Sexual Harassment : ಸೆಕೆಂಡ್ ಪಿಯು ಬಾಲಕಿ ಗರ್ಭಿಣಿ,  ಸ್ನೇಹ ಸಂಪಾದಿಸಿ ಮಿನಿ ಬಸ್ ಚಾಲಕ ಮಾಡಿದ  ಹೀನ ಕೆಲಸ!

Published : Dec 19, 2021, 05:11 PM IST
Sexual Harassment : ಸೆಕೆಂಡ್ ಪಿಯು ಬಾಲಕಿ ಗರ್ಭಿಣಿ,  ಸ್ನೇಹ ಸಂಪಾದಿಸಿ ಮಿನಿ ಬಸ್ ಚಾಲಕ ಮಾಡಿದ  ಹೀನ ಕೆಲಸ!

ಸಾರಾಂಶ

* ಬಾಲಕಿಯ ಮೇಲೆ ಬಸ್ ಚಾಲಕನಿಂದ ಅತ್ಯಾಚಾರ * ಪ್ರಯಾಣಿಸುವಾಗ ಸ್ನೇಹ ಬೆಳೆಸಿಕೊಂಡು ಮನೆಗೆ ಬಂದು ಹೋಗುತ್ತಿದ್ದ * ಬಾಲಕಿಯನ್ನು ಮದುವೆಯಾಗುವ ಭರವಸೆ ನೀಡಿದ್ದ * ನಲವತ್ತು ವರ್ಷದ ಕಿರಾತಕ ಚಾಲಕ ಮಾಡಿದ ಕೆಲಸ

ಮಧುರೈ(ಡಿ. 19)   ಬಾಲಕಿ ಮೇಲೆ ಅತ್ಯಾಚಾರದ (Rape) ಪ್ರಕರಣಕ್ಕೆ ಸಂಬಧಿಸಿ ಮಿನಿ ಬಸ್ (Bus Driver)ಚಾಲಕನೊಬ್ಬನನ್ನು ಬಂಧಿಸಲಾಗಿದೆ. 17 ವರ್ಷದ  12 ನೇ ತರಗತಿ ವಿದ್ಯಾರ್ಥಿನಿ ಮೂರು ದಿನದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು.   ಇದೇ ಕಾರಣಕ್ಕೆ ಶಾಲೆಗೆ (School) ಹೋಗಲು ಹಿಂದೇಟು ಹಾಕಿದ್ದಾಳೆ. ಮಗಳ ಸ್ಥಿತಿಯನ್ನು  ನೋಡಿ  ತಾಯಿ (Mother) ಪ್ರಶ್ನೆ ಮಾಡಿದ್ದಾಳೆ.  

ಪ್ರಗೆನ್ಸಿ ಟೆಸ್ಟ್ ಮಾಡಿಸಿದಾಗ ಗರ್ಭಿಣಿ ಎನ್ನುವುದು ಗೊತ್ತಾಗಿದೆ ಎಂದಿದ್ದಾಳೆ  ಈ ವೇಳೆ ತಾಯಿ ಶಾಕ್ ಗೆ ಒಳಗಾಗಿದ್ದಾಳೆ.  40 ವರ್ಷದ ಮಿನಿ ಬಸ್ ಚಾಲಕನೊಬ್ಬ ತನ್ನ ಮೇಲೆ ದೌರ್ಜನ್ಯ ಎಸಗಿರುವ ವಿಚಾರವನ್ನು ತಿಳಿಸಿದ್ದಾಳೆ.

ಬಾಲಕಿ ವಾಸವಿದ್ದ ಪ್ರದೇಶದ 40 ವರ್ಷದ ಆರೋಪಿ ಅಪ್ರಾಪ್ತ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ್ದ. ಹುಡುಗಿ ತನ್ನ ಬಸ್ಸಿನಲ್ಲಿ ಪ್ರಯಾಣಿಸಿದಾಗಲೆಲ್ಲಾ ಅವನು ಅವಳೊಂದಿಗೆ ಮಾತನಾಡುತ್ತಿದ್ದ. ಸೆಪ್ಟೆಂಬರ್ 4ರಂದು ಆಕೆಯ ಮನೆಗೆ ತೆರಳಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ತನ್ನ ಹೆಂಡತಿಯಿಂದ ದೂರವಾಗಿರುವುದರಿಂದ ಅವಳನ್ನು ಮದುವೆಯಾಗಲು ಬಯಸುವುದಾಗಿಯೂ ಹೇಳಿದ್ದ.  ಮನೆಯಲ್ಲಿ ಬಾಲಕಿ ಒಬ್ಬಳೆ ಇದ್ದಾಗ ಹಲವು ಸಾರಿ ಬಂದು ಹೋಗಿದ್ದ.

ಸೇನಾ ವಾಹನವನ್ನೇ ಒದ್ದಳು... ಮದ್ಯದ ನಶೆಯಲ್ಲಿ ಮಾನಿನಿ ಬೀದಿ ರಂಪ!

