ಬಾಯ್‌ಫ್ರೆಂಡನ್ನು ಮರಕ್ಕೆ ಕಟ್ಟಿ ಯುವತಿ ಮೇಲೆ ಇಬ್ಬರು ಕಾಮುಕರಿಂದ ರೇಪ್‌

By Anusha Kb  |  First Published Mar 24, 2023, 1:10 PM IST

ಹುಡುಗಿಯೊಬ್ಬಳ ಬಾಯ್‌ಫ್ರೆಂಡ್‌ನ್ನು ಮರಕ್ಕೆ ಕಟ್ಟಿದ ದುಷ್ಕರ್ಮಿಗಳು ಆತನ ಗೆಳತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪೈಶಾಚಿಕ ಘಟನೆ ಮಹಾರಾಷ್ಟ್ರದ ಪಾಲ್‌ಗಾರ್‌ನಲ್ಲಿ ನಡೆದಿದೆ.


ಮಹಾರಾಷ್ಟ್ರ: ಹುಡುಗಿಯೊಬ್ಬಳ ಬಾಯ್‌ಫ್ರೆಂಡನ್ನು ಮರಕ್ಕೆ ಕಟ್ಟಿದ ದುಷ್ಕರ್ಮಿಗಳು ಆತನ ಗೆಳತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪೈಶಾಚಿಕ ಘಟನೆ ಮಹಾರಾಷ್ಟ್ರದ ಪಾಲ್‌ಗಾರ್‌ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.  ತನ್ನ ಬಾಯ್‌ಫ್ರೆಂಡ್ ಜೊತೆ ಸಂಜೆ ವೇಳೆ ವಾಯುವಿಹಾರಕ್ಕೆ ಹೊರಟಿದ್ದ ವೇಳೆ ಈ ಘಟನೆ ನಡೆದಿದೆ. ಮಾರ್ಚ್‌ 22 ರಂದು ಈ ಘಟನೆ ನಡೆದಿದ್ದು, ಅತ್ಯಾಚಾರವೆಸಗಿದ ಕಾಮುಕರು 22 ಹಾಗೂ 25 ವರ್ಷ ಪ್ರಾಯದ ಯುವಕರು ಎಂದು ತಿಳಿದು ಬಂದಿದೆ. 

ಹುಡುಗಿ ಹಾಗೂ ಆಕೆಯ ಗೆಳೆಯ  ಸಂಜೆಯ ವಿಹಾರಕ್ಕಾಗಿ ಸಮೀಪದ ಬೆಟ್ಟ ಪ್ರದೇಶವೊಂದಕ್ಕೆ ತೆರಳಿದ್ದಾರೆ. ಇವರನ್ನು  ಈ ಇಬ್ಬರು ಕಾಮುಕರು ಗಮನಿಸಿದ್ದಲ್ಲದೇ ಅವರನ್ನು ಹಿಂಬಾಲಿಸಿ ಬೆದರಿಕೆಯೊಡ್ಡಿದ್ದಾರೆ. ಈ ವೇಳೆ ಹುಡುಗಿ ಹಾಗೂ ಆಕೆಯ ಗೆಳೆಯನಿಗೂ ಈ ಇಬ್ಬರು ದುರುಳರ ಮಧ್ಯೆ ಮಾತಿನ ಚಕಮಕಿ ನಡೆದಿದೆ.  ಈ ವೇಳೆ ಕಿತ್ತಾಟ ವಿಕೋಪಕ್ಕೆ ತಿರುಗಿದ್ದು,  ಹುಡುಗಿಯ ಬಾಯ್‌ಫ್ರೆಂಡ್ (boyfriend) ಮೇಲೆ  ದುರುಳರು ಬೀರ್ ಬಾಟಲ್‌ನಿಂದ (Beer Bottle) ಹಲ್ಲೆ ನಡೆಸಿದ್ದಾರೆ.  ನಂತರ ಆತನನ್ನು ಮರವೊಂದಕ್ಕೆ ಕಟ್ಟಿಹಾಕಿದ್ದಾರೆ. ನಂತರ ಇಬ್ಬರು ಸೇರಿಕೊಂಡು ಯುವತಿಯನ್ನು ಒತ್ತಾಯಪೂರ್ವಕವಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಅಲ್ಲಿ ಆಕೆಯ ಮೇಲೆ ಬಲಾತ್ಕಾರ ಮಾಡಿದ್ದಾರೆ. ಅಲ್ಲದೇ ಆಕೆಯ ಬಳಿ ಇದ್ದ ಪರ್ಸ್‌ನ್ನು ಕೂಡ ಸುಟ್ಟು ಹಾಕಿದ್ದಾರೆ. 

Tap to resize

Latest Videos

Delhi horror 5ನೇ ತರಗತಿ ವಿದ್ಯಾರ್ಥಿನಿ ಮೇಲೆ ಶಾಲಾ ಸಿಬ್ಬಂದಿ ಸೇರಿ ನಾಲ್ವರಿಂದ ಸಾಮೂಹಿಕ ಅತ್ಯಾಚಾರ!

ನಂತರ ಅದೃಷ್ಟವಶಾತ್ ಯುವತಿ ಈ ಕಾಮುಕರಿಂದ  ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು,  ಹೇಗೋ ಮನೆ ತಲುಪಿದ್ದಾಳೆ. ಆದರೆ ಅತ್ತ ಆಕೆಯ ಬಾಯ್‌ಫ್ರೆಂಡ್ ಮರಕ್ಕೆ ಕಟ್ಟಿ ಹಾಕಿದ್ದ ಸ್ಥಿತಿಯಲ್ಲೇ ಇದ್ದು, ಆತನನ್ನು ನಂತರ ಪೊಲೀಸರು ರಕ್ಷಿಸಿದ್ದಾರೆ.  ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮಾರ್ಚ್‌ 23 ರಂದು ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗಳನ್ನು ಮಾರ್ಚ್‌ 27ರವರೆಗೆ ಪೊಲೀಸ್‌ ಕಸ್ಟಡಿಗೆ (police custody) ನೀಡಿದೆ. ಈ ಆರೋಪಿಗಳು ವಿರಾರ್‌ನ ಸಾಯಿನಾಥ್ ನಗರ (Sainath Nagar) ಪ್ರದೇಶದ ನಿವಾಸಿಗಳಾಗಿದ್ದು, ಇಬ್ಬರು ಯುವಕರ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿದೆ. 

Kolara: ಅಪಹರಿಸಿ ಆಪ್ರಾಪ್ತ ಬಾಲಕಿಯ ಅತ್ಯಾಚಾರ, 4 ಆರೋಪಿಗಳಿಗೆ ಜೀವಿತಾವಧಿವರೆಗೂ ಜೈಲು

click me!