ಬಂಧಿತರಿಂದ 11 ಲಕ್ಷ ಮೌಲ್ಯದ 32 ಕೆ.ಜಿ. ಗಾಂಜಾ ಹಾಗೂ 19 ಎಲ್‌ಎಸ್‌ಡಿ ಮಾತ್ರೆಗಳ ಜಪ್ತಿ| ಸುಲಭವಾಗಿ ಹಣ ಸಂಪಾದನೆಗೆ ಡ್ರಗ್ಸ್ ಮಾಫಿಯಾ ಜತೆ ಕೈ ಜೋಡಿಸಿದ್ದ ಆರೋಪಿ|
ಬೆಂಗಳೂರು(ಅ.09): ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದ ಇಬ್ಬರನ್ನು ಸದ್ದುಗುಂಟೆ ಠಾಣೆ ಪೊಲೀಸರು ಪ್ರತ್ಯೇಕವಾಗಿ ಬಂಧಿಸಿದ್ದಾರೆ.
ಗುರಪ್ಪನಪಾಳ್ಯದ ಪರ್ವೇಜ್ ಹಾಗೂ ಕಾಸರಗೋಡು ಮೂಲದ ಅಶ್ವಿನ್ ಅಲಿಯಾಸ್ ಸೈಫುದ್ದೀನ್ ಬಂಧಿತರಾಗಿದ್ದು, ಆರೋಪಿಗಳಿಂದ 11 ಲಕ್ಷ ಮೌಲ್ಯದ 32 ಕೆ.ಜಿ. ಗಾಂಜಾ ಹಾಗೂ 19 ಎಲ್‌ಎಸ್‌ಡಿ ಮಾತ್ರೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
undefined
ಕಾರಲ್ಲೇ ಗಾಂಜಾ ಸೇವನೆ: ಉದ್ಯಮಿಗಳ ಬಂಧನ
ನಗರದ ಖಾಸಗಿ ಕಂಪನಿಯೊಂದರಲ್ಲಿ ಪರ್ವೇಜ್ ನೌಕರಿಯಲ್ಲಿದ್ದ. ಆಗ ಮಾದಕ ವ್ಯಸನಿಯಾಗಿದ್ದ. ಬಳಿಕ ಸುಲಭವಾಗಿ ಹಣ ಸಂಪಾದನೆಗೆ ಡ್ರಗ್ಸ್ ಮಾಫಿಯಾ ಜತೆ ಕೈ ಜೋಡಿಸಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಆತನನ್ನು ಬಂಧಿಸಿ 1.6 ಕೆ.ಜಿ ಗಾಂಜಾ ಹಾಗೂ 19 ಎಲ್‌ಎಸ್‌ಡಿ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಯಿತು.
ಮತ್ತೊಂದು ಪ್ರಕರಣದಲ್ಲಿ ಕೇರಳ ಮೂಲದ ಅಶ್ವಿನ್, ಕೆಲ ವರ್ಷಗಳಿಂದ ನಗರದಲ್ಲಿ ನೆಲೆಸಿದ್ದ. ಮಂಗಳೂರಿನಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಆತನಿಂದ 10 ಲಕ್ಷ ಮೌಲ್ಯದ 30 ಕೆ.ಜಿ 700 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.