ಗಂಗಾವತಿ: ಬ್ಯಾಂಕ್ ಹೆಸರಲ್ಲಿ ಕರೆ ಮಾಡಿದವರಿಗೆ ಒಟಿಪಿ ಹೇಳಿದ ಗ್ರಾಹಕ; ಕ್ಷಣಾರ್ಧದಲ್ಲಿ ₹3 ಲಕ್ಷ ರು. ಗೋವಿಂದ!

By Kannadaprabha News  |  First Published Mar 24, 2023, 12:08 PM IST

ಗ್ರಾಹಕರೊಬ್ಬರ ಖಾತೆಯಿಂದ ಅಂತರ್ಜಾಲದ ಮೂಲಕ . 3 ಲಕ್ಷ ಹಣವನ್ನು ತಮ್ಮ ಖಾತೆಗೆ ವರ್ಗಾವಣೆಗೊಳಿಸಿಕೊಂಡು ಅಪರಿಚಿತ ವ್ಯಕ್ತಿಗಳು ಮೋಸ ಮಾಡಿರುವ ಘಟನೆ ನಗರದಲ್ಲಿ ವರದಿಯಾಗಿದೆ.


ಗಂಗಾವತಿ (ಮಾ.24I : ಗ್ರಾಹಕರೊಬ್ಬರ ಖಾತೆಯಿಂದ ಅಂತರ್ಜಾಲದ ಮೂಲಕ . ₹3 ಲಕ್ಷ ಹಣವನ್ನು ತಮ್ಮ ಖಾತೆಗೆ ವರ್ಗಾವಣೆಗೊಳಿಸಿಕೊಂಡು ಅಪರಿಚಿತ ವ್ಯಕ್ತಿಗಳು ಮೋಸ ಮಾಡಿರುವ ಘಟನೆ ನಗರದಲ್ಲಿ ವರದಿಯಾಗಿದೆ.

ಇಲ್ಲಿಯ ಶ್ರೀ ರಾಘವೇಂದ್ರ ಸ್ವಾಮಿ ಮಠ(Shri raghavendra swamy mutt) ಪ್ರದೇಶದಲ್ಲಿರುವ ಶ್ರೀನಿವಾಸಚಾರ ಜೋಷಿ(Shrinivas achar joshi) ಅವರ ಖಾತೆಯಿಂದ ಮೊದಲು 1.99 ಲಕ್ಷ ಹಾಗೂ ಇನ್ನೊಂದು ಬಾರಿ 99 ಸಾವಿರ ರು.ಗಳನ್ನು ಅಪರಿಚಿತ ವ್ಯಕ್ತಿಗಳು ಲಪಟಾಯಿಸಿದ್ದಾರೆ. ಇವರು ಸಿಬಿಎಸ್‌ ಗಂಜ್‌ ಪ್ರದೇಶದಲ್ಲಿರುವ ಎಸ್‌ಬಿಐ(SBI) (ಎಡಿಬಿ) ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದಾರೆ.

Tap to resize

Latest Videos

undefined

Cyber Attack: ಒಟಿಪಿನೂ ಇಲ್ಲ, ಮೆಸೇಜೂ ಇಲ್ಲ..ಬರೀ ಮಿಸ್‌ ಕಾಲ್‌ಗೆ ಮಿಸ್‌ ಆಯ್ತು ಅಕೌಂಟ್‌ನಲ್ಲಿದ್ದ 50 ಲಕ್ಷ!

ಅಪರಿಚಿತ ವ್ಯಕ್ತಿಯೊಬ್ಬರು ಶ್ರೀನಿವಾಸಚಾರ ಜೋಷಿ ಅವರ ಮೊಬೈಲ್‌ಗೆ ಫೆ.16 ರಂದು ಮೆಸೇಜ್‌ ಮಾಡಿ ನಿಮಗೆ ಓಟಿಪಿಯೊಂದನ್ನು ಕಳುಹಿಸಲಾಗಿದ್ದು, ಪ್ರತಿಕ್ರಿಯಿಸಿ ಎಂದು ಸೂಚಿಸಿದ್ದಾರೆ. ಈ ಒಟಿಪಿಯನ್ನು ಕಾಪಿ ಮಾಡಿ ಅವರು ವಾಪಸ್‌ ಕಳುಹಿಸಿದ್ದಾರೆ. ತಕ್ಷಣ ಅವರ ಖಾತೆಯಿಂದ ಹಣ ಕಡಿತವಾಗಿದೆ.

ಈ ಕುರಿತು ಅವರು ತಕ್ಷಣ ಬ್ಯಾಂಕ್‌ ಅಧಿಕಾರಿಗಳಲ್ಲಿ ವಿಚಾರಿಸಿದಾಗ ನಿಮ್ಮ ಹಣ ಕಟ್‌ ಆಗಿಲ್ಲ ಎಂದು ತಿಳಿಸಿದ್ದಾರೆ. ಇದರಿಂದ ಅವರು ಸುಮ್ಮನಿದ್ದಾರೆ. ಈ ಮಧ್ಯೆ ಕಳೆದ ಮಾ.16 ರಂದು ಬ್ಯಾಂಕ್‌ನ ಖಾತೆಯಲ್ಲಿದ್ದ ಹಣ ವಾಪಸ್‌ ಪಡೆಯಲು ಹೋಗಿದ್ದ ಸಂದರ್ಭದಲ್ಲಿ ಅವರ ಖಾತೆಯಿಂದ ಹಣ ಎಗರಿಸಿದ ವಿಷಯ ಅವರಿಗೆ ತಿಳಿದಿದೆ.

ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಅಕ್ರೋಶ:

ಎಸ್‌ಬಿಐ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಮ್ಮ ಖಾತೆಯಲ್ಲಿ ಹಣ ಕಡಿತವಾಗಿದೆ ಎಂದು ಶ್ರೀನಿವಾಸಚಾರ ಜೋಷಿ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಓಡಿ ಹಣ ಯಾವುದೇ ರೀತಿಯಲ್ಲಿ ವ್ಯವಹಾರ ಮಾಡಲು ಸಾಧ್ಯ ಇಲ್ಲ. ಯಾರ ಖಾತೆಯಲ್ಲಿರುತ್ತದೆ ಅವರೇ ಚೆಕ್‌ ಮೂಲಕ ಹಣ ಪಡೆಯುವ ಅಧಿಕಾರ ಇರುತ್ತದೆ. ಆದರೆ ಅಂತರ್ಜಾಲ ಮೂಲಕ ಹಣ ವರ್ಗಾವಣೆಯಾಗಿದೆ ಎಂದು ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಖಾತೆಯಲ್ಲಿದ್ದ ಹಣ ಕಡಿತವಾದ 5ನಿಮಿಷದಲ್ಲಿ ಬ್ಯಾಂಕ್‌ಗೆ ಹೋಗಿ ವಿಚಾರಿಸಿದರೆ ಅಧಿಕಾರಿಗಳು ಗಮನಹರಿಸಲಿಲ್ಲ. ಬ್ಯಾಂಕ್‌ನ ವ್ಯವಸ್ಥಾಪಕ ಮಂಜುನಾಥ ಮತ್ತು ಅಧಿಕಾರಿ ಅನೂಪ್‌ ಅವರ ನಿರ್ಲಕ್ಷ್ಯ ಇದಕ್ಕೆ ಕಾರಣ ಎಂದು ನಗರ ಪೊಲೀಸ್‌ ಠಾಣೆಯಲ್ಲಿ ಬ್ಯಾಂಕ್‌ ಅಧಿಕಾರಿಳ ವಿರುದ್ಧ ದೂರು ದಾಖಲಿಸಿದ್ದಾರೆ..

ಆನ್ ಲೈನ್ ವಂಚಕರು ಇಪಿಎಫ್ ಖಾತೆನೂ ಬಿಡ್ತಿಲ್ಲ; ಒಟಿಪಿ ಶೇರ್ ಮಾಡ್ಬೇಡಿ, ಖಾತೆದಾರರಿಗೆ ಇಪಿಎಫ್ಒ ಮನವಿ

ಶ್ರೀನಿವಾಸಚಾರ ಜೋಷಿ ಅವರ .3 ಲಕ್ಷ ಕಡಿತವಾಗಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಅದು ಇಂಟರ್‌ನೆಟ್‌ ಬ್ಯಾಂಕ್‌ ವ್ಯವಹಾರದಲ್ಲಿ ಆಗಿದೆ.ಇದರ ಬಗ್ಗೆ ಸೈಬರ್‌ ಕ್ರೈಮ್‌ ತಂಡ ವಿಚಾರಿಸಿದಾಗ ತಿಳಿಯುತ್ತದೆ.ಇದರ ಬಗ್ಗೆ ನಾನು ಜವಾಬ್ದಾರರಲ್ಲ

ಮಂಜುನಾಥ, ಬ್ರಾಂಚ್‌ ವ್ಯವಸ್ಥಾಪಕರು ಎಬಿಐ (ಎಡಿಬಿ) ಗಂಗಾವತಿ

ನನ್ನ ಖಾತೆಯಲ್ಲಿ .3 ಲಕ್ಷ ಕಟ್‌ ಆದ 5 ನಿಮಿಷಗಳಲ್ಲಿ ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ಯಾವುದೇ ರೀತಿಯಲ್ಲಿ ಅಧಿಕಾರಿಗಳು ಸ್ಪಂದನೆ ಮಾಡಿಲ್ಲ. ಆ ಸಮಯದಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದರೆ ನನ್ನ ಹಣ ವಾಪಸ್‌ ಆಗುತ್ತಿತ್ತು. ಇದಕ್ಕೆ ಬ್ಯಾಂಕ್‌ನ ಅಧಿಕಾರಿಗಳೆ ಕಾರಣರಾಗಿದ್ದಾರೆ. ಇದರ ಬಗ್ಗೆ ಕೊಪ್ಪಳ ಸೈಬರ್‌ ಕ್ರೈಂ ವಿಭಾಗಕ್ಕೆ ಮತ್ತು ಗಂಗಾವತಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.

ಶ್ರೀನಿವಾಸಚಾರ ಜೋಷಿ, ವಂಚನೆಗೆ ಒಳಗಾದವರು

click me!