Chitradurga: ದೇವಸಮುದ್ರದಲ್ಲಿ ಪೊಲೀಸರ ದಾಳಿ: 81 ನಾಡಬಾಂಬ್ ವಶ

By Govindaraj S  |  First Published Jul 19, 2023, 8:53 AM IST

ಕಾಡುಪ್ರಾಣಿ ಬೇಟೆಗೆ ಸಂಗ್ರಹಿಸಿಟ್ಟಿದ್ದ ನಾಡಬಾಂಬ್ ಸಾಗಣೆ ಜಾಲವನ್ನು ಪೊಲೀರು ಬೇಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ದೇವಸಮುದ್ರ ಗ್ರಾಮದ ಮನೆಯೊಂದರ ಮೇಲೆ ಪೊಲೀಸರು ದಾಳಿ ಮಾಡಿದ್ದು, 81 ನಾಡಬಾಂಬ್ ವಶಡಿಸಿಕೊಂಡಿದ್ದಾರೆ. 


ಚಿತ್ರದುರ್ಗ (ಜು.19): ಕಾಡುಪ್ರಾಣಿ ಬೇಟೆಗೆ ಸಂಗ್ರಹಿಸಿಟ್ಟಿದ್ದ ನಾಡಬಾಂಬ್ ಸಾಗಣೆ ಜಾಲವನ್ನು ಪೊಲೀರು ಬೇಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ದೇವಸಮುದ್ರ ಗ್ರಾಮದ ಮನೆಯೊಂದರ ಮೇಲೆ ಪೊಲೀಸರು ದಾಳಿ ಮಾಡಿದ್ದು, 81 ನಾಡಬಾಂಬ್ ವಶಡಿಸಿಕೊಂಡಿದ್ದಾರೆ. ದೇವಸಮುದ್ರದ ಸುಮನ್ ಎಂಬುವರ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದು, ಈ ವೇಳೆ ಹಂದಿ ಬೇಟೆಗೆ ಸಂಗ್ರಹಿಸಿಟ್ಟಿದ್ದ ನಾಡಬಾಂಬ್ ಪತ್ತೆಯಾಗಿವೆ. ನಾಡಬಾಂಬ್ ಸಂಗ್ರಹಿಸಿಟ್ಟಿದ್ದ ಆರೋಪಿ ಸುಮನ್, ಆಂಧ್ರ ಮೂಲದ ಗಂಗಣ್ಣ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಸಿಕ್ಕಿರುವ ನಾಡಬಾಂಬ್​ಗಳ್ನು ಬಾಂಬ್ ಸ್ಕ್ವಾಡ್​​​​ ದಳವು ಚಿತ್ರದುರ್ಗ ತಾಲೂಕಿನ ಸಿಬಾರ ಗ್ರಾಮದ ಬಳಿ ನಿಷ್ಕ್ರಿಯಗೊಳಿಸಿದೆ. ಮೊಳಕಾಲ್ಮೂರು ಸಿಪಿಐ ಸತೀಶ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಈ ಸಂಬಂಧ ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೋಳಿಗೆ ಉಂಡು ಪೀಡೆಯ ಊರಾಚೆ ತಳ್ಳಿದ ದುರ್ಗದ ಮಂದಿ: ಐತಿಹಾಸಿಕ ಚಿತ್ರದುರ್ಗದ ಹಳೇ ಪ್ರದೇಶದಲ್ಲಿ ಮಂಗಳವಾರ ಹೋಳಿಗೆ ಅಮ್ಮನ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಕೇವಲ ಹಳ್ಳಿಗಳಲ್ಲಿ ಮಾತ್ರ ಕಂಡು ಬರುತ್ತಿದ್ದ ಹೋಳಿಗೆ ಅಮ್ಮ ಹಬ್ಬ ನಗರೀಕರಣದ ಪ್ರಭಾವದಿಂದಾಗಿ ಪಟ್ಟಣ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದಿಲ್ಲ. ಆದರೆ ಕರುವಿನಕಟ್ಟೆಪ್ರದೇಶ (ಹಳೇ ಚಿತ್ರದುರ್ಗ)ದಲ್ಲಿ ಮಾತ್ರ ಈ ಹಬ್ಬ ಎಂದಿನಂತೆ ಆಚರಣೆಗೆ ಒಳಪಡುತ್ತಿದೆ.

Latest Videos

undefined

ಶಾಲಾ ವಿದ್ಯಾರ್ಥಿನಿಯರಿಂದಲೇ ತರಗತಿ ನೆಲ ಒರೆಸೋ ಕೆಲಸ ಮಾಡಿಸಿದ ಶಿಕ್ಷಕಿ!

