ವಿಜಯಪುರ: ರಾಜಧಾನಿ ಲಾಡ್ಜ್‌ನಲ್ಲಿ ಎರಡು ಮೃತದೇಹಗಳು ಪತ್ತೆ: ಸಾವು ನಿಗೂಢ!

Published : Mar 24, 2023, 02:57 PM IST
ವಿಜಯಪುರ: ರಾಜಧಾನಿ ಲಾಡ್ಜ್‌ನಲ್ಲಿ ಎರಡು ಮೃತದೇಹಗಳು ಪತ್ತೆ: ಸಾವು ನಿಗೂಢ!

ಸಾರಾಂಶ

ಯುವಕನೊಬ್ಬ ತನ್ನ ಜೊತೆಗಾರನನ್ನು ಚಾಕುವಿಂದ ಹತ್ಯೆ ಮಾಡಿ ನಂತರ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ನಗರದ ಲಕ್ಷ್ಮಿ ಚಿತ್ರಮಂದಿರ ಎದುರಿನ ರಾಜಧಾನಿ ಲಾಡ್ಜ್ ನಲ್ಲಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.‌

 ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಮಾ 24) : ಯುವಕನೊಬ್ಬ ತನ್ನ ಜೊತೆಗಾರನನ್ನು ಚಾಕುವಿಂದ ಹತ್ಯೆ ಮಾಡಿ ನಂತರ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ನಗರದ ಲಕ್ಷ್ಮಿ ಚಿತ್ರಮಂದಿರ ಎದುರಿನ ರಾಜಧಾನಿ ಲಾಡ್ಜ್ ನಲ್ಲಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.‌

ಬಳ್ಳಾರಿ(Bellary) ಜಿಲ್ಲೆಯ ಹಗರಿಬೊಮ್ಮನಹಳ್ಳಿ(hagaribommanhalli) ತಾಲೂಕಿನ ಕೃಷ್ಣಪುರ ತಂಡಾ(Krishnapur tanda) ನಿವಾಸಿ ಸಿ. ಇಂದ್ರಕುಮಾರ(C Indrakumar) ಕೊಲೆಯಾಗಿದ್ದು ಇತನನ್ನು ಕೊಲೆ ಮಾಡಿದ ವ್ಯಕ್ತಿಯ ಹೆಸರು ತಿಳಿದು ಬಂದಿಲ್ಲ, ಆತ ವಿಷ ಸೇವಿಸಿ ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾನೆ. 

ಬೆಂಗಳೂರು: ಸಿಗರೇಟ್‌ ಸೇದುವ ವಿಚಾರಕ್ಕೆ ಮೂವರು ಸ್ನೇಹಿತರ ನಡುವೆ ಗಲಾಟೆ, ಓರ್ವನ ಕೊಲೆ

ರಾಜಧಾನಿ ಹೊಟೇಲ್ ನಲ್ಲಿ ಎರು ಹೆಣ ಪತ್ತೆ..!

ರಾಜಧಾನಿ ಲಾಡ್ಜ್ ರೂಮ್(Rajadhani lodge) ನಂಬರ 114 ನಲ್ಲಿ ಎರಡು ಶವಗಳು ಹತ್ತಿರ ಹತ್ತಿರವಾಗಿ ಬಿದ್ದಿರುವದು ಪತ್ತೆಯಾಗಿದೆ. ಇಂದ್ರಕುಮಾರ ಎಂಬವನು ಇದೇ ಮಾರ್ಚ್ 22ರಂದು ಲಾಡ್ಜ್ ಆಗಮಿಸಿ ಆಧಾರ ಕಾರ್ಡ್ ತೋರಿಸಿ ರೂಮ್ ನಂ 114 ಪಡೆದುಕೊಂಡಿದ್ದನು. ನಂತರ ಇತನ ರೂಮ್ ಗೆ ಇನ್ನೊಬ್ಬ ವ್ಯಕ್ತಿ ಯಾವಾಗ ಬಂದಿದ್ದಾನೆ ಎನ್ನುವದು ಸ್ವತಃ ಲಾಡ್ಜ್ ಸಿಬ್ಬಂದಿ ಹಾಗೂ ಮಾಲೀಕರಿಗೂ ಗೊತ್ತಾಗಿಲ್ಲ. ಎರಡು ದಿನ್ ರೂಮ್ ಬಾಗಿಲು ಸಹ ತೆರೆದಿರಲಿಲ್ಲ.  

