Sexual Harassment : ಅಕ್ರಮ ಸಂಬಂಧದ ಗುಟ್ಟು ಇಟ್ಟುಕೊಂಡು ಬ್ಲಾಕ್ ಮೇಲ್, ಗ್ಯಾಂಗ್ ರೇಪ್

By Suvarna News  |  First Published Dec 19, 2021, 6:23 PM IST

* ವಿವಾಹಿತ ಮಹಿಳೆಗೆ ಪರಪುರುಷನೊಂದಿಗೆ ಅಕ್ರಮ ಸಂಬಂಧ
* ಅಕ್ರಮ ಸಂಬಂಧ ವಿಚಾರ ಇಟ್ಟುಕೊಂಡು ಮಹಿಳೆ ಮೇಲೆ ಎರಗಿದ ಕಾಮಾಂಧರು
* ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಮತ್ತು ಪ್ರಿಯಕರ


ಹೈದರಾಬಾದ್(ಡಿ. 19)  ತೆಲಂಗಾಣದ ಹೈದರಾಬಾದ್‌ನ (Hyderabad) ಎಸ್‌ಆರ್ ನಗರದಲ್ಲಿ ಡಿಸೆಂಬರ್ 13 ರಂದು ಇಬ್ಬರು ವ್ಯಕ್ತಿಗಳು ವಿವಾಹಿತ(Woman) ಮಹಿಳೆಯ ಮೇಲೆ ಸಾಮೂಹಿಕ (Rape) ಅತ್ಯಾಚಾರವೆಸಗಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆ ಬೇರೆ ಒಬ್ಬನ ಜತೆ ಅಕ್ರಮ ಸಂಬಂಧ ಹೊಂದಿದ್ದಳು.. ನಿನ್ನ ಅಕ್ರಮ ಸಂಬಂಧ ವಿಚಾರವನ್ನು ಕುಟುಂಬಕ್ಕೆ ತಿಳಿಸುತ್ತೇವೆ ಎಂದು ಬೆದರಿಕೆ ಹಾಕಿ ಕೃತ್ಯ ಎಸಗಿದ್ದಾರೆ.

ಈ ಘಟನೆ ಒಂದು ದಿನದ ನಂತರ ಮಹಿಳೆ ಮತ್ತು ಆಕೆಯ ಪ್ರಿಯಕರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.  ಶುಕ್ರವಾರ ಮಹಿಳೆ ದೂರು ದಾಖಲಿಸಿದ ನಂತರ ಇಡೀ ಪ್ರಕರಣದ ಅಂಶಗಳು ಬಹಿರಂಗವಾಗಿದೆ.

Tap to resize

Latest Videos

ಮಹಿಳೆ ಬಿಲ್ಡಿಂಗ್ ನಿರ್ಮಾಣ ಕಾರ್ಯದಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಕೆಲಸ ಮಾಡುವ ಇನ್ನೊಬ್ಬನೊಂದಿಗೆ ಅಕ್ರಮ ಸಂಬಂಧ (Illicit Relationship) ಹೊಂದಿದ್ದಳು. ಡಿ. 13  ರಂದು ತನ್ನ ಗೆಳೆಯನ ಭೇಟಿಗೆ ಮನೆಯಿಂದ ಹೊರಟಿದ್ದಳು. ಈ ವೇಳೆ ಆಕೆಯನ್ನು ಅಡ್ಡಗಟ್ಟಿದ ಇಬ್ಬರು ಬೆದರಿಕೆ ಹಾಕಿದ್ದಾರೆ. ನಿನ್ನ ಅಕ್ರಮ ಸಂಬಂಧ ಬಹಿರಂಗ ಮಾಡುತ್ತೇವೆ ಎಂದು ಹೆದರಿಸಿ ತಮಗೆ ಸಹಕರಿಬೇಕು ಎಂದಿದ್ದಾರೆ. ಅಡ್ಡಿಪಡಿಸಿದಕ್ಕೆ ಆಕೆಯ ಮೇಲೆ ಎರಗಿದ್ದಾರೆ.

ಇದಾದ ಮೇಲೆ ಡಿಸೆಂಬರ್ 14 ರಂದು, ಮಹಿಳೆ ಮತ್ತು ಆಕೆಯ ಪ್ರೇಮಿ ವಿಕಾರಾಬಾದ್ ಜಿಲ್ಲೆಗೆ ತೆರಳಿದ್ದಾರೆ. ಅಲ್ಲುಗೆ ಹೋಗಿ ಇಬ್ಬರು ವಿಷ ಸೇವಿಸಿದ್ದಾರೆ.  ಪ್ರಜ್ಞೆ ತಪ್ಪುವುದಕ್ಕೆ ಮುನ್ನ ಮಹಿಳೆಯ ಗೆಳೆಯ ತಾವು ವಿಷ ತೆಗೆದುಕೊಂಡ ವಿಚಾವನ್ನು ಕುಟುಂಬಕ್ಕೆ ಕರೆ ಮಾಡಿ ತಿಳಿಸಿದ್ದಾನೆ. ಆದರೆ ಅದೃಷ್ಟವಷಾತ್ ಇಬ್ಬರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರ ವಿಚಾರಣೆ ವೇಳೆ ಮಹಿಳೆ ಕರಾಳ ಘಟನೆಯ ಬಗ್ಗೆ ಹೇಳಿದ್ದು ದೂರು ನೀಡಿದ್ದಾಳೆ. 