ಹಿಂದೆಲ್ಲಾ ಭಯಾನಕ ಪ್ಲೇಗ್‌ ರೋಗ ಬಂದಾಗ ಊರುಗಳು ಸ್ಮಶಾನವಾಗುತ್ತಿದ್ದವು. ಅಂತ್ಯ ಸಂಸ್ಕಾರಕ್ಕೆ ತೆರಳಿದರೆ ಸ್ಮಶಾನದಲ್ಲಿಯೇ ಒಂದಿಬ್ಬರು ಅಸು ನೀಗುತ್ತಿದ್ದರಂತೆ. ಈ ಪ್ಲೇಗ್‌ ಮಹಾ ಮಾರಿಯನ್ನು ಓಡಿಸುವ ಸಂಬಂಧ ನಂಬಿಕೆಯೊಂದು ಜಾರಿಗೆ ಬಂದಿದ್ದು, ಅದಕ್ಕೆ ಹೋಳಿಗೆ ಅಮ್ಮ ಆಚರಣೆ ಸ್ವರೂಪ ನೀಡಲಾಗಿದೆ. ಮನೆಮಂದಿಯೆಲ್ಲಾ ಕುಳಿತು ಹೋಳಿಗೆ ಉಂಡು ಮಹಾ ಮಾರಿಗೂ ಒಂದಿಷ್ಟುನೈವೇದ್ಯ ಮಾಡಿ ಆಕೆಯ ಸಂತೃಪ್ತಿಗೊಳಿಸಿ ಮುಂದಿನ ಊರಿಗೆ ಹೋಗು ಎಂದು ಕಳಿಸಿಕೊಡುವ ಆಚರಣೆ ಇದಾಗಿದೆ.

ಮೊರವೊಂದರಲ್ಲಿ ಹೋಳಿಗೆ, ಬೇವಿನ ಸೊಪ್ಪು, ಕರಿ ಬಳೆ, ಅರಿಶಿಣ ಕುಂಕುಮ ಎಲ್ಲ ಇಟ್ಟು ಕಾಯಿ ಹೊಡೆದು ಪೂಜಿಸಲಾಗುತ್ತದೆ. ನಂತರ ಆ ಮೊರವನ್ನು ತಂದು ಊರ ಮುಂದಿನ ಗುಡ್ಡೆಕಲ್ಲು ಬಳಿ ಇಡಲಾಗುತ್ತಿತ್ತು. ಇಡೀ ಊರವರೆಲ್ಲ ತಂದು ಒಂದೆಡೆ ಇಟ್ಟಅಮ್ಮನ ಮೊರಗಳ ಗಾಡಿಯೊಂದರಲ್ಲಿ ತುಂಬಿ ಕೊಂಡು ಹೋಗಿ ಗಡಿ ದಾಟಿಸಿ ಬರಲಾಗುತ್ತಿತ್ತು. ಅಲ್ಲಿಗೆ ಮಹಾ ಮಾರಿ ಊರು ಬಿಟ್ಟು ತೊಲಗಿತೆಂಬ ನಂಬಿಕೆ ಜನರದ್ದು. ಇದೇ ಮಾದರಿಯನ್ನು ಇಂದಿಗೂ ಆಚರಣೆ ಮಾಡಿಕೊಂಡು ಬರಲಾಗುತ್ತೆ.

ಬಂಡೀಪುರದಲ್ಲೊಂದು ದಿ ಎಲಿಫೆಂಟ್ ವಿಸ್ಪರರ್ಸ್ ಕಥನ: ಅನಾಥ ಆನೆ ಮರಿಗೆ ಆಸರೆಯಾದ ಕಾವಾಡಿ ದಂಪತಿ

ಹಳೇ ಚಿತ್ರದುರ್ಗ ಪ್ರದೇಶವಾದ ಕರುವಿನಕಟ್ಟೆವೃತ್ತದಲ್ಲಿ ಮಂಗಳವಾರ ಈ ರೀತಿಯ ಹೋಳಿಗೆ ಅಮ್ಮನ ಮೊರಗಳು ಕಂಡು ಬಂದವು. ವೃತ್ತದಲ್ಲಿ ಹೋಳಿಗೆ ಮೊರ ಇಟ್ಟಮಹಿಳೆಯರು ಪೂಜೆ ಸಲ್ಲಿಸಿ ವಾಪಾಸ್ಸಾಗುವ ದೃಶ್ಯ ಕಂಡು ಬಂತು. ಇಡೀ ಪ್ರದೇಶದ ಪ್ರತಿ ಮನೆಯಲ್ಲೂ ಹೋಳಿಗೆ ಅಮ್ಮ ಆಚರಣೆ ಮಾಡಿದ್ದರಿಂದ ಸಾವಿರಾರು ಮೊರಗಳು ಕರುವಿನಕಟ್ಟೆವೃತ್ತದಲ್ಲಿ ಜೋಡಿಸಲ್ಪಟ್ಟವು. ರಾತ್ರಿ 9ರ ನಂತರ ಈ ಮೊರಗಳನ್ನು ಮದಕರಿಪುರದ ಸಮೀಪ ಇಟ್ಟು ಬರಲಾಯಿತು. ದುರ್ಗಕ್ಕೆ ಅಂಟಿದ ಪೀಡೆ ತೊಲಗಿತೆಂಬ ಭಾವನೆ ಜನರಲ್ಲಿ ಮೂಡಿತು.

click me!