ಪತ್ನಿ ಸಾವಿನ ಸುದ್ದಿ ಕೇಳಿ ಪತಿ ಆತ್ಮಹತ್ಯೆ: ಸಾವಿನಲ್ಲೂ ಒಂದಾದ ದಂಪತಿ

By Kannadaprabha News  |  First Published Feb 13, 2021, 3:33 PM IST

ಮಹಾರಾಷ್ಟ್ರದ ಪುಣೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದ ಹೆಂಡತಿ| ಹಡಂತಿ ಸಾವಿನ ಸುದ್ದಿ ಕೇಳಿದ ಪತಿ ಆತ್ಮಹತ್ಯೆ| ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿ| ಈ ಸಂಬಂಧ ಮಹಾಗಾಂವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು| 


ಕಲಬುರಗಿ(ಫೆ.13): ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದ ಮಡದಿ ಸಾವಿನ ಸುದ್ದಿ ಕೇಳಿದ ಪತಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಕಮಲಾಪುರ ತಾಲೂಕಿನ ಲಾಡಮುಗಳಿ ಗ್ರಾಮದಲ್ಲಿ ನಡೆದಿದೆ. 

ಲಾಡಮುಗಳಿ ಗ್ರಾಮದ ನಿವಾಸಿ ದೇವಾ ಗುತ್ತೆದಾರ್‌ (28) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತನ ಪತ್ನಿ ಜ್ಯೋತಿ ನಿನ್ನೆ ಮಹಾರಾಷ್ಟ್ರದ ಪುಣೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು.

Tap to resize

Latest Videos

ವಿಚಿತ್ರ ಭಂಗಿಯಲ್ಲಿ ವೈದ್ಯ ಗಂಡನಿಂದ ನಿಸರ್ಗಕ್ಕೆ ವಿರೋಧ ಸೆಕ್ಸ್, ಪತ್ನಿ ಸುಸೈಡ್!

ನಾಲ್ಕು ವರ್ಷದ ಹಿಂದೆ ದೇವಾ ಹಾಗೂ ಜ್ಯೋತಿ ಮದುವೆಯಾಗಿದ್ದು, ಸುಂದರ ಸಂಸಾರ ಕೂಡಾ ನಡೆಸಿದ್ದರು. ಆದರೆ ಮಕ್ಕಳು ಆಗಿರಲಿಲ್ಲ ಎನ್ನಲಾಗಿದೆ. ಈ ನಡುವೆ ನಿನ್ನೆ ಜ್ಯೋತಿ ಹೃದಯಾಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾಳೆ. ಇದರಿಂದ ನೊಂದಿದ್ದ ದೇವಾ ಗ್ರಾಮದಲ್ಲಿ ಇಂದು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೊನೆಗೂ ಗಂಡ ಹೆಂಡತಿ ಇಬ್ಬರೂ ಸಾವಿನಲ್ಲಿ ಒಂದಾಗುವ ಮೂಲಕ ಮನ ಕಲುಕುವಂತೆ ಮಾಡಿದ್ದಾರೆ. ಈ ಸಂಬಂಧ ಮಹಾಗಾಂವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!