ಡ್ರಗ್ಸ್‌ ಮಾಫಿಯಾ: ನೈಜೀರಿಯಾ ಪ್ರಜೆಗಳಿಂದ 15 ಲಕ್ಷದ ಮಾದಕ ವಸ್ತು ಜಪ್ತಿ

By Kannadaprabha NewsFirst Published Feb 14, 2021, 8:37 AM IST
Highlights

ನೈಜೀರಿಯಾ ಮೂಲದ ವಿನ್ಸೆಂಟ್‌ ಹಾಗೂ ಜಾನ್‌ ಬಂಧಿತ ಆರೋಪಿಗಳು| ಬಂಧಿತರಿಂದ ಕೊಕೇನ್‌ ಸೇರಿದಂತೆ 15 ಲಕ್ಷ ಮೌಲ್ಯದ ಡ್ರಗ್ಸ್‌ ಜಪ್ತಿ| ಮಾದಕ ವಸ್ತು ಮಾರಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆರೋಪಿಗಳ ಬಂಧನ| ಹಣದಾಸೆಗೆ ಡ್ರಗ್ಸ್‌ ದಂಧೆ ಶುರು| 

ಬೆಂಗಳೂರು(ಫೆ.14): ನಗರದಲ್ಲಿ ವಿದೇಶಿ ಪೆಡ್ಲರ್‌ಗಳ ವಿರುದ್ಧ ಸಿಸಿಬಿ ಕಾರ್ಯಾಚರಣೆ ಮುಂದುವರೆದಿದ್ದು, ಮತ್ತಿಬ್ಬರು ರಾಮಮೂರ್ತಿ ನಗರ ಸಮೀಪ ಸಿಸಿಬಿ ಬಲೆಗೆ ಬಿದ್ದಿದ್ದಾರೆ.

ನೈಜೀರಿಯಾ ಮೂಲದ ವಿನ್ಸೆಂಟ್‌ ಹಾಗೂ ಜಾನ್‌ ಬಂಧಿತರಾಗಿದ್ದು, ಆರೋಪಿಗಳಿಂದ ಕೊಕೇನ್‌ ಸೇರಿದಂತೆ 15 ಲಕ್ಷ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಲಾಗಿದೆ. ರಾಮಮೂರ್ತಿ ನಗರದ ಸಮೀಪ ಮಾದಕ ವಸ್ತು ಮಾರಾಟದ ಬಗ್ಗೆ ಖಚಿತ ಮಾಹಿತಿ ಪಡೆದು ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಡ್ರಗ್ಸ್‌ ಮಾಫಿಯಾ: ಪೊಲೀಸರಿಗೆ ಬೆಚ್ಚಿ ನಗರ ತೊರೆದ ಪಾರ್ಟಿ ಶೂರರು

ಈ ಇಬ್ಬರು ವಿದೇಶಿಗರು ರಾಮಮೂರ್ತಿ ನಗರ ಹತ್ತಿರದ ಬಿ.ಚನ್ನಸಂದ್ರದಲ್ಲಿ ನೆಲೆಸಿದ್ದರು. ಮೂರು ವರ್ಷಗಳಿಂದ ಜಾನ್‌ ನಗರದಲ್ಲಿ ನೆಲೆಸಿದ್ದರೆ, ಕೆಲ ದಿನಗಳ ಹಿಂದಷ್ಟೆ ದೆಹಲಿಯಿಂದ ವಿನ್ಸೆಂಟ್‌ ನಗರಕ್ಕೆ ಬಂದಿದ್ದ. ಹಣದಾಸೆಗೆ ಸಹಚರರ ಜತೆ ಸೇರಿ ಆರೋಪಿಗಳು ಡ್ರಗ್ಸ್‌ ದಂಧೆ ಶುರು ಮಾಡಿದ್ದರು.
 

click me!