Chikkamagaluru: ಟ್ರಾಕ್ಟರ್ ಅಡಿಗೆ ಸಿಲುಕಿ ಇಬ್ಬರು ದುರ್ಮರಣ

By Suvarna NewsFirst Published Jan 31, 2023, 9:05 PM IST
Highlights

ಟ್ರಾಕ್ಟರ್ ಅಡಿಗೆ ಸಿಲುಕಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆದಿದೆ. ಇಬ್ಬರು ಟ್ರಾಕ್ಟರ್ ಚಕ್ರವನ್ನು ಬದಲಿಸುವ ಕಾರ್ಯದಲ್ಲಿ ಮಗ್ನರಾಗಿದ್ದರು. ಆ ಸಂದರ್ಭದಲ್ಲಿ ಜಾಕ್ ಸ್ಲಿಪ್ ಆಗಿ ಟ್ರಾಕ್ಟರ್ ಟ್ರಾಲಿ ಅಚಾನಕ್ಕಾಗಿ ಉರುಳಿ ಈ ದುರಂತ ನಡೆದಿದೆ.

ಚಿಕ್ಕಮಗಳೂರು (ಜ.31): ಟ್ರಾಕ್ಟರ್ ಅಡಿಗೆ ಸಿಲುಕಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನಲ್ಲಿ ನಡೆದಿದೆ. ಕೊಪ್ಪ ತಾಲ್ಲೂಕಿನ ಹರಿಹರಪುರ ಸಮೀಪದ ನಿಲುವಾಗಿಲು ಗ್ರಾಮದ ಸುಬ್ರಮಣ್ಯ (30 ವರ್ಷ) ಹಾಗೂ ಸುನಿಲ್ (27 ವರ್ಷ) ಮೃತ ದುರ್ದೈವಿಗಳು. ಸುಬ್ರಮಣ್ಯ ಮತ್ತು ಸುನಿಲ್ ಇಬ್ಬರು ಟ್ರಾಕ್ಟರ್ ಚಕ್ರವನ್ನು ಬದಲಿಸುವ ಕಾರ್ಯದಲ್ಲಿ ಮಗ್ನರಾಗಿದ್ದರು. ಆ ಸಂದರ್ಭದಲ್ಲಿ ಜಾಕ್ ಸ್ಲಿಪ್ ಆಗಿ ಟ್ರಾಕ್ಟರ್ ಟ್ರಾಲಿ ಅಚಾನಕ್ಕಾಗಿ ಉರುಳಿದೆ. ಪರಿಣಾಮ ಇಬ್ಬರು ಟ್ರಾಲಿಯಡಿಗೆ ಸಿಲುಕಿಕೊಂಡು ಹೊರಬರಲಾಗದೇ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹರಿಹರಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಟ್ರ್ಯಾಕ್ಟರ್‌ ಹರಿದು ದ್ವಿಚಕ್ರ ವಾಹನ ಸವಾರನ ಸಾವು:
ಮೈಸೂರು: ಆಯತಪ್ಪಿ ಬಿದ್ದ ಕೂಡಲೇ ಎದುರುಗಡೆಯಿಂದ ಬರುತ್ತಿದ್ದ ಟ್ರ್ಯಾಕ್ಟರ್‌ ಹರಿದ ಪರಿಣಾಮ ಬೈಕ್‌ ಸವಾರ ಮೃತಪಟ್ಟಘಟನೆ ನಡೆದಿದೆ. ಸಮೀಪದ ಶಿರಮಳ್ಳಿ ಗ್ರಾಮದ ರಂಗಸ್ವಾಮಿ ಅವರ ಪುತ್ರ ದರ್ಶನ್‌ (22) ಮೃತಪಟ್ಟದುರ್ದೈವಿ. ಮೃತ ದರ್ಶನ್‌ ತನ್ನ ಸ್ನೇಹಿತನೊಡನೆ ಹುಲ್ಲಹಳ್ಳಿಯಲ್ಲಿ ಮಾತ್ರೆ ಹಾಗೂ ಮನೆ ಬಳಕೆ ವಸ್ತುಗಳನ್ನು ತೆಗೆದುಕೊಂಡು ಶಿರಮಳ್ಳಿ ಗ್ರಾಮಕ್ಕೆ ಬರುವಾರ ಈ ಘಟನೆ ಸಂಭವಿಸಿದೆ. ಹುಲ್ಲಹಳ್ಳಿ ಪೊಲೀಸ್‌ ಠಾಣೆಯ ಎಸ್‌ಐ, ಸಿಬ್ಬಂದಿ ದೂರು ದಾಖಲಿಸಿಕೊಂಡಿದ್ದಾರೆ.

