, 2021, 08:56 AM ISTUpdated : Jan 21, 2021, 08:59 AM IST
ಬೆತ್ತಲೆ ಫೋಟೋ ವೈರಲ್‌ ಬೆದರಿಕೆ: ಸ್ನೇಹಿತರ ಕಾಟಕ್ಕೆ ಕಂಗಾಲಾದ ಯುವತಿ..!

ಸಾರಾಂಶ

ಹಣ, ಒಡವೆ ಪಡೆದರೂ ಪದೇ ಪದೆ ಬ್ಲ್ಯಾಕ್‌ಮೇಲ್‌| ಸಂತ್ರಸ್ತ ಯುವತಿಯಿಂದ ಪೊಲೀಸರಿಗೆ ದೂರು| ಸ್ನೇಹಿತರಿಬ್ಬರ ಬಂಧಿಸಿದ ಅಮೃತಹಳ್ಳಿ ಪೊಲೀಸರು| 

ಬೆಂಗಳೂರು(ಜ.21): ಯುವತಿಯ ಖಾಸಗಿ ಫೋಟೋ​ಗ​ಳನ್ನು ಸಾಮಾ​ಜಿಕ ಜಾಲ​ತಾ​ಣ​ದಲ್ಲಿ ಹಾಕುವುದಾಗಿ 3 ವರ್ಷಗಳಿಂದ ಬ್ಲ್ಯಾಕ್‌​ಮೇಲ್‌ ಮಾಡು​ತ್ತಿದ್ದ ಇಬ್ಬರು ಆರೋಪಿಗಳನ್ನು ಅಮೃತಹಳ್ಳಿ ಪೊಲೀಸ್‌ ಠಾಣೆ​ ಪೊಲೀಸರು ಬಂಧಿಸಿದ್ದಾರೆ.

19 ವರ್ಷ​ದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಈಕೆಯ ಸ್ನೇಹಿತರಾದ ದೇವಸಂದ್ರ ನಿವಾಸಿಗಳಾದ ಬ್ರಿಜ್‌ ಭೂಷಣ್‌ ಯಾದವ್‌ (21) ಮತ್ತು ವಿವೇಕ್‌ ರೆಡ್ಡಿ (20) ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೆ.ಆರ್‌.ಪುರದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ಯುವತಿಗೆ ಆರೋಪಿ ಬ್ರಿಜ್‌ಭೂಷಣ್‌ ಪರಿಚಯವಾಗಿತ್ತು. ಬಳಿಕ ಇಬ್ಬರು ಸ್ನೇಹಿತರಾಗಿದ್ದರು. ಆರೋಪಿ ಪದೇ ಪದೆ ಸಂತ್ರ​ಸ್ತೆಯ ಮನೆಗೆ ಬರು​ತ್ತಿದ್ದ. ಅನಂತರ ಯುವತಿ ಆರೋ​ಪಿ​ಯಿಂದ ಅಂತರ ಕಾಯ್ದು​ಕೊಂಡು, ಮಾತ​ನಾ​ಡು​ವು​ದನ್ನು ಬಿಟ್ಟಿ​ದ್ದರು. ಈ ನಡುವೆ ಆರೋಪಿ 2018ರಲ್ಲಿ ‘ನನ್ನ ಬಳಿ ನಿನ್ನ ಬೆತ್ತಲೆ ಫೋಟೋ​ಗ​ಳಿ​ವೆ. ಹಣ, ಚಿನ್ನಾ​ಭ​ರಣ ಕೊಡ​ದಿ​ದ್ದ​ರೆ ಸಾಮಾಜಿಕ ಜಾಲತಾಣಗಳಲ್ಲಿ ಆ ಫೋಟೋ​ಗ​ಳನ್ನು ಹಾಕು​ತ್ತೇನೆ’ ಎಂದು ಬೆದ​ರಿ​ಕೆ​ಯೊ​ಡ್ಡುತ್ತಿದ್ದ. ಇದರಿಂದ ಆತಂಕಗೊಂಡ ಯುವತಿ ಮನೆ​ಯ​ಲ್ಲಿದ್ದ 218 ಗ್ರಾಂ ಚಿನ್ನಾ​ಭ​ರಣ, 75 ಸಾವಿರ ರು. ನಗದು ಕೊಟ್ಟಿ​ದ್ದರು.

ಪತ್ನಿಯ ಅಶ್ಲೀಲ ಫೋಟೋ ತೆಗೆದು ಗಂಡನ ವಿಕೃತಿ

ಯುವತಿಯ ಅಸಹಾಯಕತೆಯನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ್ದ ಬ್ರಿಜ್‌ ಭೂಷಣ್‌ನ ಸ್ನೇಹಿತ ವಿವೇಕ್‌ ರೆಡ್ಡಿ 2019ರಲ್ಲಿ ಫೇಸ್‌ಬುಕ್‌ನಲ್ಲಿ ಯುವತಿಯೊಂದಿಗೆ ಚಾಟ್‌ ಮಾಡುತ್ತಿದ್ದ. ಬಳಿಕ ರಾಚೇ​ನ​ಹಳ್ಳಿ ಕೆರೆ ಬಳಿ ಕರೆ​ಸಿ​ಕೊಂಡು ಅಸ​ಭ್ಯ​ವಾಗಿ ನಡೆ​ದು​ಕೊ​ಳ್ಳು​ತ್ತಿದ್ದ. ಒಮ್ಮೆ ಕರೆ ಮಾಡಿ ‘ನಿನ್ನ ಖಾಸಗಿ ಫೋಟೋ’ ಇದೆ ಎಂದು ಬೆದರಿಸಿ, ಹಣ, ಒಡ​ವೆ ಕೊಡದಿದ್ದರೆ ಖಾಸಗಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡು​ತ್ತೇ​ನೆ ಎಂದು ಬೆದರಿಸಿದ್ದ. ಇದ​ರಿಂದ ಹೆದರಿದ ಸಂತ್ರಸ್ತೆ,​ ತ​ನ್ನ ಮಾವನ ಪತ್ನಿಯ ಮಾಂಗಲ್ಯ ಸರ ತಂದು ಕೊಟ್ಟಿ​ದ್ದರು. ಆದರೂ ಆರೋಪಿ​ಗಳು ಪದೇ ಪದೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡು​ತ್ತಿದ್ದರು. ಇದ​ರಿಂದ ಬೇಸತ್ತ ಸಂತ್ರಸ್ತೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