My Cute Wife ಚಾಟ್ ನಿಂದ ಬಯಲಾಯ್ತು ರಹಸ್ಯ – ನಾಪತ್ತೆಯಾದ ವಿವಾಹಿತ ಸ್ನೇಹಿತೆಯರು ಮದುವೆಯಾದ್ರಾ !

Published : Sep 08, 2026, 08:54 PM IST
best friends

ಸಾರಾಂಶ

Best Friends love : ಆಪ್ತ ಸ್ನೇಹಿತೆಯರಿಬ್ಬರು ಗಂಡನನ್ನ ಬಿಟ್ಟು ಓಡಿ ಹೋಗಿದ್ದಾರೆ. ನಾಲ್ಕು ಮಕ್ಕಳ ಜೊತೆ ಮನೆ ಬಿಟ್ಟಿರುವ ಪತ್ನಿಯರಿಗಾಗಿ ಗಂಡಂದಿರ ಹುಡುಕಾಟ ಶುರುವಾಗಿದೆ.

ಹರಿಯಾಣದಲ್ಲಿ ಇಬ್ಬರು ವಿವಾಹಿತೆಯರು ಗಂಡಂದಿರನ್ನು ಬಿಟ್ಟು ಓಡಿಹೋದ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರೂ ಮಹಿಳೆಯರು ತಮ್ಮ ಮಕ್ಕಳ ಜೊತೆ ಮನೆ ಬಿಟ್ಟಿದ್ದಾರೆ. ಜೊತೆಗೆ ಸುಮಾರು 9 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ತೆಗೆದುಕೊಂಡು ಹೋಗಿದ್ದಾರೆ.

ಮದುವೆಯಾದ್ರಾ ಆಪ್ತ ಸ್ನೇಹಿತೆಯರು ?

ಬಲ್ಲಭಗಢದ ಲಕ್ಷ್ಮಣ್ ಕಾಲೋನಿಯ ನಿವಾಸಿ 25 ವರ್ಷದ ಮಂಜು, 2020 ರಲ್ಲಿ ಪಲ್ವಾಲ್ನ ಸನ್ನಿಯನ್ನು ಮದುವೆಯಾಗಿದ್ದರು. ಮಂಜುವಿನ ಬಾಲ್ಯದ ಗೆಳತಿ ರೀನಾ ಕೂಡ 2020 ರಲ್ಲಿ ಗುರುಗ್ರಾಮ್ ನ ಮುಮ್ತಾಜ್ಪುರದ ನಿವಾಸಿ ವೇದ್ಪಾಲ್ ಅವರನ್ನು ಮದುವೆಯಾಗಿದ್ದರು.

ಆಗಸ್ಟ್ 21 ರಂದು, ಮಂಜು ತನ್ನ 4 ವರ್ಷದ ಮಗ ಮತ್ತು 2 ವರ್ಷದ ಮಗಳೊಂದಿಗೆ ತನ್ನ ಮನೆಯಿಂದ ನಾಪತ್ತೆಯಾಗಿದ್ದಾಳೆ. ಸುಮಾರು 4 ಲಕ್ಷ ಮೌಲ್ಯದ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದಾಳೆ. ಮಂಜು ಹುಡುಕಾಟದ ಸಮಯದಲ್ಲಿ ರೀನಾಳ ಮನೆಯನ್ನು ಸಂಪರ್ಕಿಸಿದಾಗ, ರೀನಾ ಕೂಡ ನಾಪತ್ತೆಯಾಗಿರೋದು ಗೊತ್ತಾಗಿದೆ. ರೀನಾ ತನ್ನ 4 ವರ್ಷದ ಮಗಳು ಮತ್ತು 1.5 ವರ್ಷದ ಮಗನ ಜೊತೆ ಸುಮಾರು 5 ಲಕ್ಷ ಮೌಲ್ಯದ ಆಭರಣಗಳು ಮತ್ತು ಹಣವನ್ನು ತೆಗೆದುಕೊಂಡು ಹೋಗಿದ್ದಾಳೆ ಎನ್ನಲಾಗಿದೆ.