ಬಾಲಕಿ ಗರ್ಭಿಣಿಯಾಗಿರುವ ವಿಷಯ ತಿಳಿದ ನಂತರ ಬಾಲಕಿಯ ತಾಯಿ ಪೊಲೀಸ್ ದೂರು ದಾಖಲಿಸಿದ್ದಾರೆ. ಆಕೆಯ ದೂರಿನ ಆಧಾರದ ಮೇಲೆ ಪೊಲೀಸರು ಸೂಕ್ತ ನಿಬಂಧನೆಗಳ ಅಡಿಯಲ್ಲಿ ಆರೋಪಿಯನ್ನು ದಾಖಲಿಸಿ ಶುಕ್ರವಾರ  ಆರೋಪಿಯನ್ನು ಬಂಧಿಸಿದ್ದಾರೆ.  ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.   ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ ಮುಂದಿನ ಪರಿಹಾರದ ಬಗ್ಗೆ ಯೋಚನೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರು ವರ್ಷದ  ಬಾಲಕಿ ಮೇಲೆ ಎರಗಿದ್ದರು:  ಬಿಜ್ನೋರ್ ಜಿಲ್ಲೆಯಲ್ಲಿ ಆರು ವರ್ಷದ ಬಾಲಕಿಯ ಮೇಲೆ 26 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ್ದ ಪ್ರಕರಣ ವರದಿಯಾಗಿತ್ತು.ಅಪ್ರಾಪ್ತ ಬಾಲಕಿ ಶಾಲೆಗೆ ಹೋಗುತ್ತಿದ್ದಾಗ ಆರೋಪಿ ಶಹಬಾಜ್  ಕೃತ್ಯ ಎಸಗಿದ್ದ. ಆಕೆಯನ್ನು ಶಿಥಿಲಗೊಂಡ ಕಟ್ಟಡಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪ ಕೇಳಿ ಬಂದಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿದ್ದರು . 

ಪುಣೆ ಪ್ರಕರಣ:  ಮಹಾರಾಷ್ಟ್ರದ ಪುಣೆಯ ಹಡಪ್ಸರ್‌ನ 25 ವರ್ಷದ  ಮಾಡೆಲ್ (Model) ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ. ತನ್ನನ್ನು ಲೈಂಗಿಕವಾಗಿ (Sexual Harassment)ಬಳಸಿಕೊಂಡಿದ್ದು ಅಲ್ಲದೇ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.  ರೂಪದರ್ಶಿಯ ದೂರು ಆಧರಿಸಿ ವಾರ್ಜೆ ಪೊಲೀಸರು ಚಲನಚಿತ್ರ (Bollywood)ನಿರ್ಮಾಪಕ ಸೇರಿ ಮೂವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಳೆಯ ಪ್ರಕರಣ: ಜುಲೈ 2017  ಮತ್ತು  ಈ ವರ್ಷ ಜುಲೈ ಸೇರಿ ಒಟ್ಟು ಎರಡು ಸಾರಿ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನುವುದು ರೂಪದರ್ಶಿ ಆರೋಪ.  ರೂಪದರ್ಶಿಯ ಫೊಟೋ ಶೂಟ್ (Photo shoot)ಮಾಡಿದ ಆರೋಪಿಗಳು ಕೆಲವು ಅಶ್ಲೀಲ ಭಂಗಿಯ ಪೋಟೋಗಳನ್ನು ತೆಗೆದುಕೊಂಡಿದ್ದು ಅದನ್ನು ವೈರಲ್  ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.  ಹತ್ತು ಲಕ್ಷ ರೂ. ಹಣ ನೀಡುವಂತೆಯೂ ಬೇಡಿಕೆ  ಇಟ್ಟಿದ್ದಾರೆ. ಭಯಗೊಂಡ ಮಾಡೆಲ್  6.41 ರೂಪಾಯಿ  ಹಣವನ್ನು ನೀಡಿದ್ದರು.

ಮಾಡೆಲ್ ಆಗಿ ಹೆಸರು ಸಂಪಾದನೆ ಮಾಡಿಕೊಂಡಿರುವ  ಯುವತಿ ಬಾಲಿವುಡ್ ನಲ್ಲಿ ನೆಲೆ ಕಮಡುಕೊಳ್ಳುವ ಉತ್ಸಾಹದಲ್ಲಿದ್ದರು. ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದ್ದ ವ್ಯಕ್ತಿಯೊಬ್ಬನ ಪರಿಚಯವಾಗಿತ್ತು.  ಸಿನಿಮಾದಲ್ಲಿ ಅವಕಾಶ ಕೊಡಿಸುತ್ತೇನೆ ಎಂದು ನಂಬಿಸಿ ಮಾಡೆಲ್ ನ್ನು ತನಗೆ  ಬೇಕಾದಂತೆ ಬಳಸಿಕೊಂಡಿದ್ದ ಎನ್ನುವ ಆರೋಪವೂ ಕೇಳಿಬಂದಿದೆ.


ಎರಡು ಕೋಟಿ  ರೂ. ವಂಚನೆ: ಸಿನಿಮಾದಲ್ಲಿ  ಅವಕಾಶ ಹುಡುಕುತ್ತಿದ್ದವರಿಗೆ ಪಾತ್ರದ ಭರವಸೆ ನೀಡಿ  ಸುಮಾರು  80 ಜನರಿಗೆ 2 ಕೋಟಿ ರೂ.  ವಂಚಿಸಿದ್ದ ಪ್ರಕರಣ ಕಳೆದ ಜೂನ್ ನಲ್ಲಿ ಬೆಳಕಿಗೆ ಬಂದಿತ್ತು.  ಅಶ್ವಿನ್ ದೌಡಾ (47)  ಎಂಬಾತ ಯುವ ಕಲಾವಿದರಿಗೆ ವಂಚನೆ ಮಾಡಿದ್ದ.   ಬೋರಿವ್ಲಿ ನಿವಾಸಿ ಮಹೇಶ್ ಗುಪ್ತಾ (47)  ದೂರು ನೀಡಿದಾಗ ವಂಚನೆಯ ಕರಾಳ ಮುಖ ಬಹಿರಂಗವಾಗಿತ್ತು.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