ವೇಲ್ನಿಂದ ಬಿಗಿದು ಕೊಲೆ ಪತ್ನಿ ಕೊಲೆ ಮಾಡಿದ ಗಂಡ| ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನಡೆದ ಘಟನೆ| ಪತ್ನಿಗೆ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಪತಿ| ಜಗಳವಾಗಿ ಕೊಲೆಯಲ್ಲಿ ಅಂತ್ಯ| ಆರೋಪಿಯನ್ನು ಬಂಧಿಸಿದ ಪೊಲೀಸರು|
ಹಗರಿಬೊಮ್ಮನಹಳ್ಳಿ(ಫೆ.13): ವರದಕ್ಷಿಣೆ ಸಂಬಂಧಿಸಿದಂತೆ ಪತಿ-ಪತ್ನಿ ಜಗಳ ತಾರಕಕ್ಕೇರಿ ಪತ್ನಿ ಸಾವಿನಲ್ಲಿ ಅಂತ್ಯವಾದ ಘಟನೆ ಪಟ್ಟಣದಲ್ಲಿ ಗುರುವಾರ ನಡೆದಿದೆ.
ಪಟ್ಟಣದ ನಿವಾಸಿ ಶಫಿಉಲ್ಲಾ ತನ್ನ ಪತ್ನಿ ಮನ್ಸೂರ್ (30) ಅವರನ್ನು ವೇಲ್ನಿಂದ ಬಿಗಿದು ಕೊಲೆ ಮಾಡಿದ್ದಾನೆ. ಶಫಿಉಲ್ಲಾ 6 ತಿಂಗಳ ಹಿಂದೆ ಹೂವಿನಹಡಗಲಿಯ ಜಿಪಂ ಉಪಾವಿಭಾಗಕಾರಿ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಕಾರ್ಯನಿರ್ವಹಿಸುತ್ತಿದ್ದ ಮನ್ಸೂರ್ ಅವರನ್ನು ಮದುವೆಯಾಗಿದ್ದ.
ಬೈಕ್ ಹಿಂಬದಿ ಸೀಟಿನಲ್ಲೇ ಯಮರಾಜ... ಕೊಲೆ ಮಾಡಿಸಿದ ಗ್ರಾಪಂ ಜಿದ್ದು
ವರದಕ್ಷಿಣೆ ತರುವಂತೆ ಪೀಡಿಸಿದ್ದರಿಂದ ಕೆಲ ದಿನಗಳ ಹಿಂದೆ ಜಗಳವಾಗಿ ಪತ್ನಿ ತವರು ಮನೆಗೆ ಹೋಗಿದ್ದಳು. ಪಾಲಕರು ಬುದ್ಧಿ ಹೇಳಿ ಮರಳಿ ಗಂಡನ ಮನೆಗೆ ಕಳಿಸಿದ್ದರು. ಇದೀಗ ಮತ್ತೊಮ್ಮೆ ಜಗಳವಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.