ಅನುಮಾನಗಳು ಹೆಚ್ಚಾಗುತ್ತಿದ್ದಂತೆ, ಕುಟುಂಬಸ್ಥರು, ಕರೆ ದಾಖಲೆಗಳು ಮತ್ತು ವಾಟ್ಸಾಪ್ ಚಾಟ್ಗಳನ್ನು ಪರಿಶೀಲಿಸಿದ್ದಾರೆ. ಇಬ್ಬರ ನಡುವಿನ ಸಂಭಾಷಣೆಗಳು ಎಲ್ಲರಿಗೂ ಆಘಾತಗೊಳಿಸಿವೆ. ಚಾಟ್ಗಳಲ್ಲಿ, ಇಬ್ಬರು ಸ್ನೇಹಿತೆಯರು ಪರಸ್ಪರ ನನ್ನ ಮುದ್ದಾದ ಹೆಂಡತಿ, ನನ್ನ ಪ್ರೀತಿ ಮತ್ತು ಬಾಬು ಎಂದು ಸಂಬೋಧಿಸಿ ಗಂಟೆಗಟ್ಟಲೆ ಮಾತನಾಡುತ್ತಿದ್ದರು ಎನ್ನಲಾಗಿದೆ.

12 ನೇ ತರಗತಿಯವರೆಗೆ ಇಬ್ಬರೂ ಒಟ್ಟಿಗೆ ವಿದ್ಯಾಭ್ಯಾಸ ಮಾಡಿದ್ದರು. ಆದ್ದರಿಂದ ಆರಂಭದಲ್ಲಿ ಅವರ ಮಾತುಗಳನ್ನು ಮನೆಯವರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಅವರನ್ನು ಸ್ನೇಹಿತೆಯರು ಅಂದ್ಕೊಂಡಿದ್ದರು. ಈಗ ಚಾಟ್ ನೋಡಿ ದಂಗಾಗಿದ್ದಾರೆ. ಇಬ್ಬರೂ ಸ್ನೇಹಿತೆಯರು ಮದುವೆಯಾಗಿದ್ದಾರೆ ಅಂತ ಗಂಡಂದಿರು ಆರೋಪಿಸಿದ್ದಾರೆ. ಅವರು ಮದುವೆಯಾದ್ರೆ ಬೇಸರವಿಲ್ಲ, ನಮಗೆ ಮಕ್ಕಳು ಬೇಕು ಎನ್ನುವುದು ಗಂಡಂದಿರ ಮನವಿ.

ಪಲ್ವಾಲ್ನ ಭವನ್ ಕುಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ಇಬ್ಬರೂ ಮಹಿಳೆಯರ ಪತ್ತೆ ಕಾರ್ಯ ಶುರು ಮಾಡಿದ್ದಾರೆ. ಅವರಿಬ್ಬರೂ ಮದುವೆ ಆಗಿದ್ದಾರಾ ಎನ್ನುವ ಬಗ್ಗೆ ಯಾವುದೇ ಸ್ಪಷ್ಟನೆ ಇನ್ನೂ ಸಿಕ್ಕಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Ganesh Idol: ರಸ್ತೆಬದಿ ಮಾರಾಟಕ್ಕಿಟ ಗಣಪತಿ ಮೂರ್ತಿ ಮಂಗಮಾಯ! ಬೆಳಗಿನ ಜಾವ ನಾಲ್ಕಕ್ಕೆ ನಡೆದಿದ್ದೇನು?
ಕಳ್ಳತನ ಮಾಡಿ ಐವರು ಗರ್ಲ್​ಫ್ರೆಂಡ್ಸ್​ ಮ್ಯಾನೇಜ್​ ಮಾಡ್ತಿದ್ದ ಕಿಲಾಡಿ ತಾತ! 63ರ ವೃದ್ಧನ ಸ್ಟೋರಿ ಕೇಳಿ