ಬೆಂಗಳೂರಿನಲ್ಲಿ ನಡು ರಸ್ತೆಯಲ್ಲೇ ಮಹಿಳೆಯರಿಬ್ಬರ ಮಧ್ಯೆ ಗಲಾಟೆ ನಡೆದಿದೆ. ಯುವತಿಯ ಪೋಟೋಗಳನ್ನ ವೆಬ್ ಸೈಟ್ ಗೆ ಅಪ್ಲೋಡ್ ಮಾಡೋದಾಗಿ ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಈ ಗಲಾಟೆ ಜೋರಾಗಿಯೇ ನಡೆದಿದೆ.
ಬೆಂಗಳೂರು (ಮಾ.27): ಬೆಂಗಳೂರಿನಲ್ಲಿ ನಡು ರಸ್ತೆಯಲ್ಲೇ ಮಹಿಳೆಯರಿಬ್ಬರ ಮಧ್ಯೆ ಗಲಾಟೆ ನಡೆದಿದೆ. ಯುವತಿಯ ಪೋಟೋಗಳನ್ನ ವೆಬ್ ಸೈಟ್ ಗೆ ಅಪ್ಲೋಡ್ ಮಾಡೋದಾಗಿ ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಈ ಗಲಾಟೆ ಜೋರಾಗಿಯೇ ನಡೆದಿದೆ.ಸುನಂದಾ ಮತ್ತು ರೇಷ್ಮಾ ಎಂಬಿಬ್ಬರ ನಡುವೆ ಈ ಗಲಾಟೆ ನಡೆದಿದೆ. ರೇಷ್ಮಾ ಮಗಳ ಪೋಟೋಗಳನ್ನ ಸುನಂದಾ ಎಂಬಾಕೆ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾಳೆ. ಬಳಿಕ ಅದನ್ನ ಆಶ್ಲೀಲ ವೆಬ್ ಸೈಟ್ ಗೆ ಹಾಕೋದಾಗಿ ಬೆದರಿಕೆಯೊಡ್ಡಿದ್ದಾಳೆ. ಅಷ್ಟೇ ಅಲ್ಲದೇ ರೌಡಿಗಳನ್ನ ಕಳುಹಿಸಿ ರೇಷ್ಮಾ ಮಗಳನ್ನ ಹತ್ಯೆ ಮಾಡೋದಾಗಿ ಬೆದರಿಕೆ ಹಾಕಿದ್ದಾಳೆ. ಪ್ರಶ್ನೆ ಮಾಡಲು ಹೋದ ವೇಳೆ ಅಶ್ಲೀಲ ಪದಗಳಿಂದ ರೇಷ್ಮಾಳನ್ನು ನಿಂದಿಸಿದ್ದಾಳೆ. ಬಳಿಕ ಸಾರ್ವಜನಿಕವಾಗಿ ರೇಷ್ಮಾ ಮೇಲೆ ಹಲ್ಲೆ ಸುನಂದಾ
ನಡೆಸಿದ್ದು, ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನಾವಳಿಯ ದೃಶ್ಯಾವಳಿಗಳ ಸಮೇತ ರೇಷ್ಮಾ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Yadgir: ಬಟ್ಟೆ ಅಂಗಡಿಯಲ್ಲಿ ದಂಪತಿ ಸಜೀವ ದಹನ, ಮಕ್ಕಳು ಸೇರಿ ನಾಲ್ವರು ಪಾರು
ವೇಶ್ಯಾವಾಟಿಕೆಗೆ ಮಹಿಳೆಯರ ಕಿತ್ತಾಟ!
ಬೆಳಗಾವಿ: ಮದ್ಯ ಸೇವಿಸಿದ ಅಮಲಿನಲ್ಲಿದ್ದ ಮಹಿಳೆಯರು ಪರಸ್ಪರ ಹೊಡೆದಾಡಿ, ನಿಂದಿಸಿ, ಕಿತ್ತಾಟ ನಡೆಸಿದ ಘಟನೆ ಬೆಳಗಾವಿಯ ಖಡೇಬಜಾರ್‌ನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಮಹಿಳೆಯರ ಕಿತ್ತಾಟದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಕಳೆದ ಮಂಗಳವಾರ ರಾತ್ರಿ ನಡೆದಿದೆ.
ಜನ್ಮ ನೀಡಿದ ಕೆಲವೇ ನಿಮಿಷಗಳಲ್ಲಿ ನವಜಾತ ಶಿಶುವನ್ನು 4.5 ಲಕ್ಷ ರೂ.ಗೆ
ವೇಶ್ಯಾವಾಟಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮದ್ಯದ ಮತ್ತಿನಲ್ಲಿದ್ದ ಮಹಿಳೆಯರು ನಡುರಸ್ತೆಯಲ್ಲೇ ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ಪರಸ್ಪರರು ನಿಂದಿಸಿಕೊಂಡಿದ್ದಾರೆ. ನನ್ನ ಏರಿಯಾದಲ್ಲಿ ನೀನೇಕೆ ಬಂದಿದ್ದೀಯಾ? ಎಂದು ಮಹಿಳೆಯೊಬ್ಬರೊಂದಿಗೆ ಜಗಳ ತೆಗೆಯಲಾಗಿದೆ. ಇದರಿಂದ ಖಡೇಬಜಾರ್ ಪ್ರದೇಶ ವೇಶ್ಯಾವಾಟಿಕೆ ಅಡ್ಡೆಯಾಗುತ್ತಿದೆಯೇ ಎಂಬ ಅನುಮಾನಗಳು ಮೂಡುತ್ತಿವೆ. ಮಹಿಳೆಯರ ಗಲಾಟೆ ನಿಯಂತ್ರಿಸುವಲ್ಲಿ ಪೊಲೀಸರು ಸುಸ್ತಾದರು. ಪೊಲೀಸರು ಹರಸಾಹಸ ಮಾಡಿ ಮಹಿಳೆಯರ ಜಗಳವನ್ನು ನಿಯಂತ್ರಿಸಿದರು.