ಹೊಟೇಲ್‌ ರೂಂನಿಂದ ಬಂತು ಕೆಟ್ಟ ವಾಸನೆ..!

ಇಂದು ಬೆಳಗ್ಗೆ 10ಗಂಟೆ ಸುಮಾರಿಗೆ ರೂಮ್ ನಿಂದ ಕೆಟ್ಟ ಕೊಳೆತ ವಾಸನೆ ಬರಲು ಆರಂಭಿಸಿದಾಗ ಲಾಡ್ಜ್ ಸಿಬ್ಬಂದಿ ಮಾಸ್ಟರ್ ಕೀ(Master key) ಬಳಸಿ ರೂಮ್ ತೆಗೆದಾಗ ಕೊಲೆ ನಡೆದಿರುವದು ಬೆಳಕಿಗೆ ಬಂದಿದೆ. 

ಇಂದ್ರಕುಮಾರ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ಆತನ ಮೇಲೆ ಕೊಲೆ  ಮಾಡಿದ ಇನ್ನೊಬ್ಬ ವ್ಯಕ್ತಿಯ ಶವ ಬಿದ್ದಿರುವದು ಪತ್ತೆಯಾಗಿದೆ. 

ಬೈಕ್ ಕೀ ಪತ್ತೆ,‌ ಸವಾರನ ಮೇಲೆಯೇ ಅನುಮಾನ..!

ಇದರ ಜತೆ ರೂಮ್ ನಲ್ಲಿ ಒಂದು ಬೈಕ್ ಕೀ ಪತ್ತೆಯಾಗಿದೆ. ಆ ಬೈಕ್ ವಿಜಯಪುರ ತಾಲೂಕಿನ ಅರಕೇರಿ ನಿವಾಸಿಯೊಬ್ಬರ ಹೆಸರಿನಲ್ಲಿ ರಜಿಸ್ಟರ್ ಹೊಂದಿದೆ. ಆ ವ್ಯಕ್ತಿ ಈ ಇಬ್ಬರ ಸಾವಿಗೆ ಸಂಬಂಧ ಇರಬಹುದಾ? ಅಥವಾ ಆ ಬೈಕ್ ಕಳ್ಳತನ ಮಾಡಿಕೊಂಡು ತರಲಾಗಿದೆಯಾ? ಎನ್ನುವದು ಪತ್ತೆಯಾಗ ಬೇಕಾಗಿದೆ.‌

ಇದು ಜೋಡಿ ಕೊಲೆಯೋ ಅಥವಾ ಜೋಡಿ ಆತ್ಮಹತ್ಯೆಯೋ ಎನ್ನುವದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.  ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು. ಶ್ವಾನಗಳು, ಬೆರಳಚ್ಚು ತಜ್ಞರು ಆಗಮಿಸಿ ಮಾಹಿತಿ ಸಂಗ್ರಹಿಸಿದರು. 

ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದ ಕುಟುಂಬ ಸರ್ವನಾಶ! ಹೆಂಡತಿ- ಮಗುವಿಗೆ ಚಾಕು ಚುಚ್ಚಿದ ಪಾಪಿ ತಂದೆ

ಘಟನಾಸ್ಥಳಕ್ಕೆ ಎಸ್ಪಿ ಆನಂದಕುಮಾರ್ ಭೇಟಿ..!

ಘಟನಾ ಸ್ಥಳಕ್ಕೆ ಖುದ್ದು ಎಸ್ಪಿ ಆನಂದಕುಮಾರ(SP Anand kumar) ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.‌ ಸದ್ಯ ಇವರಿಬ್ಬರ ಸಾವಿನ ನಿಗೂಢತೆ ಭೇದಿಸಲು ತನಿಖೆ ಚುರುಕುಗೊಳಿಸಿದ್ದಾರೆ.

ಸಾವನ್ನಪ್ಪಿರುವ ಇಂದ್ರಕುಮಾರ ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಆಗಮಿಸಿ ಸಾವಿನ ರಹಸ್ಯ ಅವರು ಬಿಚ್ಚಿಟ್ಟ ಮೇಲೆ ಮುಂದಿನ ತನಿಖೆ ನಡೆಯಲಿದೆ. 
ಗಾಂಧಿಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು