ಇಬ್ಬರು ಅಭ್ಯರ್ಥಿಗಳು ಹೃದಯಾಘಾತದಿಂದ ಸಾವು| ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಮತ್ತು ಬೆಂಗಳೂರಿನಲ್ಲಿ ನಡೆದ ಘಟನೆ| ಡಿ.ಬಸಪ್ಪ ಮತ್ತು ಅಧಿಶೇಷಪ್ಪ ಮೃತಪಟ್ಟ ಅಭ್ಯರ್ಥಿಗಳು|
ಹೊನ್ನಾಳಿ/ಪಾವಗಡ(ಡಿ.24): ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಮತದಾನ ಮಾಡಿದ ಇಬ್ಬರು ಅಭ್ಯರ್ಥಿಗಳು ಹೃದಯಾಘಾತದಿಂದ ನಿಧನರಾಗಿರುವ ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಮತ್ತು ಬೆಂಗಳೂರಿನಲ್ಲಿ ನಡೆದಿದೆ.
ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಪಂ ವ್ಯಾಪ್ತಿಯ ಸುಂಕದಕಟ್ಟೆ ಸಾಮಾನ್ಯ ಮೀಸಲಾತಿಯಲ್ಲಿ ಸ್ಪರ್ಧಿಸಿದ್ದ ಡಿ.ಬಸಪ್ಪ (78) ಮತ್ತು ಪಾವಗಡ ತಾಲೂಕಿನ ಪೊನ್ನಸಮುದ್ರ ಗ್ರಾಪಂಗೆ ಸ್ಪರ್ಧಿಸಿದ್ದ ಅಧಿಶೇಷಪ್ಪ ನಿಧನರಾಗಿದ್ದಾರೆ.
ದೇವ್ರಾಣೆ ಮಾಡಿ ಹೇಳು ಯಾರಿಗೆ ವೋಟು ಹಾಕಿದಿ..!
ಬಸಪ್ಪ ಮತದಾನ ಮಾಡಿ ಮನೆಗೆ ಹೋಗಿದ್ದಾಗ ರಾತ್ರಿ ವೇಳೆ ಹೃದಯಾಘಾತವಾಗಿದೆ. ಅಧಿಶೇಷಪ್ಪ ಮತದಾನ ಮಾಡಿ ಬೆಂಗಳೂರಿಗೆ ಆಗಮಿಸಿದ್ದರು. ರಾತ್ರಿ ವೇಳೆ ಜೆ.ಪಿ.ನಗರದ ನಿವಾಸದಲ್ಲಿ ಅವರಿಗೆ ಹೃದಯಾಘಾತವಾಗಿದೆ.