Crime News: ಪ್ರತ್ಯೇಕ ಪ್ರಕರಣ, ಮಹಿಳೆಯನ್ನು ಮಂಚಕ್ಕೆ ಕರೆದ CPI, ಮದುವೆಯಾಗುವುದಾಗಿ ವಂಚಿಸಿದ PSI

ಆರು ವರ್ಷದ  ಬಾಲಕಿ ಮೇಲೆ ಎರಗಿದ್ದರು:  ಬಿಜ್ನೋರ್ ಜಿಲ್ಲೆಯಲ್ಲಿ ಆರು ವರ್ಷದ ಬಾಲಕಿಯ ಮೇಲೆ 26 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ್ದ ಪ್ರಕರಣ ವರದಿಯಾಗಿತ್ತು.ಅಪ್ರಾಪ್ತ ಬಾಲಕಿ ಶಾಲೆಗೆ ಹೋಗುತ್ತಿದ್ದಾಗ ಆರೋಪಿ ಶಹಬಾಜ್  ಕೃತ್ಯ ಎಸಗಿದ್ದ. ಆಕೆಯನ್ನು ಶಿಥಿಲಗೊಂಡ ಕಟ್ಟಡಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪ ಕೇಳಿ ಬಂದಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿದ್ದರು . 

ಪುಣೆ ಪ್ರಕರಣ:  ಮಹಾರಾಷ್ಟ್ರದ ಪುಣೆಯ ಹಡಪ್ಸರ್‌ನ 25 ವರ್ಷದ  ಮಾಡೆಲ್ (Model) ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ. ತನ್ನನ್ನು ಲೈಂಗಿಕವಾಗಿ (Sexual Harassment)ಬಳಸಿಕೊಂಡಿದ್ದು ಅಲ್ಲದೇ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.  ರೂಪದರ್ಶಿಯ ದೂರು ಆಧರಿಸಿ ವಾರ್ಜೆ ಪೊಲೀಸರು ಚಲನಚಿತ್ರ (Bollywood)ನಿರ್ಮಾಪಕ ಸೇರಿ ಮೂವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಳೆಯ ಪ್ರಕರಣ: ಜುಲೈ 2017  ಮತ್ತು  ಈ ವರ್ಷ ಜುಲೈ ಸೇರಿ ಒಟ್ಟು ಎರಡು ಸಾರಿ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನುವುದು ರೂಪದರ್ಶಿ ಆರೋಪ.  ರೂಪದರ್ಶಿಯ ಫೊಟೋ ಶೂಟ್ (Photo shoot)ಮಾಡಿದ ಆರೋಪಿಗಳು ಕೆಲವು ಅಶ್ಲೀಲ ಭಂಗಿಯ ಪೋಟೋಗಳನ್ನು ತೆಗೆದುಕೊಂಡಿದ್ದು ಅದನ್ನು ವೈರಲ್  ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.  ಹತ್ತು ಲಕ್ಷ ರೂ. ಹಣ ನೀಡುವಂತೆಯೂ ಬೇಡಿಕೆ  ಇಟ್ಟಿದ್ದಾರೆ. ಭಯಗೊಂಡ ಮಾಡೆಲ್  6.41 ರೂಪಾಯಿ  ಹಣವನ್ನು ನೀಡಿದ್ದರು.

ಮಾಡೆಲ್ ಆಗಿ ಹೆಸರು ಸಂಪಾದನೆ ಮಾಡಿಕೊಂಡಿರುವ  ಯುವತಿ ಬಾಲಿವುಡ್ ನಲ್ಲಿ ನೆಲೆ ಕಮಡುಕೊಳ್ಳುವ ಉತ್ಸಾಹದಲ್ಲಿದ್ದರು. ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದ್ದ ವ್ಯಕ್ತಿಯೊಬ್ಬನ ಪರಿಚಯವಾಗಿತ್ತು. ಸಿನಿಮಾದಲ್ಲಿ ಅವಕಾಶ ಕೊಡಿಸುತ್ತೇನೆ ಎಂದು ನಂಬಿಸಿ ಮಾಡೆಲ್ ನ್ನು ತನಗೆ  ಬೇಕಾದಂತೆ ಬಳಸಿಕೊಂಡಿದ್ದ ಎನ್ನುವ ಆರೋಪವೂ ಕೇಳಿಬಂದಿದೆ.

click me!