Latest Videos

ವಿದ್ಯುತ್‌ ತಗುಲಿ ಸ್ಥಳದಲ್ಲೇ ರೈತ ಸಾವು
ವಿಜಯಪುರ: ಬೆಳೆಗಳಿಗೆ ನೀರು ಹಾಯಿಸಲು ಮೋಟಾರ್‌ ಪ್ರಾರಂಭಿಸಲು ಹೋದಾಗ ಆಕಸ್ಮಿಕವಾಗಿ ವಿದ್ಯುತ್‌ ತಗುಲಿ ರೈತನೊರ್ವ ಸ್ಥಳದಲ್ಲೇ ಮೃತಪಟ್ಟಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.

ತಾಂಬಾ ಗ್ರಾಮದ ಸಂತೋಷ ಸಿದ್ದಪ್ಪ ಹುಣಶ್ಯಾಳ(42) ಮೃತಪಟ್ಟ ರೈತ. ಸಿದ್ದಪ್ಪ ಬೆಳಿಗ್ಗೆ 9 ಗಂಟೆಯ ನಡುವಿನ ವೇಳೆಯಲ್ಲಿ ಬೆಳೆಗಳಿಗೆ ನೀರು ಹಾಯಿಸಲು ಹೋದಾಗ ಈ ದುರ್ಘಟನೆ ನಡೆದಿದೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗ ಇದೆ. ಈ ಬಡ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಒತ್ತಾಯಿಸಿದ್ದಾರೆ. ಈ ಕುರಿತು ಇಂಡಿ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಾರು ಅಪಘಾತ, ಗಾಯಾಳು ಸಾವು
ಉಳ್ಳಾಲ: ರಾ.ಹೆ.66ರ ಕೊಲ್ಯ-ಅಡ್ಕ ನಡುವೆ ಭಾನುವಾರ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸೋಮವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಾರು ಚಲಾಯಿಸುತ್ತಿದ್ದ ಸಹೋದರ ಅಬ್ದುಲ್‌ ರಿಫಾಯಿ ಅಪಘಾತ ಸ್ಥಳದಲ್ಲೇ ಮೃತಪಟ್ಟಿದ್ದರು. ಉಪ್ಪಳ ಹಿದಾಯತ್‌ ನಗರದ ಬಾಷರ್‌ ಅಹಮ್ಮದ್‌ (22) ಮೃತಪಟ್ಟವರು. ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಸಿಎ ವಿದ್ಯಾರ್ಥಿಯಾಗಿದ್ದರು.

ಬೆಳಗಾವಿ: ಹಿಂದೂ ದೇವರ ಫೋಟೋ ವಿರೂಪ; ಆರೋಪಿ ಬಂಧನ

ಜ.28ರಂದು ಗಲ್ಫ್ ನಿಂದ ಆಗಮಿಸಿದ್ದ ಮಹಮ್ಮದ್‌ ರಿಫಾಯಿ, ತಂದೆಯ ಸಹೋದರನ ಪುತ್ರ ಬಾರ್ಷ ಅಹಮ್ಮದ್‌ ಸೇರಿದಂತೆ ಆತನ ಸಹಪಾಠಿಗಳಾದ ಫಾತಿಮಾ ಹಾಗೂ ರೇವತಿ ಮಂಗಳೂರಿನಿಂದ ತಲಪಾಡಿ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ. ಕೊಲ್ಯ ಸಮೀಪ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಏರಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ಸಂಪೂರ್ಣ ನುಜ್ಜುಗುಜ್ಜಾಗಿತ್ತು.

ಬೆಳಗಾವಿ: ಮನೆ, ಕಾರು ಕಳವು ಪ್ರಕರಣ: ಮತ್ತಿಬ್ಬರ ಬಂಧನ, 3 ಲಕ್ಷ ಮೌಲ್ಯದ ಸ್ವತ್ತು ವಶ

ಮೃತ ಅಬ್ದುಲ್‌ ರಿಫಾಯಿ, ಕಟ್ಟಡ ಗುತ್ತಿಗೆದಾರ ಸಯ್ಯದ್‌ ಎಂಬವರ ಪುತ್ರನಾಗಿದ್ದರು. ಮೃತರು ತಾಯಿ, ಇಬ್ಬರು ಸಹೋದರರು ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯರಾದ ರೇವತಿ ಹಾಗೂ ಫಾತಿಮಾ ಚೇತರಿಸಿಕೊಳ್ಳುತ್ತಿದ್ದಾರೆ.

click me!